(ಪುಷ್ಯ ಶುದ್ಧ ಅಷ್ಟಮೀ ರಾತ್ರಿ ೧೩-೧-೪೪) ಹರಿವ ಮುಗಿಲ ನೌಕೆಯೇರಿ ಬರುವ ಚಂದ್ರ ಗಗನ ಸಾರಿ ಅರ್ಧ ಮುಳುಗಿ ಅರ್ಧ ಬೆಳಗಿ ನಗುವ ರಜನಿಗೂಡೆಯನಾಗಿ ಕಳೆಯ ಕೊಟ್ಟು ಬೆಳಕನುಟ್ಟು ಉಡುಗಣಂಗಳೊಂದಿಗಿಟ್ಟು ಜಗವನಪ್ಪಿ ನಭವನೊಪ್ಪಿ ಜೀವಕೊಂದು ಕಳೆಯ ಕೊಟ್ಟು ...

ಎಂತಹ ನಿರಂಕುಶ ಪ್ರಭುತ್ವ ಮಹಾರಥರ ದರ್ಪದ ಸಿಂಹಾಸನ ರತ್ನಖಚಿತ ಪ್ರಭುಗಳ ಕಿರೀಟಕ್ಕೆ ಬರಸಿಡಿಲು ಅಪ್ಪಳಿಸಬಹುದು ಆ ದಿನ ಕಂಡೇ ಕಾಣುತ್ತೇವೆ. ಮಣಿ, ಮುಕುಟ ಕಿರೀಟಗಳು ಮಣ್ಣು ಪಾಲಾದವು, ಪದ್ಮನಾಭನ ಗುಪ್ತಧನ, ಕನಕ ಬಯಲಾದವು ಗದ್ದುಗೆಯ ನಂಟು ಕಡೆತನಕ...

ಕಾಣುವ ಕಣ್ಣಿಗೆ ಎಲ್ಲಾ ಬೆರಗು ಕಾಣುವ ಕಣ್ಣಿಗೆ ಎಲ್ಲೆಲ್ಲೂ ಸೊಬಗು ದಿನ ದಿನ ಮೂಡುವ ನಸುಕಿನ ಬೆಳಕಿನ ದಿನ ದಿನ ಮಾಯುವ ಸಂಜೆಯ ಥಳಕಿನ ರಾತ್ರಿಯ ಭವ್ಯಾಕಾಶದ ಗಹನ ಕೋಟಿ ದೀಪಗಳ ದೀಪಾರಾಧನ ಮಳೆಬಿಸಿಲ ಬಾನಿನ ಕಾಮನ ಬಿಲ್ಲಿನ ಹನಿಹನಿ ನೀರಿನ ಮುತ್ತಿನ...

ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ| ಮಂಡಲದಾಗಾಡೊ ಮಗನ ಗೋವಿಂದಾ|| ಕೂಸ ಕಂಡೀಽರೆ| ಅವ್ವ್‌ ನನ್ನ| ಬಾಲಽನ ಕಂಡಿಽರೆ ||೧|| ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ| ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ|| ಕೂಸ ಕಂಡಿಽರೇ| ಅವ್‌ ನನ್ನ| ಬಾಲಽನ ಕ...

ಪ್ರೀತಿ ಮಧು ಹೀರಿದ ಮೇಲೆ ಗೆಳತಿ ಇರಲಿ ಸನಿಹದಲಿ ಮೇಲೆ ಬರಲಿ ಪ್ರಕೃತಿ ಚೆಲುವು ಸೋಲೆ ಇಲ್ಲ ನನ್ನಲ್ಲಿ ಉಕ್ಕಿ ಬರುವ ಸಾಗರದಲೆಯು ಸರಿಯಬೇಕು ಹಿಂದಕ್ಕೆ ಮೋಹನಾಸ್ತ್ರ ಹೂಡುವ ಮದನ ಕೂಡ ಅದೇ ನೇರಕ್ಕೆ ಇರುವಾಗ ಜೊತೆಗೆ ನಲ್ಲೆ ಗೆಲುವಿಗೆಲ್ಲಿದೆ ಎಲ್ಲ...

ಹೂ ದಂಡಿ ಹೆಣೆದ ನೀವು ಮಂದಾರವನ್ನೇ ತಂದಿರಲ್ಲಾ ಅಕ್ಕಾ ನಿಮ್ಮದೆಂಥಾ ಸುಮನಸು ತಲುಪಿದೆ ನಿಮ್ಮ ಪುಸ್ತಕ ಸೇರಿದೆ ನನ್ನ ಮಸ್ತಕ ಸಹೋದರಿ ಎಂದಿರಿ ಅದ ರಿಂದ ಸಲುಗೆ ಈ ಪರಿ ಸಾಲುಸಾಲೂ ಕಾವ್ಯ ಗದ್ಯವೋ ಪದ್ಯವೋ ಬಿಡಿ ಅದೊಂದು ಸೊಗ ಸಾದ ಸಹೃದಯ ಯಾನ ಎಷ್ಟ...

ತಂದೆಗೆ ತಕ್ಕ ಮಗನಾಗಿದ್ದ ಪ್ರಿಯಳಿಗೆ ಒಳ್ಳೆಯ ಗೆಳೆಯನಾಗಿದ್ದ ತಂಗಿಗೆ ಪ್ರೀತಿಯ ಅಣ್ಣನಾಗಿದ್ದ…. ಹೂವುಗಳನು ಬೆಳೆಯುತ್ತಿದ್ದ ಹಣ್ಣುಗಳ ಮಾರುತ್ತಿದ್ದ ಇರುವೆಯಂತೆ ದುಡಿಯುತ್ತಿದ್ದ…. ದೇವರಿಗೆ ಹೋಗುತ್ತಿದ್ದ ದೀನನಾಗಿ ಬೇಡುತ್ತಿದ್...

ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ. ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ. ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ. ಬೆವರದಿದ್ದರೆ- ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದ...

ಜಗದ ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಇಲ್ಲಿಗೆ ಯಾರೂ ಬರಬಹುದು ಇಲ್ಲಿಂದ ಯಾರೂ ಹೋಗಬಹುದು ಇಲ್ಲಿ ಏನೂ ನಡೆಯಬಹುದು ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಕನ್ನ ಹಾಕಬಹುದು, ಎಲ್ಲ ದೋಚಬಹುದು ಕೊಚ್ಚಿ ಹಾಕಬಹುದು ದಂಗೆ ಎಬ್ಬಿ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...