ಅವಳು ಯೌವ್ವನದಲ್ಲಿ ವಿಧವೆಯಾದವಳು. ನೃತ್ಯ ಅವಳ ವೃತ್ತಿಯಾಗಿತ್ತು. ಅವಳು ವೇದಿಕೆಯಲ್ಲಿ ರಾಧೆಯಾಗಿ, ಕೃಷ್ಣನೊಡನೆ ಶೃಂಗಾರ ರಸದಲ್ಲಿ ಲೀನವಾಗುತಿದ್ದಳು. ಶಕುಂತಲೆಯಾಗಿ ಪ್ರೇಮ ಪಾಶದಲ್ಲಿ ಸಿಲುಕುತ್ತಿದ್ದಳು.
ರಾಮಾಯಣದಲ್ಲಿ, ಸೀತೆಯಾಗಿ ರಾಮಪಟ್ಟಾಭಿಷೇಕದಲ್ಲಿ ಮೆರೆಯುತ್ತಿದ್ದಳು. ಜನರು ಆಡಿಕೊಂಡಿದ್ದು “ಹೀಗೆ ಅವಳು ಬಾಳಲ್ಲಿ ಕಳೆದುಕೊಂಡದ್ದನ್ನು ವೇದಿಕೆಯಲ್ಲಿ ಹುಡುಕುತ್ತಿದ್ದಾಳೆ.”
ಇನ್ನು ಕೆಲವರು ಅಂದದ್ದು “ಇವಳು ವಿಧವೆಯಾಗಿ ಮಾಡಬಾರದ್ದೆಲ್ಲಾ ಮಾಡುತ್ತಿದ್ದಾಳೆ. ಕಾಲ ಕೆಟ್ಟುಹೋಯಿತು ಎಂದು”.
*****