ಕಲ್ಯಾಣನಗರದಲಿ ಎಲ್ಲಾ ಗಣಂಗಳು

ಕಲ್ಯಾಣನಗರದಲಿ ಎಲ್ಲಾ ಗಣಂಗಳು
ನಲ್ಮೆಯಲಿ ಕೇಳುತ್ತಲೀ
ಅಲ್ಲಿಗಲ್ಲಿಗೆ ಶಿವಶರಣರಾಗ ಕೂಡುತಲಿ
ಬಲ್ಲಿದ ಬಸವನ ಮಹಿಮೆ ಪಾಡುತಲಿ
ಎಲ್ಲಾ ಜನರು ಕೈಮುಗಿದು ಕೇಳುತ್ತಲಿ ||೧||

ಬಿಜ್ಜಳರಾಜಗೆ ಉರಿಬಾಳ ಬಿದ್ದಿತ್ತು
ಮಜ್ಜಿಗೆ ಮಾರುವ ಕೃಷ್ಣನು ಬಂದಾ
ಸೋಜಿಗದೀ ಮಾತು
ಸಾಜವು ತಿಳಿಲಿಲ್ಲಾ
ಇದರರ್ಥ ಬಲ್ಲವನೆ ಬಲ್ಲಾ ||೨||

ಬತ್ತೀಸಾಯೆಂಬುವ
ನೆತ್ತಿಯೊಳು ಬಿರಿದಿತ್ತು
ನೆತ್ತಿಯೊಳದರ ವಸುಗೆ
ಉತ್ತಮ ಶರಧಿಯೊಳೊತ್ತಿಟ್ಟು ನೋಡಲು
ಎತ್ತನೋಡಲು ಬೈಲು ಬೈಲದು ಕೂಡದೆ ||೩||

ಕರಿಯ ಮಲ್ಲಿಗೆ ಹೂವು ಅರಳಿ ಕಲ್ಯಾಣದಲಿ
ಅಲ್ಲಮಪುಭುವಿನ ಕಾಣುತಲಿ
ಗೊಲ್ಲತೇರು ಹಾಲ್ಬೆಣ್ಣಿ ಮಾರುತಲಿ
ಬಿಲ್ವ ಪತ್ರಿದಳ ಹುಟ್ಟುತಲಿ
ಲೋಕಕೆ ಆಶ್ಚರ್ಯ ತೋರುತಲಿ ||೪||

ಬನ್ನಿಯ ಮರದೊಳು ಬೇವಿನ ಮರ ಹುಟ್ಟಿ
ಚನ್ನಾಗಿ ಹಾಲ್ಗರಿಯುವದು ಕಲ್ಯಾಣನಗರದಲಿ
ಸಾಲ ದೀವಿಗಿ ಬೆಳಕಿನಲಿ ನಲಿನಲಿದಾಡುತಲಿ
ಶಿಶುನಾಳಧೀಶನು ಕೇಳುತಲಿ ಗುರುಗೋವಿಂದನ ಧ್ಯಾನದಲಿ
ಕರ್ಪುರ ಬೆಳಗುತಲೀ ಬೆಳಗಾಗುತಲಿ ||೫||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೩
Next post ಕಲ್ಯಾಣನಗರದಲಿ ಅಲ್ಲಮಪ್ರಭುವಿನ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…