ಯುದ್ಧ ಯುದ್ಧ ಯುದ್ಧ ಎಲ್ಲೆಲ್ಲೂ ಯುದ್ಧ! ದೇಶ ದೇಶಗಳ ಗಡಿಗಳಲ್ಲಿ, ದ್ವೇಷದ ಉರಿಹತ್ತಿದಲ್ಲಿ, ಮತಾಂಧತೆಯ ಮರುಳು ಮುತ್ತಿದಲ್ಲಿ ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ. ಉರುಳುವುದು ಹೆಣಗಳ ಸಾಲು ಸಾಲು....
ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು, ನನಗು ಗಟ್ಟಿಗನೊಬ್ಬ ನಿನ್ನ ಹೆಸರನು ಬಳಸಿ ಸಮೆಸಿರುವ ಅದಕೆಂದೆ ತನ್ನೆಲ್ಲ ಸತ್ವವನು, ಕಟ್ಟಿಹೋಗಿದೆ ನನ್ನ ನಾಲಿಗೆಯೆ ನುಡಿಯಳಿಸಿ. ನಿನ್ನ ಗುಣಶೀಲ ಸಾಗರದಲ್ಲಿ ತೇಲುವುದು ಹಿರಿಜಹಜು ಕಿರುದೋಣಿ ಭೇದ ಏನಿಲ್ಲದೆ....
ಸುಖದ ಸುಪ್ಪತಿಗೆಯಲ್ಲಿ ದಶರಥನಿಗಾದರೋ ತನ್ನ ಸುಖಸಾಮ್ರಾಜ್ಯವನ್ನು ಕಂಡು ಒಂದು ರೀತಿಯ ಆನಂದ ಇನ್ನೊಂದು ಕಡೆ ಭಯ. ತನ್ನ ಸುಖ ಸಂಸಾರಕ್ಕೆ ಯಾರ ಕಣ್ಣು ತಾಗುವುದೋ ಎಂದು. ಮಕ್ಕಳನ್ನು ನೋಡಿದೆ, ಮುದ್ದಾಡಿದೆ. ದೊಡ್ಡವರನ್ನಾಗಿ ಮಾಡಿದೆ. ಸೊಸೆಯರನ್ನು...