
ಹುಟ್ಟಿದ್ದು ಹೊಲಿಮನಿ ಬಿಟ್ಹೊಂಟ್ಯೋ ಕಾಯ್ಮನಿ ಎಷ್ಟಿದ್ದರೇನು ಖಾಲಿಮನಿ ||ಪ|| ವಸ್ತಿ ಇರುವ ಮನಿ ಗಸ್ತಿ ಇರುವ ಮನಿ ಶಿಸ್ತಿಲೆ ಕಾಣೂವ ಶಿವನ ಮನಿ ||೧|| ಚಿಂತೆ ಕಾಂತೆಯ ಮನಿ ಸಂತಿ ಸವತಿಯ ಮನಿ ಅಂತು ಬಲ್ಲವರಿಗೆ ಆಡೂ ಮನಿ ||೨|| ಒಂಭತ್ತು ಬಾಗಿಲ...
ಬರಬಾರದೋ ಯೋನಿಯೊಳು ಜನಿಸಿ ತಿಳಿದು ಒಂದೊಂದು ಎಣಎಣಿಸಿ ||ಪ|| ರಕ್ತದಿ ಬಿದ್ದು ಬಂದಿಯೋ ಎದ್ದು ಬಂಧನದೊಳು ಬಂದು ಸಂದಿಸಂದಿಗೆ ||೧|| ಸಾವು ಸಂಗತಿಯಾಗಿ ಏಜೀದನ ಒಳಪೊಕ್ಕು ಮಾಯಕ್ಕೆ ಮರುಳಾಗಿ ಮಣ್ಣುಗೂಡಿಸಿ ||೨|| ಧರಿಯೊಳು ನವಲಗುಂದ ನಾಗಲಿಂಗ ಪ...
ಹೋಗುತಿಹುದು ಕಾಯ ವ್ಯರ್ಥ ಇದರ ಲಾಘವ ತಿಳಿದವ ಯೋಗಿ ಸಮರ್ಥ ||ಪ|| ಏಳು ಜನ್ಮಾಂತರದಿನವು ಹೀಂಗ ಹೇಳದೆ ಹೋದವು ನಿನಗಿಲ್ಲೋ ನೆನಹು ಭೋಗಲಂಪಟ ಸುಖಘನವು ಭವ ರೋಗದಿ ಮರಣಕ್ಕೆ ಆಯಿತೋ ಅನುವು ||೧|| ಬದುಕೇನು ಮಾಡಿದಿ ಇಲ್ಲೆ ಸುಳ್ಳೇ ಮುದುಕ್ಯಾಗಿ ಮೆರದ...
ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ ತೊರೆ, ನದಿಗಳ ಹಿಮದ ಜಾರುಂಡೆಗಳಲಿ ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ ನರ್ತನ ಗೈಯ್ಯುತಿದ್ದವು ಸಾವು ನೋವುಗಳು ತಾಂಡವ ರೂಪದ ವೀರಯೋಧರು ಭಾರತಾಂಬೆಯ ಹೆಮ್ಮೆ ಕುವರರು ಚಳಿಗಾಳಿ ಹಸಿವೆನ್ನದೆ ಜೈಹಿಂದ್ ಎನ್ನು...
ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ ಈ ಅ- ಸ್ಥಿರ ಶರೀರವ ನಂಬಲಿಬ್ಯಾಡಾ ||ಪ|| ಮರಳಿ ಮರಳಿ ಬಹು ತ್ವರದಿ ಭವಕೆ ಬಂದು ಸೊರಗಿ ಸುಖ-ದುಃಖ ಎರಡರ ಮಧ್ಯದಿ ||೧|| ಆತ್ಮವಿಚಾರವು ಆತ್ಮದೊಳಗಿರುತಿರೆ ಆತ್ಮ ಪರಮಾತ್ಮನ ಪ್ರಮಾಣಿಸಿ ನೋಡಿದ ||೨|| ಅಂದಿಗಿಂದಿಗ...
ಕಾಣದೆ ನೀ ಬೊಗಳಬ್ಯಾಡ ಕೋಣನಂಥ ರಂಡೆ ಜಾಣಜನರು ಕೂಡಿ ನಿಮ್ಮೋಣಿಯಲ್ಲ್ಹಾಯ್ದಿರಲು ಕೋಣಿಬಾಗಿಲಲಿ ನಿಂತು ಗೋಣತಿರುವುವ ಮುಂಡೆ ||೧|| ನೆಟ್ಟಗಿಲ್ಲ ಮೈಬಣ್ಣ ರೊಟ್ಟಿ ಹಂಚಿನ ಕರದ ತಟ್ಟದಲೆ ಬಿಟ್ಟು ಮೋತಿಮ್ಯಾಲಿನ ಸೆರಗ ಜರ...
ಹನಿಹನಿಸೋ ಮುತ್ತ ಮಳೆಗೆ ಇಳೆಯ ಕಣ್ಣೊಳೆನಿತೊ ಕಾತುರ ಬಾನ ಇನಿಯನೊಲವಿಗಾಗಿ ಧರೆಗೆ ನಿತ್ಯ ಸಡಗರ || ಬಿರಿದ ಕುಸುಮ ಅರಳು ಸುಮವು ಒಲಿದ ಹೃದಯದ ಪ್ರೀತಿಗೆ ಕೆರೆ-ತೊರೆ ಸರೋವರ ನದನದಿಗಳಲ್ಲೂ ಜೊನ್ನ ಕಿರಣದ ಅಂದುಗೆ || ಪ್ರೇಮ ಸಂದೇಶ ಹೊತ್ತ ಹಕ್ಕಿ ಸ...
ಯಾವ ಶುಭಗಳಿಗೆಯಲಿ ಪ್ರಕೃತಿ ತಾನುದೆಯಿಸಿತೊ ಆವ ಶುಭ ವೇಳೆಯಲಿ ಜೀವ ಕಣ್ ತೆರೆಯಿತೊ ಅಮೃತ ಸೆಲೆ ನೆಲೆಯಂತೋ ದಯವಲೀಲೆ ||ಪ|| ಶುಭೋದಯದ ಹಗಲಿರುಳಿನಲಿ ನವೋದಯದ ಬಾಳ ಬೆಳಕು ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ ||ಅ.ಪ|| ಈ ಮಣ್ಣು ಕಣ ಕಣದಿ ಹರಿವ ತೊರ...













