ದಿನವು ದಿನಪನ ಬರವು ಕೋರಿದೆ ಶುಭದ ಹಾರೈಕೆ, ಜೊನ್ನ ರಂಗನು ಸುಮಕೆ ಚಿತ್ರಿಸೊ ನಭದ ಓಲೈಕೆ, ಹಸಿರು ಬೆಟ್ಟದ ಬಟ್ಟಲದ ತುಂಬ ಅಮೃತಾ ಫಲದಾ ಪೇಯವು ತೆರೆ-ತೊರೆ, ನದ ನದಿಗಳ ರಸ ಪೀಯೂಷ ಪಾನೀಯವು, ಬೀಸೋ ಚಾಮರ ಹೊತ್ತ ಸಮೀರ ನಿನದದಿ, ಹಾಸು-ಹೊಕ್ಕಾಗಿ ಮಿ...

ಮತ್ತೆ ಹಾಡುತಲಿರುವೆ ಏಕೆ ಹಳೆಯ ಪಾಡಿನ ಪಲ್ಲವಿ, ನಿತ್ಯ ಸಾಗುತಲಿರುವೆ ಗಾನಕೆ ಬರಲಿ ಸಮದಾ ಜಾಹ್ನವಿ, ಜ್ಞಾನ-ವಿಜ್ಞಾನದ ಹಾದಿ ಸಾಗಿದೆ ನೀಲನಭದಾ ಆಚೆಗೆ, ನಿತ್ಯ ಶೋಧನ ಯಾತ್ರೆ ಹೊರಟಿದೆ ಹುಟ್ಟು-ಸಾವಿನ ಅಂಚಿಗೆ, ಇನ್ನು ಬಿಡು ನೀ ಹಳೆಯ ಹಾಡಲಿ ಬಣ...

ಜೋಗುಳ ಪಾಡಿರಮ್ಮಾ ಜಲಜಾಕ್ಷಿಯರೆಲ್ಲ ಜೋಗುಳ ಪಾಡಿರಮ್ಮಾ ||ಪ|| ಜೋಗುಳ ಪಾಡಿರಿ ಶ್ರೀ ಗುರುಯೆನುತಲಿ ಯೊಗಮಂದಿರದೊಳು ತೂಗುತ ಕಂದನ ||ಅ.ಪ.|| ಒಂದು ಹಿಡಿದು ಒಂಭತ್ತು ಬಾಗಿಲ ನಡು- ಹಂದರದಲಿ ಸಂಧಿಸಿದ ಮಂಟಪದೊಳು ಕುಂದಣ ಕೆಚ್ಚಿದ ತೊಟ್ಟಿಲೊಳಗೆ ಆ-...

ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ ಕರೆದರೆ ಹೋಗದೆ ಬಿಡಲಿಲ್ಲಾ || ಪ || ಹುರಿಯಕ್ಕಿ ಹೋಳಿಗಿ ಹೂರಣಗಡಬು ಕಡಲೀ ಪಚ್ಚಡಿ ಕಟ್ಟಿನಾಂಬರಾ ಉಂಡಗಡಬು ಪುಂಡಿಯ ಪಲ್ಲೆ ಬುಟ್ಟಿಯೊಳಿಟ್ಟೆಲ್ಲಾ ಕೆಮ್ಮಣ್ಣು ಬುಟ್ಟಿಗೆ ಬಡದೆಲ್ಲಾ ಅದರನುಭವ ತಿಳ...

ಬೀಸೊ ಗಾಳಿಗೆ ದಿಸೆಯದಾವುದೊ ಎಂಬ ನಿಯತಿಯದೆಲ್ಲಿಯೋ, ಪ್ರೀತಿ ಸ್ಪುರಣೆಗೆ ಕುಲವದಾವುದೊ ಎಂಬ ಭೀತಿಯದೆಲ್ಲಿಯೋ, ಮೂಡಣದ ಕಿರಣಕೆ ಅರಳದಿರುವವೆ ಸುಮಗಳು ತಾ ಲತೆಯಲಿ, ಚಂದ್ರೋದಯ ದಂದಕೆ ಏಳದಿರುವವೆ ತೆರೆಗಳು ತಾ ಕಡಲಲಿ, ಸಮದ ಸಮತೆಯ ಶೃಂಗ ಭೂಮಿಕೆ ಮಣ...

ನೋಡೋಣ ಬಾ ಗೆಳತಿ ನಾಡೋಳ್ ಹುಲಗೂರ ಸಂತಿ ಬಾಡ ಮಾರವಳ ಬಡಿವಾರ ಬಹಳೈತಿ ||ಪ|| ಜೋಡಬಿಲ್ಲಿ ದುಡ್ಡಿಗೊಂದು ಸಿವಡು ಕೋತಂಬರಿಯ ಕೊಡಲು ಬೇಡಿಕೊಳ್ಳುತ ನಿಂತರೆ ಮಾತಾಡಳೋ ಮುಖ ನೋಡಳೋ ||ಅ.ಪ.|| ಸರಸಾದ ಪ್ಯಾಟಿಯು ಮೆರೆವದು ಕೋಟಿಯು ವರ ರಸವರ್ಗ ಫಲಗಳು ಸ...

ನಿಲ್ಲು ಮನವೆ, ನಿಲ್ಲು ಇಲ್ಲಿ ಇನ್ನು, ಒಮ್ಮೆ ಹೊರಳಿ ನೋಡು, ನಾಗಾಲೋಟದ ಧಾವಂತದಲಿ ಪಡೆದುದೇನೆಂಬುದ ಕಾಣು… ಜಗವನಾಳುವ ಶಕ್ತಿತ್ರಯಗಳನು ಮೀರಲು ಜೀವನವಿನ್ನೇನು? ಎಲ್ಲೋ ಕಳೆದುದನಿನ್ನೆಲ್ಲೋ ಹುಡುಕಿರೆ ದೊರೆಯುವುದಿನ್ನೇನು…! ಸುಖದ ...

ಕುರುವರಿಯದ ಕುಂಬಾರಗ ಹೇಳಲು ಮಾರಿಗ್ಹೊಡದ ಮಾದಿಗರಣ್ಣಾ ||ಪ|| ಕಾರಹುಣ್ಣಿವಿ ದಿನ ಕೋರಿಯ ಹೊತಗೊಂಡು ಬೋರಗಲ್ಲಿಗೆ ಬಡದೀರಿ ಸುಣ್ಣಾ ||೧|| ಹುರಿಕಟ್ಟಿನ ಹೋರಿಗೆ ಗೊಟ್ಟವ ಹಾಕಲು ಕುಟ್ಟಿ ಉಪ್ಪು ಎಣ್ಣಿ ಅರಿಷಿಣ ||೨|| ಹುರಿಯಕ್ಕಿ ಹೋಳಿಗೆ ಕರಿದ ಕ...

ಅಭಿಮಾನವಿರಲೀ, ದೇಶ, ಭಾಷೆಯ ರೀತಿ, ನೀತಿಯ ಸಿರಿಯುಸಿರಲಿ, ವಿಶ್ವಕೋಶದ, ಧಮನಿ ದಮನಿಯ, ಬಿತ್ತಿ ಬೆಳೆಸಿದ ತೋಳಲಿ…. ಎಲ್ಲ ಲೋಕದ, ನಾಕವಿದುವೆ ಪುಣ್ಯ, ಸಗ್ಗಕೆ ಭೂಮಿಕೆ, ಜ್ಞಾನವೆಲ್ಲಕೂ ಮೂಲವಿದುವೆ, ಧ್ಯಾನ ನಂದನ ಚಂದ್ರಿಕೆ, ಧೃವಗಳೆಲ್ಲಕೂ...

ಕುಂಬಾರಕಿ ಈಕಿ ಕುಂಬಾರಕಿ ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವ ||ಪ|| ಚಿನ್ನ ಎಂಬುವ ಮಣ್ಣನು ತರಸಿ ತನು ಎಂಬುವ ನೀರನು ಹಣಸಿ ಮನ ಎಂಬುವ ಹುದಲನು ಕಲಸಿ ಗುಣ ಎಂಬುವ ಸೂಸನು ಹಾಕಿ ||೧|| ಭಕ್ತಿ ಎಂಬುವ ತಿಗರಿಯ ಮಾಡಿ ಧ್ಯಾನ ಎಂಬುವ ಬಡಗಿಯ ಊರಿ ಮುನ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....