ನಾಟಕವೊಂದರ ಹಾಡುಗಳು – ೨

ಮಾನವನ ಮಂಕುಗವಿಸುವ ಯೋಚನೆಗೆ ಮರುಗಿ ಹೊರಹರಿದನವನು ಅಂತರವ ಕ್ಷಮಿಸಿ, ಗೆಲಿಲಿಯನ್ ಗಲಭೆ ಗೊಂದಲಗಳಲ್ಲಿ; ಬ್ಯಾಬಿಲೋನಿನ ನಕ್ಷತ್ರಪ್ರಭೆ ಸೃಷ್ಟಿಸಿತು ಆಕಾರವಿರದ ಕಲ್ಪಕ ಕತ್ತಲನ್ನು; ಸತ್ತ ಕ್ರಿಸ್ತನ ನೆತ್ತರಿನ ಕಂಪು ಕೊಚ್ಚಿತು ಎಲ್ಲ ದೈವಿಕ ಸಹನಶೀಲತೆಯನು ವ್ಯರ್‍ಥಗೊಳಿಸಿತು...

ನಾಟಕವೊಂದರ ಹಾಡುಗಳು – ೧

ಹಾಡು - ೧ ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ ಡಯೋನಿಸಸ್ಸನು ಸತ್ತಾಗ, ಅವನ ಮೈಯಿಂದ ಹೃದಯವ ಕಿತ್ತು ಕೈಯೊಳು ಅದನ್ನು ಹಿಡಿದಾಗ, ಹಾಡಿದರೆಲ್ಲಾ ಕಲಾದೇವಿಯರು ಮಹಾಯುಗಾದಿಯ ಚೈತ್ರದಲಿ, ದೇವರ ಸಾವೂ ಆಟ ಎಂಬಂತೆ ಕೂಡಿ ಹಾಡಿದರು...

ಗೋಪುರ ಗೃಹ

ಏನು ಮಾಡಲಿ ಕಟ್ಟಿಕೊಂಡು ಈ ಅಸಂಬದ್ಧವನ್ನ - ಓ ನನ್ನ ಹೃದಯವೇ, ಅಶಾಂತ ಹೃದಯವೆ ಹೇಳು - ನಾಯಿಬಾಲಕ್ಕೆ ಕಟ್ಟಿದ ಹಾಗೆ ಪಟ್ಟಾಗಿ ನನಗೆ ಬಿಗಿದಿರುವ ಈ ವಿಕಟ ಚಿತ್ರವನ್ನ ಜರ್ಝರಿತವಾದ ಈ ವಾರ್‍ಧಕ್ಯವನ್ನ?...

ಬೈಜಾಂಟಿಯಮ್ಮಿಗೆ ಯಾನ

೧ ಮುದುಕರಿಗೆ ತಕ್ಕ ನಾಡಲ್ಲ ಅದು. ಪ್ರಾಯದ ಹೆಣ್ಣು ಗಂಡುಗಳೆಲ್ಲ ತೋಳತೆಕ್ಕೆಗಳಲ್ಲಿ, ಹಕ್ಕಿ ಮರಮರದಲ್ಲಿ - ಸಾವಿರುವ ಸಂತಾನ - ಹಾಡಿನುಬ್ಬರದಲ್ಲಿ, ಸ್ಯಾಮನ್ ಮೀನುಗಳ ಪಾತ, ಮೆಕರೆಲ್ ಕಿಕ್ಕಿರಿದ ಕಡಲು, ಗಾಳಿ ನೆಲ ಜಲ...

ಮಗಳಿಗಾಗಿ ಪ್ರಾರ್‍ಥನೆ

ಊಳಿಡುತ್ತಿದೆ ಮತ್ತೆ ಬಿರುಗಾಳಿ. ನನ್ನ ಮಗು ತೊಟ್ಟಿಲಿನ ಕಟಕಟೆ, ಹೊದಿಕೆಗಳ ಮರೆಗಡಗಿ ನಿದ್ದೆ ಮಾಡುತ್ತಿದೆ. ಅಟ್ಲಾಂಟಿಕಕ್ಕೆ ಹುಟ್ಟಿ ಅಟ್ಟಿ ಹಾಯುವ ಗಾಳಿ ಹುಲ್ಲು ಛಾವಣಿ ಮೆದೆಯ ಎತ್ತಿ ಹಾರಿಸದಂತೆ ತಡೆವ ಅಡ್ಡಿಯೆ ಇಲ್ಲ -...

ಪುನರಾವತಾರ

ಹಿಗ್ಗುತ್ತಿರುವ ವೃತ್ತದಾಕಾರದಲ್ಲಿ, ಸುತ್ತುತ್ತ ಸುತ್ತುತ್ತ, ಕೇಳಿಸದು ಡೇಗೆಗೆ ಡೇಗೆಗಾರನ ಕೂಗು; ಕಳಚಿಕೊಳ್ಳುತ್ತಲಿದೆ ಅಂಗಾಂಗ, ಒಟ್ಟಾಗಿ ಹಿಡಿಯಲಾರದ ಕೇಂದ್ರ, ಛೂಬಿಟ್ಟ ಹಾಗಿದೆ ಅನಾಯಕತೆಯನ್ನೇ ಇಡಿಯ ಲೋಕದ ತುಂಬ; ರಕ್ತಮಂದ ಪ್ರವಾಹ ಕಟ್ಟೊಡೆದು ನುಗ್ಗಿದೆ ಮುಗ್ಧತೆಯ ಉತ್ಸವ...

ಈಸ್ಟರ್ ೧೯೧೬

ಕಂಡಿದ್ದೇನೆ ಹಿಂದೆ ಸಂಜೆ ವೇಳೆ ಬ್ಯಾಂಕು ಆಫೀಸಿನಲಿ ಕೆಲಸ ಮುಗಿಸಿ ಹಳೆಯ, ಹದಿನೆಂಟನೆಯ ಶತಮಾನದ ಬಿಳಿಗಪ್ಪು ಬಣ್ಣದ ಮನೆಗಳಿಂದ ಹೊರಬರುತ್ತಿದ್ದವರ ಹೊಳಪು ಮುಖವ. ಬಳಿಗೆ ಬರಲವರು ತಲೆದೂಗಿ ನಕ್ಕು ಅರ್‍ಥವಿಲ್ಲದೆ ಏನೋ ಉಸುರುತ್ತಿದ್ದೆ, ಅಥವ...

ಒಂದು ದ್ರುಢವಚನ

ನಿನ್ನ ದೃಢವಚನವನ್ನು ನೀನು ಪಾಲಿಸಲಿಲ್ಲ, ಹಾಗೆಂದೆ ಆಪ್ತರಾಗಿದ್ದಾರೆ ಇತರರು ನನಗೆ; ಆದರೂ ಮೃತ್ಯು ಕಣ್ಣೆದುರು ನಿಂತಾಗ, ನಿದ್ದೆಯ ಎತ್ತರಗಳನ್ನು ತೆವಳುತ್ತ ಹತ್ತಿರುವಾಗ, ಅಥವ ಮದ್ಯವ ಹೀರಿ ಉದ್ದೀಪ್ತನಾದಾಗ ಹಠಾತ್ತನೆದುರಾಗುವುದು ನಿನ್ನ ಮುಖ ನನಗೆ *****...

ಐರಿಷ್ ವೈಮಾನಿಕನ ಹಾಡು

ಮೇಲೆ ಅಲೆವ ಮುಗಿಲಿನೊಳಗೆ ಹೀಗೇನೇ ಒಮ್ಮೆ ಸಂಧಿಸುವೆನು ನನ್ನ ವಿಧಿಯ ಎಂದು ನಾನು ಬಲ್ಲೆ. ಕಾದುವವರ ಕೂಡ ನನಗೆ ಇಲ್ಲ ಯಾವ ಹಗೆತನ, ಯಾರಿಗಾಗಿ ಕಾದುವೆನೋ ಅವರೊಳಿಲ್ಲ ಒಗೆತನ. ಕಿಲ್ಟಾರ್‍ಟನ್ ಕ್ರಾಸ್ ಎನ್ನುವ ದೇಶ...

ಹಂಸಗಳ ಹಿಂಡು

ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ ಕಾಡುದಾರಿಗಳೆಲ್ಲ ಒಣಗಿವೆ; ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು ಶಾಂತ ಆಗಸವನ್ನು ಪ್ರತಿಫಲಿಸಿದೆ; ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ ಐವತ್ತೊಂಬತ್ತು ಹಂಸ ತೇಲಿವೆ. ನಾನು ಮೊದಲೆಣಿಕೆ ಮಾಡಿದ್ದು...