ನಂದಾದೀಪ!

೧ ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ ! ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ ! ಚಿನ್ನದ ಮುದ್ದಿಯ ಮೂರ್ತಿಯನಿಟ್ಟಿ ! ಎಡಬಲ ನಂದಾದೀಪಗಳಿಟ್ಟಿ ! ೨ ಹಗಲಿರುಳೆನ್ನದೆ ಕಾಯುತಲಿರುವಿ! ತಾಳ ತಂತಿಗಳ ಬಾರಿಸುತಿರುವಿ ! ಸವಿ...

ಡೊಂಬರಾಟ!

ಡೊಂಬರಾಟ ! ಡೊಂಬರಾಟ ! ಧನಿಯಮುಂದೆ ಡೊಂಬರಾಟ ! ಕೋಟೆಗೋಡೆ ಮಧ್ಯದಲ್ಲಿ ಕಾಡುಕಿಚ್ಚು ಬಿಸಿಲಿನಲ್ಲಿ ಹೊಟ್ಟೆ ಹಸಿದ ಹೊತ್ತಿನಲ್ಲಿ ಒಳಗೆ ಒಳಗೆ ಒಡಲಿನಲ್ಲಿ ! ಡೊಂಬರಾಟ ! ಡೊಂಬರಾಟ ! ಧನಿಯಮುಂದೆ ಡೊಂಬರಾಟ !...

ಭೂಕಂಪ

೧ ಪೃಥ್ವಿಯ ಒಡಲೊಳಗಿರುತಿಹುದೇನು ? ತಳಮಳ ಕಾಯ್ದಿಹ ಲಾವಾರಸವು ! ಭೂಮಿಯು ಗದಗದ ನಡುಗುತಿದೆ ! ಸಾಗರ ಕೊನೆ ಮೊದಲಾಗುತಿದೆ ! ಗಿಡವದು ಬುಡಮೇಲಾಗುತಿದೆ ! ಪಶುಗಳ ಪ್ರಾಣವು ಪೋಗುತಿದೆ ! ಮಾನವಕೋಟಿಯು ಮುಳುಗುತಿದೆ...

ಭೂಲೋಕ-ಯಮಲೋಕ

ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ದೈತ್ಯರೆಂಬವರ ಕರೆಕಳಿಸಿ ಹೊಟ್ಟೆಗೆಂಬವರ ಹಿಡಿದೆಳಿಸಿ ಮುಟ್ಟದೆ ಮೈದೊಗಲನು ಸುಲಿಸಿ ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ಒಕ್ಕಲಮಕ್ಕಳ...

ಬಡಭಾರತಿಗೆ

ಏನುಬೇಡಲಿ ಬಂದು ಭಾರತಿಯೆ ನಿನ್ನ | ಮಾನವಂತಿಯೆ ಜನನಿ ಸಲಹು ನೀನೆನ್ನ ||ಪಲ್ಲ|| ಬಂಗಾರ ಬೇಡುವೆನೆ ಬಳಿದೆಲ್ಲ ಪೋಗಿಹುದು | ಶೃಂಗಾರ ಬೇಡುವೆನೆ ಶಿವನ ಮನೆಯು || ಮಂಗನಂತಿಹ ಮನವು ಇಂಗಿತವನರಿಯದಲೆ | ಅಂಗಹೀನನ...

ಓಡುತೆ ಬಾ! ಬಾ!

೧ ಮೂಡಣ ದಿಶೆಯಲಿ ಪಡುವಣ ದಿಶೆಯಲಿ ಮೂಡುವ ಅಡಗುವ ರವಿ ಹೊಂಬಣ್ಣವ ಭರದಲಿ, ಹರುಷದಿ ಹೊಗಳುತಲಿರುತಿರೆ ಕವಿಜನರು; ಚೆನ್ನೆಯೆ ನಿನ್ನಯ ಕನ್ನಡಿ ಹೊಳಪಿನ ಕನ್ನೆಯ ಮೇಲಣ ಕೆಂಬಣ್ಣವ ನಾ ಹೊಗಳುತ ನಿಂತಿಹೆ ಓಡುತೆ ಬಾ!...

ಮಿಂಚು

ಮಿಂಚು ಬಾರೆ ಮಿಂಚು ರಾಣಿ ! ಮುದ್ದು ಮೊಗವ ತೋರೆ ಜಾಣಿ !! ಮುಗಿಲಿನಲ್ಲಿ ಮಲಗಿಕೊಂಡು ಮೋಡಗಳಲಿ ಮುಸುಕಿಕೊಂಡು ಸೂರ್‍ಯನಿಲ್ಲದ ಸಮಯದಲ್ಲಿ ಕತ್ತಲೇರುವ ಕಾಲದಲ್ಲಿ ಕಣ್ಣು ಮುಚ್ಚಲು ಕಾಣಿಸಿಕೊಳ್ಳುವಿ ! ಕೈಯಚಾಚಲು ಕಾಲುತೆಗೆಯುಸಿ !...

ಕುರುಡನ ಕೂಗು

ಕತ್ತಲು, ಕತ್ತಲು, ಸುತ್ತಲು ಕವಿದಿದೆ ಬೆಳಕೆಂಬುವದನು ತೂರುವಿರಾ ? ಅಪಾರ ಗಗನವು ಇರತಿಹುದಂತೆ ! ತಾರಾಗಣದಿಂ ತೋರುವುದಂತೆ ! ಕಾರ್‍ಮೋಡಗಳಿ೦ ಮುಸುಕಿಹುದಂತೆ ! ಚಂದ್ರ ಸೂರ್‍ಯರಲ್ಲಿರುತಿಹರಂತೆ ! ಜಗವನು ಬೆಳಗಲು ನಿಂದಿಹರಂತೆ ! ರಾಹು...

ನನ್ನ ಕವಿತೆ

ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು ಮನಸಾರೆ ನಗುವಿಯೇತಕೆ ಅಣ್ಣ? ನೀ ನಗುವಿಯೆಂಬುದ ಮರೆತು ನಾ ಕವಿತ ಕಟ್ಟಿಲ್ಲ. ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ. ಕವಿಕಂಠೀರವರ ಕೀರ್‍ತಿಯನೆ ಬಯಸಿಲ್ಲ. ನನ್ನೆದೆಯ ದನಿ ನುಡಿಸಿದುದ...

ಸರಸ್ವತಿಗೆ

ತಿಳಿಗೊಳದ ತೀರದಿಹ ತನಿಗಲ್ಲ ಗದುಗೆ- ಯನೇರಿ ಸರದ ಸುಯ್ಯನೆ ಶೃತಿಯಲ್ಲಿ ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ ನವಿಲು ನೃತ್ಯಕೆ ತಾಳ ಮೇಳೈಸಿ ವೀಣಾತರಂಗ ತನ್ಮಯಳೆ ತಾಯೆ ತರವೇನೆ ನಿನಗೀಪರಿಯು? ಕನ್ನಡ ತಾಯ ತಾಪತ್ರಯಂಗಳಂ ಎವೆಯಿಕ್ಕದನುದಿನ...