ಕುಲಬಂಧು ಕೆಲದಲ್ಲೇ
ಪರದೇಶಿಯಾಗುವನು
ಬದುಕಿದ್ದು ನಿಷ್ಕ್ರೀಯನು
ಜಡ ದೇಹದೊಡೆಯನು
ಹಗಲಿರುಳು ಮಲಗಿರಲು
ಸಾಧನೆಯು ಹೇಗೆ?
ಗಾಳಿ ಗೋಪುರ ಕಟ್ಟಿ
ಮನಸಲ್ಲೇ ಮೆಲ್ಲೆ
ಗೂಡಂಗಡಿಯ ಕಟ್ಟೆ
ಹಾದಿ ಬೀದಿಯ ಚಿಟ್ಟೆ
ತೊಟ್ಟಿಕ್ಕಿ ಜಿನುಗುತಿದೆ ಸಂಪತ್ತು ರಾಶಿ
ಅರಿತಿದ್ದೊ ಅಪವ್ಯಯ
ದಿನನಿತ್ಯ ಸೋಸಿ
ತರವಲ್ಲ ತಗಿ
ಕುಳಿತು ತಿನ್ನುವ ತವಕ
ಕಲ್ಲಾಗಿ ಕರ್ಮಕ್ಕೆ
ಹೊರೆಯಾಗಿ ಧರ್ಮಕ್ಕೆ
ಹಂಗಿನಾಳಾಗಿ ಜೀವಿತಕ್ಕೆ
ಕಾಯಕದ ಸಹವಾಸ
ಸಮೃದ್ಧಿ ಅವಾಸ
ಏಳು ಎದ್ದೇಳು
ಹೋರಾಟ ಬದುಕು
ಸಂಭ್ರಮದ ಹೊಳೆಯಲಿ ಈಜು ಮಿಂದಾಡು
ಬಂದದ್ದು ಬರಲೆಂಬ ಭಂಡ ಧೈರ್ಯವು ಇರಲಿ
ಸಾಧನೆಯ ಹಾದಿಯಲಿ ಕುಶಲತೆಯು ಬರಲಿ