ಹಾದರ ಮಾಡಿದೆನೇ ನಾನೊಂದು ಹಾದರಮಾಡಿದನೇ ||ಪ|| ಹಾದರ ಮಾಡಿದೆ ಹಗಲಿರುಳೆನ್ನದೆ ಸಾಧು ಸತ್ಪುರುಷರ ಪದರಿನೊಳಗೆ ನಾ ಹಾದರಮಾಡಿದೆನೇ ||ಅ.ಪ.|| ಮಳ್ಳಿಯ ತೆರದಲ್ಲಿ ಮಾತುಗಳ ಆಡುತೆ ಕಳ್ಳರೊಳಗೆ ಸುಳದೆ ಹಳ್ಳಕೊಳ್ಳ ಹಾಳಗ್ವಾಡಿ ಮಳಗಿಯೊಳು ಉಳ್ಳಾಡಿ ಬ್...

ಮೈ ಜಂಗಮ್ ಹೋಕರ ಗಲ್ಲಿ ಗಲ್ಲಿ ಫಿರಿಯಾ ||ಪ|| ಅಂಗಬಹುತವು ಲಿಂಗ ಪಾವುಮೆ ಕೋರಾಣ ಭಿಕ್ಷಾ ಬೋಲಿಯಾ ||೧|| ತೀಸಗಾಂಟಿಕೆ ಊಪರ್ ಜ್ಞಾನಕಿ ಜ್ಯೋಲಿ ಸಂಗಸೇರಕು ಬೋಲಿಯಾ ||೨|| ದೇಖತಾ ಶಿಶುನಾಳಸ್ಥಾವರ ಮೇರಾ ಜೀರಕೇರನ್ಕು ಬೋಲಿಯಾ ||೩|| ****  ...

ಕುರುಬರೋ ನಾವು ಕುರುಬರೋ ಏನು ಬಲ್ಲೇವರಿ ಆತ್ಮದ ಅನುಭವವೋ ||ಪ|| ಮುನ್ನೂರು ಅರವತ್ತು ಕುರಿ ಮೇಯಿಸಿಕೊಂಡು ಸುಮ್ಮನೆ ಬರುವಂಥಾ ||ಅ.ಪ.|| ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚೆ ಈಡೆಂಬ ಬಾಗಿಲ ಹಾಕೇವಿರಿ ...

ಕಪಟರೂಪವಲ್ಲ ಕೇಳಿದೋ ಪರಮಾತ್ಮನ ಬೋದವೋ ||ಪ|| ಗುರುಪಥ ವಸ್ತು ತೆಗೆದು ತೆಗೆದು ತೋರ್ಪುದೋ ||ಅ.ಪ.|| ಎಂದೆಂದಿಗೂ ಬಂದು ನಿಲ್ಲುವಿಯೋ ಒಂದನಾದದೊಳಗೆ ಸುಳಿವುದೋ ||೧|| ಹೃದಯ ಹೃದಯ ಸದನ ಕಾಂಬುವುದೋ ಸುಂದರ ಶಿಶುನಾಳಧೀಶನದೋ ||೨|| ****...

ಗುಣವೇ ಇದು ಗುಣವೇ ||ಪ || ಗುಣವಲ್ಲಾ ವಿಭೂತಿ ಫಣಿಯೊಳಿಲ್ಲದ ಮೇಲೆ ಗುಣವೇ ||ಅ.ಪ.|| ಸುರಮುನಿ ಹರಗಣ ವರನಂದನಾಥರು ಧರಿಸಿದಾಕ್ಷಣದೊಳು ಮರಣವಿಜಯರಾಗಿ ||೧|| ಎರಡೊಂದಕ್ಷರ ಪ್ರಣಮದಿ ಭಶಿತವು ಶಿರದೊಳೂರಿದ ಮೇಲೆ ಹರಗಣ ಪದವೀಯುವುದು ||೨|| ಏ ಶಿವ ಶ...

ಕಷ್ಟವ ಮಾಡಿದೆಯಾ ಈ ಶರೀರದ ಕಷ್ಟವ ಮಾಡಿದೆಯಾ                   || ಪ. || ಕಷ್ಟವ ಮಾಡಿದಿ ಶ್ರೇಷ್ಠ ಮಹಿಮ ಋಷಿ ಪಟ್ಟದ ಬ್ರಹ್ಮನ ವಿಷ್ಣು ರುದ್ರರ           || ಅ .ಪ .|| ಶರೀರದ ಕಲಶದೊಳು ಜಲವ ಸುರಿಸಿ ಹಿರದನೋ ರೋಮಗಳು ಸುರಚಿರದನ್ನವನೆರೆದ...

ರಾಜಪಲಂಗ ಪರ ಖೇಲೂಂಗಿ ಸಾಜನ ಸೋಬತಿ ಬೋಲೂಂಗಿ ||ಪ|| ಮೈನೆ ಬೈಠಕರ ಮದನ ಪೀಠಪರ ಸದನಮೆ ಸೋಬರಲೆಂಜ್ಯಾಲೂಂಗಿ ||ಅ.ಪ.|| ಸಾತು ಮಾಲುಮೆ ಬೈಟಿಯೆ ಕೇಳಿ ಜವತ ಆವತ ಖೇಲೂಂಗಿ ಚುನು ಚುನು ಸಖಿಯಾ ಬೋಲೂಂಗಿ ಸಾಜ ಪಲಂಗ ಪರ ಖೇಲೂಂಗಿ ||೧|| ಸಬ್ಬ ಪರಿ ಹೈ ಯ...

ಆನಂದವೆಂಬೋ ಮಂಟಪದೊಳ್ ವಿಲಾಸ ಮಾಡುನು ಬಾರೆ ||ಪ|| ಹೇವೋರಿ ತೂರ್ಯಾತೀತದಿ ಬೆಂದು ಮನ- ಹರಿದು ಸಹಜಾನಂದದಿ ಹೊಳೆದು ನೀನಲಿದ ಸರಸದಿ ಸುಮ್ಮನೆ ಸುಂದರ ಸ್ಥಳದೊಳ್ ವಿಲಾಸ ||೧|| ಮೂರೆರಡು ಕ್ಲೇಶವ ಕಳೆದು ಏಳ್‍ಮಡಿದು ಈರೇಳು ಮೀರಿದ ಗುಡಿಪುರ ಶಿಶುನಾ...

ಅಣ್ಣ ನೋಡೋಣು ಬಾರೋ ಬೇಗನೆ ಸಾರೋ ||ಪ|| ಅಣ್ಣ ನೋಡೋಣು ಬಾರೋ ನುಣ್ಣಗೆ ತೋರುವ ಸಣ್ಣ ಮಂದಿರದೊಳು ಕಣ್ಣಿಟ್ಟು ಜ್ಯೋತಿಯ ||೧|| ಶಾಲು ಮೇಲೆ ಮುಡಿಹೊತ್ತು ಮಸ್ತಕದಿ ರುಮಾಲು ಚಿಮ್ಮರಿಯ ಸುತ್ತು ಬಾಳೊಂದು ಚೆಲುವಾದ ಕಾಲುಹಾವಿಗಿ ಮೆಟ್ಟಿ ಮೇಲು ಮಾರ್ಗ...

ಸದಾನಂದ ಪರಮಾತ್ಮ ಬೋಧಮಯ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||ಪ|| ನಿಧಾನದಲಿ ನಿಜ ಹೃದಯ ಕಮಲದಲಿ ಸುಧಾಕಿರಣ ಗುರುಪದಾಬ್ಜ ಕಂಡರೆ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||೧|| ಯೋಗಿಯಾಗಿ ಸಂಭೋಗ ಮಾಡಿ ರೋಗವಳಿದು ನಿಜರಾಗಿ ಮ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...