ನೀ ಬೆಳೆಯಬೇಕು ಎತ್ತರ
ನಿನ್ನ ಎತ್ತರಕ್ಕಾದರೂ,
ಶೂನ್ಯ ದಿಂದಾಚೆಗೆ!
ಎತ್ತರಕ್ಕೆ, ಏರಿ, ಸುತ್ತ ನೀ ನೋಡು
ಅಷ್ಟಿಷ್ಟು ಹಿತ ನಿನಗೂ, ನನಗೂ,
ಅದಕಾಗಿ ಇರಬೇಕು ಅವನಿರುವ ತಾಣ
ಏಳೆತ್ತರಗಳ ಮೇಲೆ!
ಹತ್ತುವ ಖುಷಿ, ಅದರ ಗಮ್ಮತ್ತು,
ಒಂದೊಂದು ಹಂತವೂ, ಆಸ್ತಿಕ,
ನಾಸ್ತಿಕ, ವಿಚಾರ, ವಿವೇಕ, ಏನಾದರೇನು?
ಅದು ಪರಿಪೂರ್ಣ.
ಅಲ್ಲಿಂದ ಕಾಣುವ ಕುಬ್ಜತೆ? ಗಾತ್ರ?
ಅಜ್ಞಾನದ ಹರವು, ಅದು. ಅ-ಪರಿಪೂರ್ಣ.
ಎತ್ತರವೇ ಜ್ಞಾನ, ಏಳೆತ್ತರವೇ ಮೌನ
ಬೆಳವಣಿಗೆಗೆ ಸೋಪಾನ!
ಆ ಎತ್ತರಕ್ಕೆ ಏರುವುದು, ಆಗದಿರೆ ಬಿಡು,
ನಿನ್ನೆತ್ತರಕೆ? ಇಳಿಯುವದು ಇದ್ದೇ ಇದೆ
ಇಳಿವಯಸಿನಲಿ.
*****