ಉಮರನ ಒಸಗೆ – ೧೩

ಮರೆಯದಿರು ; ನಮ್ಮ ಪೂರ್‍ವಿಕರು, ಸಂಮಾನಿತರು, ಕಾಲ ವಿಧಿಗಳವರ್‍ಗೆ ಪೇಯಗಳ ನೀಯೆ, ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ, ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್. *****

ಉಮರನ ಒಸಗೆ – ೧೨

ಜಾಂಷೆದನು ಹಿಗ್ಗಿ ಮೆರೆಯುತ್ತಿದ್ದ ಮಂಟಪದಿ ಹಲ್ಲಿ ಹೆಗ್ಗಣಗಳಿಂದೆಸೆವುವೋಲಗದಿ! ಮಲಗಿ ಬೈರಾಮ ವೀರನು ನಿದ್ರಿಸಿರ್‍ಪಲ್ಲಿ ಕಾಡುಕತ್ತೆಗಳವನ ತಲೆಯ ತುಳಿಯುವುವು! *****

ಉಮರನ ಒಸಗೆ – ೧೦

ನೋಡಾ ಗುಲಾಬಿ ತಾನರಳಿ ಸಾರುವುದಿಂತು: "ಜಗದೊಳಕೆ ನಾಂ ಬಂದು ನಗು ನಗುತೆ ನಿಂತು, ಬಿಗಿದಿರದೆ ಪಟ್ಟು ಚೀಲವನಿತ್ತ ಬಿಚ್ಚುತ್ತೆ ಮಗ ಮುಗಿಪ ನಿಧಿಯನೆಲ್ಲವನೆರೆಯುತಿಹೆನು." *****

ಉಮರನ ಒಸಗೆ – ೮

ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. *****