ಬಣ್ಣ ಬಣ್ಣ ವರ್ಣ ವಿವರ್ಣಗಳ ಬಿಳಿ ಕರಿ ಮೋಡಗಳಾಚೆ ತಿಳಿ ನೀಲಿಯಾಕಾಶವೂಂದಿದೆ ಮುಖಗಳು ಒಂದೋ ಮೂರೋ ಹತ್ತೋ ಕೈಗಳು ಎರಡೋ ನಾಲ್ಕೋ ಇನ್ನೆಷ್ಟೋ ವಾಹನ ಆನೆ ಎತ್ತೋ ಇಲಿಯೋ ಹುಲಿಯೋ ಹಾರ ಕಿರೀಟ ವಸ್ತ್ರಾಭರಣಗಳು ಝಗಝಗಿಸುವ ಮೂರ್ತಿ ರೂಪಗಳು ಭವ್ಯದೇಗುಲಗ...

ಚಿತ್ರದುರ್ಗವೆಂದೊಡನೆ ಮನಸ್ಸಿನಲ್ಲಿ ಮೂಡುವ ಏಳು ಸುತ್ತಿನ ಕೋಟೆಗಳ ಚಿತ್ತಾರ, ಹೆಬ್ಬಂಡೆಗಳು, ಕೋಡುಗಲ್ಲುಗಳು, ಉಯಾಲೆ ಮಂಟಪ, ದೀಪಸ್ತಂಭ, ಕಲ್ಲತೋರಣಗಳು, ಭೀಮಗಾತ್ರದ ಬಂಡೆಗಳಲ್ಲೇ ಒಡಮಾಡಿದ ದೇವಾಲಯಗಳು, ಕೆರೆ ಹೊಂಡಗಳು, ಬೃಹನ್ಮಠ, ಇವನ್ನೆಲಾ ನ...

ಮಜಲು ಮಜಲಿನಾ ಎತ್ತರದ ಮಹಲು ಆಕಾಶವ ನುಂಗಿತ್ತು ಸೂರ್ಯಚಂದ್ರರ ಬಾಚಿತ್ತು ಗಾಳಿಯ ರಾಚಿತ್ತು ಗುಡಿಸಲು ವಾಸಿಗೆ ಕಣ್ಣಿಗೆ ಕತ್ತಲು ಕಟ್ಟಿತ್ತು ಸೂರ್ಯಚಂದ್ರ ನಕ್ಷತ್ರ ಆಕಾಶಕ್ಕೆ ದುಡ್ಡು ಕೊಂಡಿ ಹಾಕಿತ್ತು *****...

ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ ಶಕ್ತಿಗಿದೋ ನಮನ, ಸುತ್ತಲು ಸಾಗರವಸ್ತ್ರವ ಧರಿಸಿದ ಭರ್ತೆಗಿದೋ ನಮನ; ಕೋಟಿ ಕೋಟಿ ಕಣ್‌, ಕೋಟಿ ಕೋಟಿ ಕೈ ತಾಳಿ ನಿಂತರೂನು ಸಾಟಿಯಿಲ್ಲದಾ ಏಕರೂಪಾದ ತಾಯಿಗಿದೋ ನಮನ. ಮರಗಿಡ ಆಡಿ ತೀಡುವ ಗಾಳಿಯ ಪರಿಮಳ ನಿನ್ನುಸಿ...

ನಿಮ್ಮ ದಾಹಕ್ಕೆ ಎಳೆ ನೀರು ನಾವು ಕೊಚ್ಚಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ಸಿಹಿ ಕಬ್ಬು ನಾವು ಹಿಂಡಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ನಿಂಬೆ ಹಣ್ಣಿನ ಶರಬತ್ತು ನಾವು ಬಿಡದೆ ಕುಡಿದಿರಿ ನಮ್ಮನ್ನು...

ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ ತಂಪಾಗಿ ಜೀವ; ಕನಸುಗಳ ಆಕಾಶ- ಗಂಗೆಯಲಿ ಮೀಯು...

ಕಾಲೇಜಿಗೆ ಹೋಗಿ ಎರಡು ಪ್ರಾಸ್ಪೆಕ್ಟ್ ಕೊಂಡು ಸೀದಾ ಆಟೋ ಹತ್ತಿ ಪರಿಷತ್ತು ಭವನದ ಮುಂದೆ ಇಳಿದಳು. ಇದೇ ಮೊದಲ ಬಾರಿ ಸಾಹಿತ್ಯ ಪರಿಷತ್ತು ಭವನ ನೋಡುತ್ತ ಇರುವುದು. ಅದರ ಪಕ್ಕದಲ್ಲಿದ್ದ ಕಲಾಭವನವನ್ನು ನೋಡಿದ್ದಳು. ಆದರೆ ಸಾಹಿತ್ಯ ಪರಿಷತ್ತು ಭವನ ಇ...

ಚರಿತೆಯ ಚಮತ್ಕಾರದಿಂದೊಡೆಯಿತೆಮ್ಮ ಜನ ಎರಡಾಗಿ: ಆದರೊಂದೇ, ನಿಜಕು ಜನತೆಯೊಂದೆ: ಹೊರಗಣಿನಿಸಿನ ಭೇದ ಭೇದವೇ? ಆ ತಂದೆ ಇಬ್ಬರಿಗು ದೈವವೆನೆ, ಒಪ್ಪದಿದೆ ಮೂಢ ಮನ. ಒಂದು ಮುಸ್ಲಿಮರೊಂದೆ: ಇದನರಿಯಬೇಕು ಜನ: ಮೆಲಿನಾ ಬಾನೊಂದೆ; ನಡೆವ ನೆಲ ತಾನೊಂದೆ; ಕ...

1...89101112...73

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...