
ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ ಓಲಾಡುತ್ತಿವೆ-ಏನೂ ಮಾಡುವಂತ...
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ. ಶ್ಯಾಮರಾಯರ ಮೊದಲ ಪತ್ನಿ ವಿಧಿವಶರಾ...
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ ವರುಷಗಳಾದವು. ಹಳ್ಳಿಯ ಜೀವನ ನಮಗೆ ಈಗ ಒ...
ಗುಲ್ಬರ್ಗದಿಂದ ಹೊರಟಾಗ ಕೂರಲು ಸೀಟೇನು ಸಿಗಲಿಲ್ಲ. ನಿಂತೇ ಹೊರಟಿದ್ದಾಯಿತು. ಅಷ್ಟೊಂದು ಚಾರ್ಜ್ ಕೊಟ್ಟು ಲಕ್ಷುರಿ ಬಸ್‌ನಲ್ಲಿ ನಿಂತು ಪ್ರಯಾಣಿಸುವುದೆಂದರೆ ಮನಸ್ಸಿಗೆ ಅಸಾಧ್ಯ ಕಿರಿಕಿರಿ. ಆದರೆ ಅನಿವಾರ್ಯ, ಆದಷ್ಟು ಬೇಗ ಊರು ಸೇರಬೇಕು ನೂರಾರು ...
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ ಬಯಕೆಯೆದು...
ಕಂಬದಹಳ್ಳಿಗೆ ಭೇಟಿ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು ಬೇಡವೆಂದು ಬದಿಗೊತ್ತಿ ಚ...
“The best of you is he who behaves best towards the members of his family” (The Holy Prophet) ವಾರದ ಸಂತೆ. ಬೆಳಿಗ್ಗೆ ೯ ಗಂಟೆ ಅಗುವುದರೊಳಗೆ ಪೇಟೆ ಇಡೀ ಜನಜಂಗುಳಿಯಿಂದ ತುಂಬ ತೊಡಗಿತು. ಜನರ ನೂಕು ನುಗ್ಗಲಿನಿಂ...
ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ...























