ಹೀಗೊಂದು ಕಾಲವಕ್ಕಾ
ಸುತ್ತ ಮುತ್ತ ಬೆಳ್ಳಕ್ಕಿ ಕುಣಿವ
ಹೀಗೊಂದು ಕಾಲವಕ್ಕಾ
ಭಾವಕೊಂದು ಬಣ್ಣ ತುಂಬಿ
ಚಿತ್ತಾರಕ್ಕೊಂದು ರೆಕ್ಕೆ ಹಚ್ಚಿ
ಲತೆಗೊಂದು ಮೌನಕಟ್ಟಿ
ಏರುಪೇರು ಬಂದ ಸಗ್ಗದಾ
ನಡುವೆ ಕದವ ತಟ್ಟಿ ಕುಣಿವಾ ಕಾಲವಕ್ಕಾ ||ಹಿ||
ಬಿಳಿ ಮುಗಿಲ ಹಾರಕತ್ತಿ
ತೊಮ್ ತನನ ತಾನನ ಜಾರಿಯಕ್ಕಾ
ಬಂಗಾರ ಚುಕ್ಕಾಣಿ ಕಳೆವ
ಹಕ್ಕಿ ಭಾವ ಚಿಕ್ಕಿ ಮೆರೆವ
ಗಾಳಿ ತೂರಿ ಆಡಿ ಮೆಟ್ಟಿ
ರೆಂಬೆ ಕೊಂಬೆ ಜೀವ ತೂರಿ ನಡೆವ ||ಹಿ||
ರಂಗು ರಂಗಿನ ಪಟಕಟ್ಟಿ
ಸೋಲುಗೆಲುವು ಅಣೆಸುತ್ತಿ
ಜೋಗುಳವ ತೂಗಿ ಕಾಡಿ
ಚಿನ್ನಾರಿ ಪುಕ್ಕ ಹಚ್ಚಿ ಕುಣಿವ
ಭಾಗ್ಯದಾ ಬಾಗಿಲ ತೆರೆದಾ ಅವ ಕೂಡ
ತುಟ್ಟಿ ಹರಿವ ಹಾಯಿ ಹಾಡಿ ಕರೆವ ಕಾಲವಕ್ಕಾ ||ಹಿ||
ಗೀತ ಗಾನ ಮೌನ ಚೆಲ್ಲಿ
ಕಣಕ್ಕೆ ಗಾಳ ಬಾಳತಾಗಿ
ಜಾಣ ಕೇಳೋ ಸುಗ್ಗಿ ತೂಗಿ
ಸಿಂಗಾರ ಮನಕೆ ಮುತ್ತು ಹೆಣೆದು
ದಾನ ಸೋಗಸಾರಿ ಜರಿದು ನಿಂದ
ಬಾಣಿ ಬಿಲ್ಲು ಕಲಿಯ ಹಿಡಿದುವಕ್ಕಾ ||ಹಿ||
****