ಹನಿಗವನ ಮನೆ ಗಂಟೆ ಪರಿಮಳ ರಾವ್ ಜಿ ಆರ್ August 18, 2012June 13, 2015 ಆಫೀಸಿನಲ್ಲಿ ಬೇಕಿಲ್ಲ ಗೋಡೆಗೆ ಗಡಿಯಾರ ತೂಕಡಿಕೆ, ಆಕಳಿಕೆ ನಿಮಿಷಕೆ ಎಷ್ಟು ಬಾರಿ ಎಂದು ಗುಣಿಸಿದರೆ ಸಾಕು ಸಿಕ್ಕೀತು ಮನೆಗೆ ಧಾವಿಸುವ ಗಂಟೆ ***** Read More
ಹನಿಗವನ ಮನಸ್ಸಿದ್ದರೆ ಮಾರ್ಗ ಪರಿಮಳ ರಾವ್ ಜಿ ಆರ್ August 15, 2012June 13, 2015 ತಲೆ ಏಕೆ? ತಲೆ ಬೇಕೆ? ವಿಶಾಲ ಎದೆಯೆ ಸಾಕು ಆಕಾಶಕೆ ತಲೆಯುಂಟೆ! ಮಿನುಗುವುದು ಚುಕ್ಕಿ ಎದೆಯ ತುಂಬ ಭೂಮಿಗೆ ತಲೆಯುಂಟೆ? ಪಚ್ಚೆಪೈರು ಒಡಲ ತುಂಬ ಮಹತ್ತಾದುದರ ಸಾಧನೆಗೆ ಮನಸ್ಸಿದ್ದರೆ ಸಾಕು ಮಾರ್ಗ ತಾನಾಗಿ ಮೂಡಬೇಕು... Read More
ಹನಿಗವನ ಮಳೆ ಪರಿಮಳ ರಾವ್ ಜಿ ಆರ್ August 11, 2012June 13, 2015 ಅತ್ತೆ ಗುಡುಗಿ ಮಾವ ಮಿಂಚಿ ಗಂಡನ ಸಿಡಿಲೆರಗೆ ಹೆಣ್ಣಿನ ಕಣ್ಣಲ್ಲಿ ಮಳೆಯ ಧಾರೆ **** Read More
ಹನಿಗವನ ಮಾತು ಪರಿಮಳ ರಾವ್ ಜಿ ಆರ್ August 8, 2012June 13, 2015 ಮಾತು ಆಡಿದರೆ ಕತ್ತಲಲಿ ಮಿಂಚು ಮೂಡಿ ಬರಬೇಕು ಮಳೆ ಸುರಿದಾಗ ಭೂಮಿಯಲಿ ಬೆಳೆ, ಬೆಳದಂತಿರಬೇಕು **** Read More
ಹನಿಗವನ ಕ್ರಿಕೆಟ್ ೫೪ ಸಂಸಾರ ಪರಿಮಳ ರಾವ್ ಜಿ ಆರ್ August 4, 2012June 13, 2015 ಅತ್ತೆ ಬ್ಯಾಟಿಂಗ್ ಸೊಸೆ ಬೌಲಿಂಗ್ ಮಾವ, ಮಗನ ಫೀಲ್ಡಿಂಗ್, ಇದು ಸಂಸಾರದ ಕ್ರಿಕೆಟ್ ನೋಡಲು ಬೇಡ ಇದಕ್ಕೆ ಟಿಕೆಟ್ ***** Read More
ಹನಿಗವನ ಕಿರುಕುಳ ಪರಿಮಳ ರಾವ್ ಜಿ ಆರ್ August 1, 2012June 13, 2015 ಹೆದ್ದಾರಿ ಸಿಗುವವರೆಗೂ ಪಯಣಿಗನಿಗೆ ಕಿರು ಪಥಗಳ ಕಿರುಕುಳ **** Read More
ಹನಿಗವನ ಕೀಲಿ ಕೈ ಪರಿಮಳ ರಾವ್ ಜಿ ಆರ್ July 29, 2012June 13, 2015 ನನ್ನ ನಿದ್ದೆಗೆ ನಿನ್ನ ಕಣ್ಣೇಕೆ? ನನ್ನ ಹುದ್ದೆಗೆ ನಿನ್ನ ಬುದ್ಧಿ ಏಕೆ? ನನ್ನ ಹಸಿವಿಗೆ ನಿನ್ನ ತೃಪ್ತಿ ಎಕೆ? ನನ್ನ ಅಂತರಾತ್ಮಕೆ ನನ್ನ ಕೀಲಿ ಕೈ ಇರೆ. **** Read More
ಹನಿಗವನ ಕವಿತೆ ಕೂಸು ಪರಿಮಳ ರಾವ್ ಜಿ ಆರ್ July 25, 2012June 13, 2015 ಅಕ್ಷರಕ್ಕೆ ಭಾವ ಕುಲಾವಿ ತೊಡಿಸೆ ಕವಿತೆ ಕೂಸು ಆಡುತ್ತದೆ ಹೃದಯ ಬಯಲಲ್ಲಿ **** Read More
ಹನಿಗವನ ಕವಿ ಪರಿಮಳ ರಾವ್ ಜಿ ಆರ್ July 22, 2012June 15, 2015 ಜಗದ ತುಂಬಿದ ಕೊಡವ ಜನರ ಜಗುಲಿಗೆ ತರುವವ ***** Read More
ಹನಿಗವನ ಕವನ ಪರಿಮಳ ರಾವ್ ಜಿ ಆರ್ July 19, 2012June 13, 2015 ಮನಸ್ಸಿನಲ್ಲಿ ಕವನ ತುಂಬಿದಾಗ ಕವನದಲ್ಲಿ ಮನಸ್ಸು ತುಂಬುತ್ತದೆ ಮನಸ್ಸಿನಲ್ಲಿ ದವನ ತುಂಬಿದಾಗ ಕವನದಲ್ಲಿ ಬಾಳ ಗಮನ ತುಂಬುತ್ತದೆ **** Read More