ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ ಇದು ನಾಟ್ಯ ಮಂದಿರ ಛಾತ್ರ ಸತ್ರವಲ್ಲ ಜೀವ ಬಯಸುವ ಭೋಗದುಪಕರಣವಲ್ಲವಿದು ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ? ಗೋಪುರದ ತುದಿಯಲ್ಲಿ ಬಾನನೆತ್ತುತ ನಿಂತು ಇರುಳಿನೊಳು ಮಿರುತಾರಗೆಯ ಮಾಲೆಗೊಳುತ ಮೋಡ ಮುತ್ತುವ ಜಡೆಗೆ ಜ...
ಗಾಢ ಮೌನ ಆವರಿಸಿದರೆ ಕರಾಳ ಕಾರಿರುಳ ಕತ್ತಲೆಗೆ ಹೆದರುತ್ತೇನೆ ಬಹಳ ಮೌನವನು ಸೀಳಿ ಬರುವ ಆ ಆಕ್ರಂದದ ಕೂಗು ಭಯಂಕರ ಸ್ಫೋಟದ ಶಬ್ದ ಮೈ ಮನಗಳ ಸುಳಿಯಲ್ಲಿ ನಡುಕ ಹುಟ್ಟಿಸುತ್ತದೆ. ಮಧ್ಯ ರಾತ್ರಿಯ ಕರಾಳ ಕತ್ತಲೆಯ ಗಾಢ ಮೌನದ ಗರ್‍ಭ ಸೀಳಿ ಹೊರಬಂದ ಕರು...
-ಪರಾಕ್ರಮಿಗಳಾದ ಪಾಂಡವರನ್ನು ಬಗ್ಗುಬಡಿಯಲು ಮೋಸದ ದಾರಿಯನ್ನು ಹುಡುಕಿದ ದುರ್ಯೋಧನನು, ತನ್ನವರೊಂದಿಗೆ ಮಾತಾಡಿ ದುಷ್ಟಯೋಜನೆಯೊಂದು ರೂಪಿಸಿದನು. ಶಕುನಿಯ ಸಲಹೆಯ ಮೇರೆಗೆ ತಂದೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಪಾಂಡವರನ್ನು ಆತಿಥ್ಯ ಸ್ವೀಕರಿಸಲು...
ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ! ಕನ್ನಡಕ್ಕೆಂಟು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲಾ! ಕವಿಗಳು ದಾಸರು ಶರಣರು ಸಂತರು ಕನ್ನಡ ಕ...
ಓ ಯೋಗಿ ಶಿವಯೋಗಿ ಶಿವಶಿವಾ ಗುರುಯೋಗಿ ಶ್ರೀ ಜಗದ್ಗುರು ಯೋಗಿ ರೇಣುಕಾಚಾರ್‍ಯಾ ಮಲಯ ಪರ್‍ವತ ಶಿಖರ ಜ್ಞಾನಯೋಗದ ಮುಕುರ ಭಕ್ತ ಬಾಂದಳ ಸೂರ್‍ಯ ರೇಣುಕಾಚಾರ್‍ಯಾ ಯುಗದ ಸತ್ಯವು ಒಂದೆ ಜಗದ ಸತ್ಯವು ಒಂದೆ ಶಿವಾದ್ವೈತ ಸಿದ್ಧಾಂತ ನಿನ್ನಮಾರ್‍ಗಾ ನೂರು ದ...
ಲೋಕ ಸುಂಕೆ ಕೆಟ್ಟೋಗೈತೆ ! ಪೂರ ! ತುಂಬ! ಬಾಳ ! ಬೂತಗೊಳ್ ಯಿಗ್ತ ಕುಣದ್ರೆ- ಅದೊ! ದೆಯ್ಗೊಳ್ ಆಕೊ ತಾಳ! ೧ ದುಡ್ಡಿಗ್ ಕಚ್ಚು ವೊಟ್ಟೇಗಿಚ್ಚು ಏನ್ ಎಂಗ್ ಎಚ್ಕೊಂಡೈತೆ! ಸುಕ ಸಾಂತಿ ತ್ರುಪ್ತಿ ಎಲ್ಕು ಬಾಗಿಲ್ ಮುಚ್ಕೊಂಡೈತೆ! ೨ ಐಕುಂಟ್ದ್ ಅಪ್ನಂಗ...
೧ ಹೊಟ್ಟೆಯೇ ಮೊಟ್ಟಮೊದಲ ಚಿಂತೆಯು ಹೊಟ್ಟೆಯಲ್ಲಿ ಬಂದವರ ಚಿಂತೆಯು ಬೆನ್ನು ಬಿದ್ದು ಬಂದವರ ಚಿಂತೆಯು ಬೆನ್ನು ಹಿಡಿದ ವಿಧಿ ಬಿಡದ ಚಿಂತೆಯು ಕೈಯ ಹಿಡಿವರಾರೆಂಬ ಚಿಂತೆಯು; ಹಿರಿಯರಂಜಿಕೆಯ ಹಿರಿದು ಚಿಂತೆಯು ನೆರೆಯ ಹೊರೆಯವರ ಹೊರದ ಚಿಂತೆಯು ಬದುಕು ...
ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ ಮಲೆದೇಗುಲದ ಹೊರಗೆ ತುಂಬನೇ ಬಯಸಿ ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ ಅಳಲ ತಾಳುತ ತೀರದರಕೆಯನೆ ಮೆರಸಿ “ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ” ಎ...
ಬೆಳಗು ಮುಂಜಾವಿನ ಸಮಯ ಸೂರ್‍ಯ ಹುಟ್ಟುವ ಮುನ್ನ ಚುಮುಚುಮು ನಸುಕಿನಲಿ ನೆಲದ ಅಂಗಳಕ್ಕೆ ಪುಟ್ಟ ಪಾದಗಳ ಅಕ್ಷರ. ಪ್ಲಾಸ್ಟಿಕ್ ಚೀಲ ಹೆಗಲಿಗೇರಿಸಿ ಯುದ್ಧಕ್ಕೆ ಹೋರಟ ಯೋಧರು. ತುತ್ತು ತುಂಬಲು ಪಯಣ ತಿಪ್ಪೆ ಗುಂಡಿಗಳ ಕೆದಕಿ ಹಸಿವು ನೀಗುವ ಬುತ್ತಿ ತ...





