Home / ಕವನ / ಕವಿತೆ

ಕವಿತೆ

ಏ ಸಖರಿಯೆ ನಾ ಸಖರಿಯೆ ಬ್ಯಾಸರಾದಿತು ಮನವ ಆಸರಿಸಿ ತೈಯ್ಯ ||ಪ|| ಪರಸತಿಗೆ ಒಲಿದು ವಿಸ್ತರದಿ ತಿಳಿದು ಜರಿದು ಪಾದ ಪೋಗಿರಿ ರತಿಸತಿಯ ||೧|| ಬಾರದೆ ನಿಂತು ತೋರಿತು ಪಂಥ ಜಾರಿದ ಪಾದ ಪೋಗಿ ವಿರಚಿಸಲೆನ್ನ ||೨|| ಶಿಶುವಿನ ಈಶ ಅಸಮ ಪ್ರಕಾಶ ರಸಿಕ ಗೋ...

ತೇರು ಸಾಗಿತು ನೋಡೆಲೆ ನೀರೆ ಸರಸಿಜಮುಖಿ ಬಾರೆ ||ಪ.|| ಚಾರುತರದ ಚೌಗಾಲಿರಲು ಸ್ತವ ಮೀರಿದ ಮಹಾಪಕಿ ದಾರಿಗೆ ಪೋಗುವ ||ಅ.ಪ.|| ಕಳಸದ ಕೆಳಗೆ ಮಾರು ಪಟಾಕ್ಷಿ ಥಳಥಳಿಸುವ ಮಿಂಚಿನ ನಿಟಲಾಕ್ಷಿ ಬಲಿದು ಬ್ರಹ್ಮನ ನೆಲೆಯೊಳೊಪ್ಪುವ ಬಲು ಸುಳಿಗಾಳಿಗೆ ನಲಿ...

ನೋಡಿ ತಡೆಯಲಾರದೆ ಕೇಳಿದೆ ಕೂಡಿ ಗಡ ಕಾಡಬ್ಯಾಡಾ ಬೇಡಿದ್ದು ಕೊಡುವೆ ||ಪ|| ಹರಿಹರಪುರನಿಗೆ ಕ್ಷೀರವಿತ್ತು ಸಲಹಿದೆ ಚಾರುತನದಲಿ ಶ್ರುತಿ ಸಾರುತಿದೆ ನೋಡಿ ||೧|| ಮೂರುಗಿರಿ ಮೇಲಕೆ ಏರಿನೊಳು ವರ್ಣಿಸಿ ನೀರಿಗ್ಹೋಗೋ ದಾರಿಯೊಳು ಜೇರುಗಿಂಡಿಯೊಳು ಮಾರಿ...

ಹೇಮರೆಡ್ಡಿ ಮಲ್ಲಮ್ಮ ರೆಡ್ಡಿಕುಲಧರ್ಮ ಉದ್ಧಾರಮಾಡಿದೆಯಮ್ಮಾ || ಪ || ನಿನ್ನ ಭಕ್ತಿಭಾಗ್ಯದ ನೇಮ ಮಲ್ಲಯ್ಯನ ಕಟ್ಟಿದ ಪ್ರೇಮ ಶ್ರೇಷ್ಟವಾಗಿ ತೋರುವದು ರಡ್ಡಿಕುಲಧರ್ಮ ಶ್ರೀಶೈಲ ನಿನಗಾಗಿದೆ ಕಾಯಮ್ಮ ||ಅ.ಪ.|| ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ ಗಂಡ...

ನಳಿನಾಕ್ಷಿಯ ಕಂಡೆ ನಾ ತಿಳವಳ್ಳಿಯ ಕಳಿಯುಳ್ಳ ಮೋಜಿನ್ಹೆಣ್ಣ ಹೊಳಿವ ಚಂದುಟಿ ಎಳಿವ ಮುಡಿ ಥಳ ಥಳ ಪದಕ ಒಪ್ಪಿನ ಜಾಣೆ ತನ್ನ ಕಲಶ ಕುಚಯುಗದಲಿ ಸರಿಯ ಗರತಿಯರೋಳು ಮೇಲ್ ||೧|| ಕುಸುಮಶರನ ರಾಣಿಯೋ ಕೊರಳೆಸೆವ ಪಲ್ಲವ ಪಾಣಿಯೋ ಬಿಸಿಜಿಕೊರಕ ಸ್ಥಾನವೋ ಯೋಚ...

ಓದುವವ್ಗ ಎಚ್ಚರ ಇರಬೇಕು ಅಭವ ಮೆಚ್ಚುವ ತೆರದಿ ಅರ್ಥವ ಪೇಳಿ ಸದ್ಭಕ್ತರಿಗೆ ಶುಭ ಈ ಭವಬೇಧವಳಿದು ಸ್ವರ್ಗದ ಸಭೆಯು ಹೌದೆನ್ನುವಂದದಿ ಭಕ್ತಿಭೂಮಿ ಬೆಳೆಯದವರಿಗೆ ಬಹು ಯುಕ್ತಿಯಿಂದಲಿ ಮುಕ್ತಿಲಲನೆ ಒಲಿಸಿ ತಿಳಿದವರಿಗೆ ಯುಕ್ತವಾಗಿ ವಿರಕ್ತಿಮಾರ್ಗದಿ ತ...

ಕೇಳು ಕೇಳಿಂದ್ರಜಾತಾ ಚಂದ್ರಹಾಸಾ ಏಳು ವರುಷದಾತಾ || ಪ || ಸಾಲಿಬರಿಯಲ್ಹೋಗಿ ಕಲಿತನಕ್ಷರವ ಸಾಲಿಗ್ರಾಮದ ಶಿಲೆಯು ಬಾಲಕನೀತಾ || ೧ || ಅಷ್ಟೆರಡು ವರುಷವಾಗಿ ಪಟ್ಟವ ಕಟ್ಟಿ ಕೊಟ್ಟ ಕಾರ್ಯವನು ಬೇಗ ದಿಟ್ಟ ಕಲಿಂಗನ ಸಂತಾನ ಕೀರ್ತಿಗಳನೆಲ್ಲಾ ದುಷ್ಟಬು...

ಅಸಲ್ ವಲಿ ಬಹು ಕುಶಲದಲಿ ದೇಹಬಿಟ್ಟಾರೋ ಬಸನಾಳ ಗ್ರಾಮದಲಿ ಹಸನಾಗಿ ಭಜಿಸುವೆ ರಸಿಕರು ಕೇಳರಿ ಕಸರಿಲ್ಲೇ ಕವಿತಾದಲ್ಲೇ ||೧|| ಶಶಿಧರ ಶಂಕರ ಸೂರ್ಯನ ಕಿರಣ ವರ್ಣಿಸುವೆ ನಿಮ್ಮ ಮಹಾತ್ಮದಲಿ ಮಹಾತ್ಮದಲಿ ಮಾತೀನ ಕಲಿ ಬೈಲಾದ ವಲಿ ||೨|| ನಾದ ಮೋದ ಹೈದ್ರ...

ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ ||ಪ|| ಎಂಟು ದಿಕ್ಕನು ಒಯ್ದು ಒಂಟಿ ಬಾಯೊಳಗಿಟ್ಟು ಸುಂಟರಗಾಳಿಗೆ ಸಿಗದ ಮಹಾತ್ಮನೆ ||೧|| ಬಯಲು ಬ್ರಹ್ಮಜ್ಞಾನಿಯಂದೆನಿಪ ನೆಲಗುಡ್ಡ ದಯದ ಯೋಗಿಯ ಮನಕೆ ಒಲಿಸಿದ ಮಹಿಮನೆ ||೨|| ವಸುಧಿಪ ಶಿಶುನಾಳಧೀಶನ ಮಗನಿ...

ದಾಸರೋ ಹರಿದಾಸರೋ ||ಪ|| ದಾಸರೆನಿಸಿ ಧರ್ಮ ಹಿಡಿದು ಆಸೆ ಕಡಿದು ತೂರ್ಯದಲ್ಲಿ ಕಾಸು ಕವಡಿ ಕಾಲಿಲೊದ್ದು ಈಶನೊಲಿಸಿಕೊಂಬುವಂಥಾ ||೧|| ಸ್ವಾಮಿ ಕೇಶವ ಅಚ್ಯುತ ಗೋಕುಲದ ಗೋವಿಂದ ರಾಮ ಕೃಷ್ಣ ಎಂಬ ಪಂಚ- ನಾಮ ನಿತ್ಯ ಪಠಿಸುವಂಥ ||೨|| ತನುವ ತಂಬೂರಿ ಮಾ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...