
ಕಣ್ಣೆದುರೇ ಕಣ್ ಮರೆಯಾಗುತಿದೆ ಮಾತು ಕಲಿಸಿದ ಕನ್ನಡವು ನಿಂತ ನೆಲವು ಪರದೇಶಿಯಾಗುತಿದೆ ಜನ್ಮ ಕೊಟ್ಟು ಕರ್ನಾಟಕವು || ಪಲ್ಲವಿ || ಇಲ್ಲೆ ಹುಟ್ಟಿ ನದಿಯಾಗಿ ಹರಿದ ನಮ ಕಾವೇರಮ್ಮ ಮುನಿದಿಹಳು ಕನ್ನಡಿಗರ ಅಭಿಮಾನ ಶೂನ್ಯಕೆ ಅನ್ಯರ ಮನೆಯನು ಸೇರಿಹಳು ...
ನುಡಿಯೊಳಗಣಾ ನಿನ್ನ ನುಡಿಯಲಿ ಕನ್ನಡತನವು ನಲಿವಾಗಿರಲಿ ಸದಾ ನಡೆಯೊಳಗಣಾ ನಿನ್ನ ನಡೆಯಲಿ ಕನ್ನಡತನವು ಹಸಿರುಸಿರಾಗಿರಲಿ ಸದಾ ನೀ ಹುಟ್ಟಿದ ಈ ಮಣ್ಣಿನ ಕಣ್ಣಾಗಿ ಜನುಮ ಜನುಮಕೂ ನಿನ್ನ ಕೀರ್ತಿ ಬೆಳಗಲಿ ಹಣತೆಯಾಗಿ ಸದಾ ದುರಭಿಮಾನದ ಕೊಳೆಯ ತೊಳೆದೊಗೆದ...














