ಉಮರನ ಒಸಗೆ – ೪೭

ಹಳ್ಳಕೊಳ್ಳಗಳಿಂದೆ-ಕಳ್ಳು ಹೆಂಡಗಳಿಂದೆ- ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ, ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ? *****

ಭಗವಿದ್ದಿತು

ಭಗವಿದ್ದಿತು ಭಗವಂತನಿದ್ದನು ಫ್ರಾಯ್ಡನು ಬರುವ ವರೆಗೆ ಕಾಮವಿದ್ದಿತು ಪ್ರೇಮವಿದ್ದಿತು ರೋಮಾಂಚನವು ಇದ್ದಿತು. ಹೆಣ್ಣುಗಂಡುಗಳಿದ್ದರು ಸ್ತ್ರೀಲಿಂಗ ಪುಲ್ಲಿಂಗಗಳಿದ್ದುವು ಅಂಗನೆಯರಿದ್ದರು ಅನಂಗನು ಇದ್ದನು ಅವನ ಕೈಯಲಿ ಕಬ್ಬಿನ ಬಿಲ್ಲು ಇದ್ದಿತು ಲಿಂಗವಿದ್ದರೂ ಲೈಂಗಿಕತೆಯಿರಲಿಲ್ಲ ಫ್ರಾಯ್ಡನು ಬರುವ ವರೆಗೆ...

ಪ್ರಶ್ನೆ-ಉತ್ತರ

ಮಾಮರ ತಳಿತಿಹುದೇತಕ್ಕೆ?- ಕೋಗಿಲೆ ಸರಗೈಯಲಿ ಎಂದು. ಹೂಗಿಡ ಮಲಗಿಹುದೇತಕ್ಕೆ?- ತುಂಬಿಯು ಬಂಬಲಿಸಲಿ ಎಂದು ಪಾರ್ಕೊಳು ಹಚ್ಚನೆ ಹಸುರೇತಕ್ಕೆ?- ಗರಿಕೆಯ ರಸವನ್ನು ಹೀರುತ್ತ ಭಾವಾವೇಶವ ಹೊಂದಲಿ ಎಂದೇ ಕವಿಜನ ನಿಟ್ಟಿಸಿ ಬಾನತ್ತ! *****