Home / ಕವನ / ಕವಿತೆ

ಕವಿತೆ

ನನ್ನಪ್ಪ ದುಡಿಮೆಗಾರ ಹೆಣಗಾಡಿ ಕೊಂಡ ಗದ್ದೆಗಳ ಮತ್ತೆ ಹದಮಾಡಿ ಹಸನುಗೈದ ಅಸಲಿಗೆ ಈಗ ಅಲ್ಲಿ ಗದ್ದೆಗಳೇ ಇಲ್ಲ ಬದಲಿಗೆ ತೋಟಗಳು ತಲೆ ಎತ್ತಿದೆ ತೆಂಗು ಕಂಗು ವಾಣಿಜ್ಯ ಬೆಳೆಗಳು ನನ್ನಣ್ಣನ ಜೊತೆಗೂಡಿ ಎತ್ತರ ಜಿಗಿವಾಡುತ್ತಿದ್ದ ಗದ್ದೆ ಹಾಳಿಗಳು ಈಗ ...

ತನು ತುಂಬಿ ಮನ ತುಂಬಿ ಭಾವ ತುಂಬಿ ರಾಗ ತುಂಬಿ ತುಂಬಿತೋ ಭಕ್ತಿ ಎಂಬ ಕೊಡವು|| ಗಂಗೆ ತುಂಬಿ ಯಮುನೆ ತುಂಬಿ ತುಂಗೆ ತುಂಬಿ ಭದ್ರೆ ತುಂಬಿ ತುಂಬಿತೋ ಅತ್ತೆ ನಾದಿನಿಯರ ಪ್ರೇಮದ ಕೊಡವು || ಬಣ್ಣ ತುಂಬಿ ಬಿಂಕ ತುಂಬಿ ಬೆಡಗು ತುಂಬಿ ಬಿನ್ನಾಣ ತುಂಬಿ ತ...

ದಿನವೂ ಬಂದು ಬಿಂಕ ಬಿನ್ನಾಣ ಮಾಡಿ ಹೋಗುವ ಈ ಹವಳದ ಕಣ್ಣಿನ ಪಾರಿವಾಳ ಅವನ ಚೀಟಿಯನ್ನು ಕಾಲಿಗೆ ಕಟ್ಟಿಕೊಂಡು ಬರಬಹುದೆಂದು ಕಾದಿದ್ದೆ, ಆದರೆ ಚೀಟಿ ಬರಲಿಲ್ಲ, ಸದ್ಯ ಅವನೇ ಬಂದುಬಿಟ್ಟ. *****...

ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ ಹಸಿದು ಮೌನವಾದ ಜಗಕೆ ಮಾತು ಕಲಿಸಿತು ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ ಸಲಿಲ ಸೋಂಪು ವೀಣೆ ಮಿಡಿಯಿತು ರವಿಯ ಉರಿಯ ಬೆವರ ಭಾರ ನೆಲವ ಹಗುರು ಮಾಡಿತು ಹಸಿ ಚಿಮ್ಮಿ ಹರ್ಷ ಹೊಮ...

ಹಸಿರು ಗರಿಕೆಯ ಚಿಗುರು ಹಬ್ಬಿ ಮನದ ತುಂಬ ಒಲವ ಸಿರಿ ನಿನ್ನೊಂದಿಗೆ ಮಾತ್ರ ಈ ಲೋಕ ಗುಪ್ತಗಾಮಿನಿ ನದಿ ಹರಿದು ಗಿಡಮರಗಳ ಮರ್ಮರ ಸಾಕ್ಷಿ ಎಲ್ಲ ಲೋಕವೂ ನಿನಗಿಂತ ಚಿಕ್ಕದು ಎಷ್ಟೊಂದು ಕುಸುಮಗಳರಳಿ ತೀಡಿ ಗಾಳಿ ಗಂಧ ತೇಲಿ ಎಲ್ಲದಕೂ ಮೂಲ ಬೆಳಕು ನೀನು....

ಇರುಳಿನ ಮಡಿಲಲಿ ಒಲವಿನೊಂದು ಮನ- ದಾಸೆಯ ನನಸಂತೆ, ಆಗಸದೊಡಲಲಿ ಚಂದಿರ ನಗುತಿರೆ, ಜೀವನೆ ಕನಸಂತೆ! ಒಂದು ಚಕೋರಿಯು ಚಂದಿರನೊಲವನು ಪಡೆಯಲಂದು ಮನವ ಭಾವ ಪುಷ್ಪಗಳ ಪರಿಮಳವಾಗಿಸಿ ಹರಿಸಿತು ಎದೆಯೊಲವ ಹಕ್ಕಿ ಚಂದಿರನ ಸನಿಯ ಸಾರಲಿಕೆ ಚಿಮ್ಮಿ ಹಾರುತಿಹು...

ಓ ಮಲ್ಲಿಗೆ ಸುಮಧುರ ಸ್ವಾದ ನಿನ್ನ ಕಂಡು ನನ್ನ ಮನ ಮಿಡಿಯುತ್ತಿದೆ ನೋಡಲು ಎಷ್ಟು ಸುಂದರ ನಿನ್ನನ್ನು ಕಂಡವರು ಬಿಡಲಾರರು ನೀನಗೆ ನೋಡಲು ಚಿಕ್ಕ ಗಾತ್ರ ನಿನ್ನದ್ದು ನಿನ್ನಲ್ಲಿ ಅಡಗಿದ ಸುಧೆ ಹೆಮ್ಮರ ಕಂಡವರನ್ನು ಬರ ಮಡಿಕೊಳ್ಳುವಿ ನಿನ್ನ ಮಕ್ಕರಂದ ...

ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? – ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು ಒಂಟಿಯಾಗಿ ಈ ಬೆಟ್ಟ ಸುತ್ತಿದವನು ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು ಅವುಗಳ ಮೈಯ ಮುಂಜಾನೆಯ ತಂಪು ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ ಕೈಯಲ್ಲಿ ಸ...

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ ಕರಿ ಮಸಿಯ ಚಿತ್ತಾರ ತೊಟ್ಟಂಗಿಯ ಸುತ್ತ ತಂಡಿ ಅಡರಿದ ಕೆಟ್ಟ ಮುಂಜಾನೆಯಿರಲಿ ಜಿಟಿಜಿಟಿ ಮಳೆಯ ಜಿಗುಟು ಪ್ರಾತಃಕಾಲವೇ ಬರಲಿ ಉರಿ ಬಿದ್ದ ಬೇಸಿಗೆಯ ಬಿಸಿ ಬೆಳಗೆ ಆಗಲಿ ತಟ್...

ಭಾವನಾ ಲಹರಿಯಲ್ಲಿ ಮಿಂದ ಆ ದಿನ ನೆನಪಾಯ್ತು ಇಂದು ಈ ದಿನ|| ಅಂದಿನ ಆ ದಿನಕೂ ಇಂದಿನ ಈ ದಿನಕೂ ನಿನ್ನನಗಲಿದಾಕ್ಷಣ ಮರುಮಾತಾಗಿ ಎನ್ನ ಮನ ಕದಡಿತು|| ಭಾವನೆಯ ಕಣ್ಗಳಲ್ಲಿ ಕಾಣುವ ನಿನ್ನ ನೋಟ ನೆನಪಿನಂಗಳದೆ ರೂಪವಾಯ್ತು ರೂಪವಾಗಿ ಎನ್ನೆದೆಯೊಳಗೆ ಸ್ಥ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...