ಎಷ್ಟು ಕಾಡುವವು ಕಬ್ಬಕ್ಕಿ
ಹೊಲದೊಳಿರುವನು ಒಬ್ಬಾ || ಪ||
ಆಕಡಿಯಿಂದ ಬಂದಾವು ಮೂರಹಕ್ಕಿ
ಅವನ್ನ ಕಾದು ಕಾದು ನನಗೆ ಬೇಸರಕಿ ||೧||
ಕಬ್ಬಕ್ಕಿ ಬರತಾವ ಸರಬೆರಕಿ
ಕವಣಿ ಬೀಸಿ ಬೀಸಿ ಬಂತೆನಗೆ ಬೇಸರಕಿ ||೨||
ಆರು ಮೂರು ಒಂಭತ್ತು ಹಕ್ಕಿ ಬಹಳ ಬೆರ್ಕಿ
ಅದರೊಳಗೊಂದೈತಿ ಮೂಬೆರ್ಕಿ ||೩||
ತುದಿಕಾಳ್ತಿಂದು ಹೊಡಿತಾನು ಗುರಕೀ
ಶಿಶುನಾಳಧೀಶನ ಮುದಿಹಕ್ಕಿ ||೪||
ಗುರುಗೋವಿಂದನ ಬಳಿ ತಾವ್ ದರಮುಕ್ತಿ
ಬೇಡುತ ಕಾಡ್ವವು ಆ ಹಕ್ಕಿ ||೫||