ಅವರವರ ಮಾತಲ್ಲಿ
ಅವರಲ್ಲಿಹುದು ಸಮ್ಮತ
ವಾದವೇತಕೋ ಮನುಜ||
ವಾದ ಪ್ರತಿವಾದ
ಧರ್‍ಮಶಾಸ್ತ್ರ ಭಕ್ತಿಯಾರಸ
ಅವರವರಲ್ಲಿಹುದು ಸಮಂಜಸ
ವಾದವೇತಕೋ ಮನುಜ||
ಮಾತು ಮಾತಲ್ಲಿಹುದು
ಮಾಣಿಕ್ಯ ಗೀತ ಘೋಷ
ಸತ್ಯ ಸಾರ್‍ಥಕವಿಹುದು
ಮತ ಭೇದವೇಕಯ್ಯಾ
ವಾದವೇತಕೋ ಮನುಜ||
ದಾಸಾನುದಾಸ ಭಕುತರಿಗಿಲ್ಲಾದ ವಾದ
ವೇಶ ಭಾಷೆ ಕರ್‍ಮಗಳಿಲ್ಲದ
ಅರಿವು ಅರಿವ ಅಂತರಂಗ ಕುಲ
ಸ್ವರೂಪ ಜತನ ಸಂತ ಸಾಧುಗಿಲ್ಲದ
ವಾದವೇತಕೋ ಮನುಜ||
ಆತ್ಮ ಮನನ, ಗುರು ಜ್ಞಾನಕ್ಕಿಲ್ಲದ ವಾದ
ಮಾತಾಗಿ ಕಳೆದಕರ್‍ಮ, ಜನ್ಮಕಿಲ್ಲದ
ವಾದವೇತಕೋ ಮನುಜ||
ಮೌನವೇ ಸತ್ಯ ಸುಂದರ ಬಂಗಾರ
ಆದಿ, ಅಂತ್ಯ, ಶಕ್ತಿಸ್ವರೂಪ
ಮಂದಾರ ಮುಕ್ತಿಗಾನ ನವರಸವಯ್ಯಾ
ಓಂಕಾರ ನಾದರೂಪ ಬ್ರಹ್ಮಾಂಡವಯ್ಯಾ
ವಾದವೇತಕೋ ಮನುಜ
ಮನು ಕುಲ ಕುಲವೆಂತಯ್ಯಾ||
*****