ನೆರಳು

ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೊ ಅದರಿಚ್ಛೆ ಹಾದಿ ಇದಕು ಹರಿದತ್ತ ಬೀದಿ. ನೆಲನೆಲದಿ ಮನೆಯ ಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿದಕೊಂದೆ...

ಗಣೇಶ ದರ್‍ಶನ

೧ ದೇವರನೆಯದೆ ಕಾವ್ಯದ ರಚನೆಯೆ ನುತಿಯುರಿ ಇಲ್ಲದೆ ಭಾವದ ಪಚನೆಯೆ? ತಪ್ಪಿದನಾದೊಡೆ ತಿದ್ದುವೆನೀಗ ದೇವತೆಯೊಂದನು ನೆನೆ ಮನ ಬೇಗ- ಎನಲೀ ನಗೆಬಗೆಗಿಂಬಾಗುತ್ತ ಬಂದಿತು ಬೆನಕನ ಭಾವನೆಯಿತ್ತ. ಬುದ್ಧಿಯ ನೀಡೈ ಗಣಾಧಿನಾಯಕ ಸಿದ್ಧಿಯ ತೋರೈ ಗಣಾಧಿನಾಯಕ...

ಸಹನೆ-ಶಿವ

ಕಡೆದ ಕಡಲಿನ ಮೊದಲ ಫಲದಂತೆ, ಕಡೆಗೊಗೆವ ಸೊದೆಗೆ ಹಿರಿಯಣ್ಣನಂದದೊಳು ಭಾರತದ ಜನ- ದುದಧಿಯೊಳಗಿಂದು ಮೂಡುತಿದೆ ಹಾಲಾಹಲಂ, ನಡೆದೆಲ್ಲ ಪಾಪಗಳ ಕೋಲಾಹಲಂ, ಕರ್ಮ ದಾವಾನಲಂ; ನಿಷ್ಕೃತಿಯ ರೂಪಮಿದ ತಾಳಿ ಬದುಕುವೆವೆ ಬದುಕುಂಟು, ಸಂಮೋದವುಂಟು, ಸಂ- ಪದವುಂಟು;...

ನಿರೀಶ್ವರನನ್ನು ಕುರಿತು

ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು, ಧರ್ಮಗಹ್ವರ ಮುಖದಿ ಶಂಕಿಸುತ ನಿಂದಿರುವ ಕರ್ಮ ಸಂದೇಹಿ, ಸಂಮೋಹಿತಾಂತಃಕರಣ, ನಿರೀಶ್ವರನೆ,...

ಲಘುವಾಗೆಲೆ ಮನ

ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ||ಪ|| ನನಗಂಟಲು ನೀನಾಗುವೆ ಕಶ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು....

ಕಡಲಿದಿರು

ಗುಳಿಗೆ ಬಿದ್ದಾರುತಿಹ ಭೂತದಂತೊರಲುತಿದೆ ನಿಡುಸುಯ್ಯುತೀ ಕಡಲು ತನ್ನ ಬಂಧಿಸುವರೆಯ ದಡವನಲೆಪಂಜದಿಂ ಪರಚಿ-ಮೇಲೇರಿ ಬರ- ಲೆಳಸಿ ನಿಮಿನಿಮಿರಿ ಬಿದ್ದೆದ್ದುರುಳಿ ಕೊನೆಗೆ ಈ ಕರೆಗೆಯೇ ಕೈಚಾಚುತಿದೆ ನೆರವ ಕೋರುತ್ತ. ದಿಟ ಮಹದ್ವ್ಯಕ್ತಿ ಈ ನೀರನಿಧಿ; ಚಿರವಿದರ ತಟದೆಲ್ಲೆಯಪಮಾನದಾರ್ತನಿರ್ಘೋಷ....

ಇರುಳು-ಚಂದ್ರೋದಯ

ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ- ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು ಇದರ ಸತ್ಯವೆ ಬೇರೆ, ಶಾಸನವೆ ಬೇರೆ. ರವಿ ತೋರಿದಾ ಜಗದ ಮಾಯೆ ತೀರಿತು....

ಮೂಡುತಿಹನದೊ

ಬಾನ ಬಣ್ಣ ಮಾಗಿಸಿ ಶಶಿ ಮೂಡುತಿಹನದೋ. ಸಂಜೆ ಹೂವನೆರಚಿ ಸಾರೆ ನಮ್ರವಾಗಿ ತಾರೆ ತೋರೆ ಶರದದಿರುಳ ಕರವ ಪಿಡಿದು ಏರುತಿಹನದೋ. ಉದ್ಯಾನದ ಪುಷ್ಪಬೃಂದ ಲಜ್ಜೆಯ ಸಿರಿ ಹೊಂದಿದಂದ ತೆಳು ಬೆಳಕಿನ ಮೇಲುದುವನು ಧರಿಸುವಂತಿದೋ. ತಮವನುಳಿದುವೆನುವ...

ಇಗೊ ಸಂಜೆ, ಸಖಿ

ಇಗೊ ಸಂಜೆ, ಸಖಿ, ಚೆಂಬೊಗರಿಂ ರಂಗೇರಿಹ ಜಲದಾಬ್ಜಮುಖಿ ತುಸ ತುಟಿತೆರೆದು ಶಿಶುಚಂದ್ರನ ನಗೆ ನಗುವಳು ಸ್ವಾಗತವೊರೆದು; ನಿನ್ನು ಸಿ‌ರ್‌ ಕಂಪ ಕೊಳ್ಳಲು ಎಲರ್ ತರುತಿಹನೀ ಬನದಲರಿಂಪ; ಓ ಚಪಲಾಕ್ಷಿ, ಎನ್ನೆದೆಯಾಗಸದೊಳು ಬಿಡು ಅಕ್ಷಿಯ ಪಕ್ಷಿ,...

ಸಂಜೆಗಾಳಿಗೆ ಜಳಕ ಮಾಡಿಸೆ

ಸಂಜೆಗಾಳಿಗೆ ಜಳಕ ಮಾಡಿಸೆ ಹನಿತು ಮಳೆ ಹೊಳೆಯೋಡಿತು ಬಾನ್‌ ಬೆಸಲೆ ಶಶಿ ನೋಡಿ ನಗುತಿರೆ ತಿರೆಗೆ ತಂಗದಿರಾಯಿತು. ಮುಗಿಲ ರೆಂಬೆಯ ಮೇಲೆ ಮಿಂಚಿನ ಹಕ್ಕಿ ರೆಕ್ಕೆಯ ಕೆದರುತ ಹವಣಿಸಿದೆ ಉಡ್ಡೀನ ಲೀಲೆಗೆ ಚಂದ್ರಲೋಕವ ಬಯಸುತ....