ಮನವಿದ್ದೆಡೆ ಮಾರ್ಗ

ಜಡವಾಗದಿರು ಶಿಲೆಯಾಗದಿರು ಇದ್ದು ಸತ್ತಂತೆ ಜೀವನದ ಪಯಣವಿದು ಹೋರಾಟದಂತೆ ಏಳು ಎದ್ದೇಳು ಬಡಿದೆಬ್ಬಿಸು ಚೇತನವ ಹೂಡಿದೋಡಿಸು ಜಡತೆಯ ಅರೆಗಳಿಗೆಯ ವಿಶ್ರಾಂತಿ ಅಳಿವಿನ ದಾರಿಗೆ ರಿಯಾಯಿತಿ ನೀ ಹೇಗಿದ್ದರೇನು? ಎಲ್ಲಿದ್ದರೇನು? ಕನಸು ನನಸಾಗಿಸುವ ಗುರಿ ಮುಂದಿರಲಿ...

ಯುದ್ಧ

ಯುದ್ಧ ಯುದ್ಧ ಯುದ್ಧ ಎಲ್ಲೆಲ್ಲೂ ಯುದ್ಧ! ದೇಶ ದೇಶಗಳ ಗಡಿಗಳಲ್ಲಿ, ದ್ವೇಷದ ಉರಿಹತ್ತಿದಲ್ಲಿ, ಮತಾಂಧತೆಯ ಮರುಳು ಮುತ್ತಿದಲ್ಲಿ ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ. ಉರುಳುವುದು ಹೆಣಗಳ ಸಾಲು ಸಾಲು....

ನೆಮ್ಮದಿಯ ತಾಣ

ಬದುಕಿನ ಸಂತೆಯಲಿ ಚಿಂತೆಯ ಹೊರೆ ಹೊತ್ತು ವ್ಯರ್ಥ ಬಳಲಿಕೆಯಲಿ ತೊಳಲುವೆ ಏಕೆ? ಬದುಕಿದು ಮೂರು ದಿನ ಸುಖ ದುಃಖ ಸಮಗಾನ ನಶ್ವರವು ಜೀವನದ ತಾನ ಸಂತೋಷವೇ ಸುಖದ ಸೋಪಾನ ಬರುವ ನಾಳೆಯ ಕುರಿತು ಸುಮ್ಮನೇತಕೆ...

ಮನಸ್ಸು-ಕಡಲು

ಹುಟ್ಟು ಎಲ್ಲೊ ಹರಿವುದೆಲ್ಲೂ ಸೇರುವುದೊಂದೆ ಕಡಲಿಗೆ ನೀರು ಯಾವ ನದಿಯದಾದರೇನು ಕಡಲ ಒಡಲಿಗಿಲ್ಲ ಭೇದಭಾವ ಹರಿದು ಬಂದುದೆಲ್ಲ ಸ್ವಾಹಾ! ಹುಟ್ಟುವಾಗ ಎಲ್ಲರೊಂದೆ ಬೆಳೆಯುವಾಗ ಹಲವು ಜಾತಿ ಹಲವು ಮತ ಸತ್ತ ಮೇಲೆ ಒಂದೇ ಕಾಟ...

ಸುಖಜೀವನ

ಬದುಕಿನ ರಣಾಂಗಣದೆ ಮೋಹಪಾಶಗಳ ಬ್ರಹ್ಮಾಸ್ತ್ರ ಬಂಧನದೆ ಬಳಲುವ ಮನುಜನಿಗುಂಟೇ ಜೀವನ ಹಣ ಅಧಿಕಾರ ಅಂತಸ್ತು ಮಾಯಾಮೃಗದ ಬೆನ್ನೇರಿ ನಿರಾಸೆಯ ಕೂಪಕ್ಕೆ ಬೀಳುವ ಮನುಜನಿಗುಂಟೇ ಸುಖಜೀವನ ನೂರೆಂಟು ಸಮಸ್ಯೆಗಳ ಸುಳಿಯಲಿ ಸಿಕ್ಕು ಚಿಂತೆಯ ಚಿತೆಯ ಮೇಲೆ...

ಮೌನ

ಅಮ್ಮನೇಕೆ ಮೌನವಾಗಿದ್ದಾಳೆ? ನಕ್ಕು ನಲಿದು ನಮ್ಮೊಡನಾಡಿದ ಬೈದು ಹೊಡೆದು ನಮ್ಮ ತಿದ್ದಿದ ಅಮ್ಮನೇಕೆ ಮೌನವಾಗಿದ್ದಾಳೆ? ನೋವು ನಲಿವು ಎಲ್ಲ ತಿಂದು ಏರು ಪೇರುಗಳಲಿ ಈಜಿ ನಮ್ಮ ಜೀವಚೇತನವಾಗಿದ್ದ ಅಮ್ಮನೇಕೆ ಮೌನವಾಗಿದ್ದಾಳೆ? ಪ್ರೀತಿಯ ಹಲವು ಹರವುಗಳ...

ಅಂಗಳಕ್ಕೊಂದು ಚಿತ್ತಾರ

ಬರೆಯಬೇಕು ಚಿತ್ತಾರ ಅಂಗಳಕ್ಕೊಂದು ಶೃಂಗಾರ ಕಸಕಡ್ಡಿ ಕಲ್ಲು ಮಣ್ಣು ಗುಡಿಸಿ ತೊಳೆದು ಬಳಿದು ನೆಲವಾಗಬೇಕು ಬಂಗಾರ ಬರೆಯಬೇಕು ಚಿತ್ತಾರ ಚಿತ್ತಾರವಾಗಬೇಕು ಸುಂದರ ಉದ್ದ ಗೆರೆಗಳಾದರೆ ಲೇಸು ಅಡ್ಡ ಗೆರೆಗಳಾದರೆ ಸಲೀಸು ಸಣ್ಣ ಚುಕ್ಕಿ ದೊಡ್ಡ...

ಕಾಣೆಯಾಗಿವೆ

ಮನೆಯ ತುಂಬ ಹಾರಿಕೊಂಡು ಅಡುಗೆ ಮನೆಗೆ ನುಗ್ಗಿಕೊಂಡು ಅಂಗಳದಲ್ಲಿ ನಲಿದುಕೊಂಡು ನಮ್ಮ ನೋಡಿ ಹೆದರಿಕೊಂಡು ಬುರ್ರೆಂದು ಹಾರಿ ಹೋಗಿ ಮತ್ತೆ ಮತ್ತೆ ಇಣುಕುತ್ತಿದ್ದ ಚಿಲಿಪಿಲಿ ಹಾಡಿಕೊಂಡು ಮಕ್ಕಳಿಗೆ ಕುಶಿ ಕೊಡುತ್ತಿದ್ದ ಗುಬ್ಬಚ್ಚಿಗಳೆಲ್ಲಿ ಕಾಣೆಯಾದುವು? ಅಕ್ಕಿ...

ತ್ರಿಶಂಕು ಸ್ಥಿತಿ

ಮುಗಿಲೆತ್ತರ ಏರುವ ಹಾರುವ ತೇಲಾಡುವ ಬಯಕೆ ಬಲಿತು ಹೆಮ್ಮರ ಕಡಿದಾದ ದಾರಿ ಬಲುದೂರ. ಕಾಣದ ತೀರ ಗುರಿ ಸೇರುವ ಕಾತುರ ಹುಚ್ಚು ಮನಸ್ಸಿಗಿಲ್ಲ ಕಡಿವಾಣ ಪುಂಖಾನುಪುಂಖ ನಿರಾಸೆಯ ಬಾಣ ಆಸೆಗಳು ಆಗಸದಷ್ಟು ಕನಸುಗಳು ಕಡಲಿನಷ್ಟು...

ಓಯಸಿಸ್

ಜೀವನದ ಮುಸ್ಸಂಜೆಯಲಿ ಜವಾಬ್ದಾರಿಗಳೆಲ್ಲವ ಕಳೆದು ನಾವೇ ನಾವಾಗಿರಬೇಕೆಂದು ನಾವೇ ಕಟ್ಟಿದ ಗೂಡಲ್ಲಿ ನೆಲೆಯೂರಿದಾಗ ನಮ್ಮನ್ನು ನಾವು ಕಳಕೊಂಡಿದ್ದೆವು. ಎದುರಿಗಿದ್ದ ಮರುಭೂಮಿಯಲಿ ಹುಡುಕಹೊರಟಾಗ ಸಿಕ್ಕಿದ್ದೆಲ್ಲ ಬರೆ ಮರುಳು! ಪ್ರೀತಿಯ ಹಸಿರಿರಲಿಲ್ಲ ಒಲವಿನ ಹೂವಿರಲಿಲ್ಲ ಅರಿವಿನ ಸಿಂಚನವಿರಲಿಲ್ಲ...