
ನೋಡುನು ಬಾ ಗುರುನಾಥನ ಸಖಿ ನೋಡುನು ಬಾ ಮುಕ್ತಿ ಬೇಡುನು ಬಾರೆ ||ಪ|| ಕಾಮಿತ ಫಲವಾ ಪ್ರೇಮದಿ ಕೊಡುವಾ ನಮ ರೂಪವ ಸಂಜೀವನ ಸಖಿ ನೋಡುನು ಬಾ ||೧|| ಪರಮ ಪ್ರಕಾಶ ಪಾವನಕರ ಜಗದಿಶನೇ ಸಖಿ ಹೃತಭವತಾಪಾ ಸಂಹೃತ ಕೋಪಾ ಗುಡಿಪುರ ಕಲ್ಮಠ ಸ್ವರೂಪನ ಸಖಿ ನೋಡು...
ಗುರುವೆ ಬಿನ್ನಪವುದ್ಧರಿಸೋ ಎನ್ನ ಪರಮ ಸಖನ ಜ್ವರದುರಿ ಪರಿಹರಿಸೋ ||ಪ|| ಇರುತಿರೆ ಆತನ ಘಟಕೆ ರೋಗಬರುವುದಿನ್ನ್ಯಾಕೆ ಮರಗುವ ಸಂಕಟವ್ಯಾಕೆ ಮರೆಹೊಕ್ಕೆ ನಿನ್ನಯ ಪದಕೆ ನಿಮ್ಮ ಸ್ಮರಿಸಲು ಈ ಕರ್ಮ ಸಂಕಟವ್ಯಾಕೆ ||೧|| ದೇಹವೆರಡಾತ್ಮ ಒಂದಾಗಿ ನಾವು ತಾ...
ಶ್ರೀಗುರುನಾಥನ ಆಲಯದೊಳು ನಾವ್- ಈರ್ವರು ನಲಿದಾಡುನು ಬಾ ಬಾ ||ಪ|| ಬಾರದಿದ್ದರೆ ನಿನ್ನ ಮಾರಿಗೆ ಹೊಡೆವೆನು ಸಾರಿ ಈರ್ವರು ನಲಿದಾಡುನು ಬಾ ಬಾ ||೧|| ಯೋಗದ ಕುದುರೆಯ ಬ್ಯಾಗನೆ ಏರುತ ಮ್ಯಾಗೇರಿಯವಮಠಕ್ಹೋಗುನು ಬಾ ಬಾ ||೨|| ನಡಿ ನಡಿ ಶಿಶುನಾಳಧೀಶ...
ಸದಗುರುನಾಥನ್ಹೊರತು ಗತಿ ಬ್ಯಾರಿಹುದೆ? ಮುಕ್ತಿದಾತನೆನ್ನುತಾ ಶ್ರುತಿ ಸಾರುತಿದೆ ||ಪ.|| ಕೌತಕದಿ ಕಲಿಯೊಳು ಕೂಡಿಸಿದಾ ರೇತು ರಕ್ತದೊಳು ಮನಿ ಮಾಡಿಸಿದಾ ಮಾತೆ ಕುಚದೊಳು ಆಮೃತರಸ ನೀಡಿಸಿದಾ ||೧|| ಏನು ಹೇಳಲಿ ಆತನ ದಯದಿಂದಾ ದೇವ ಶಿಶುನಾಳೇಶನ ವರ...
ನಂಬಿದೆನಯ್ಯಾ ನಿನ್ನ ಸದಗುರುರಾಯಾ ರಕ್ಷಿಸು ಎನ್ನ ಪ್ರೀಯಾ ||ಪ|| ನ೦ಬಿದೆ ನಾ ನಿನ್ನ ಶಂಬು ರಕ್ಷಿಸು ಎನ್ನಾ ಕುಂಭಿನಿಯಾಳು ಬಿಡದೆ ತುಳುಕುತಿರುವೆ ||ಅ.ಪ.|| ಹರನಾಮ ಧ್ಯಾನದಲಿ ಪ್ರೇಮದಲಿ ಕರಿಗೊಂಡು ಮನಸಿನಲಿ ವರವ್ಯಸನವನು ಹರಿದು ನಿರುತ ಪಾಲಿಸು...
ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪ|| ಕರಪಿಡಿದು ಎನ್ನ ಕರಣದೊಳಗೆ ಮೊದಲು ವರಮಂತ್ರಬೋಧಿಸಿ ಕರವಿಟ್ಟು ಶಿರದೊಳು ||೧|| ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨|| ಗುರುವರ ಗೋವಿಂದ ಪರಮಗಾರುಡಿಗ ನಿ- ...
ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ ಈ ಆತ್ಮಾ ಶಿವಯೋಗಿ ||ಪ|| ಮರಳಿ ತೆರಳದಂತೆ ಭವದೊಳು ಬಾರದೆ ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ ||ಅ.ಪ.|| ಆರನಳಿದು ಮುನ್ನ ಮೂರು ಮೀರಿತು ಆತ್ಮಾ ಏರಿ ಪಾರಮರ...
ಸದ್ಗುರುವಿನ ವರವು ನಮಗೆ ಇರಲಿ ಸರಸಿಜ ಮುಖಿಯೆ ||ಪ|| ಪರಮ ನಿತ್ಯಾನಂದ ಸುಖವು ಅರವು ಹಿಡಿದು ನುಡಿಯುತಿರಲು ಸ್ಮರನ ಮತ್ಸರವನ್ನು ಗೆದ್ದು ಮರಣ ಬಾಧೆ ಮಾಯೆ ತುಳಿದು ||೧|| ದೇವ ಶಿಶುನಾಳಧೀಶನ ಜೀವ ದಣಿದು ಉಸುರಿದ೦ತೆ ಕೇವ...
ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಎನಗೊಂದು ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಪ್ರಣಮ ಪಂಚಾಕ್ಷರಿಯ ಎಣಿಸಿ ಜಪಮಾಡೆಂದು ಹನ್ನೊಂದುಮಣಿ ಮೇಲೆ ಇನ್ನೊಂದು ಸಣ್ಣರುದ್ರಾಕ್ಷಿ ||ಅ. ಪ|| ಅದರೊಳುನ್ನತಾಮೃತದ ಶಿಲೆಮಾನ ರತ್ನದ ಹರ...
ಗುರುನಾತಹನಂತಃಕರಣವಾಯಿತು ಆತಮರಾಮನಿಗೆ ನಿನನಂತರ೦ಗದಿ ಮರಳಿ ತೆರಳದಂತೆ ಇಹದೊಳಗೆ ||ಪ|| ಸಾದಹು ಸಂತತಿ ಸಿದದಹ ಆರೂಧಹಗೆ ತಾನೇಕದೋಳ ಆರನಳಿಯುತ ಮೂರು ಮೀರುವನೆ ಬಯಾರೊಂದು ತತವಾದಹಾರದಲಿ ಗುರುಬೋದಹ ಪಧದವಗೆ ಪಾರಮಾರತಹದ ನೆಲೆಯನೇರುವಗೆ ಘನತೂರಯದೋಳ ...













