ಗೋಳೆಂದೊಡೇಂ? ಸಾಲ ಸುಳಿಗಾನ ಕಾರಣಮಿರಲು

ಸುಲಭವೆಂದೊಂದು ಬೆಳೆಯನಿರುವೆಲ್ಲ ಜಾಗ ದೊಳು ರೈತ ತಾ ಬೆಳೆದನಿವಾರ್‍ಯದೊಳು ಮಾರುವ ನೆಲ್ಲವನು ನೀಚ ಬೆಲೆಗೆ, ಉಳಿದೆಲ್ಲ ಬೇಕು ಗಳಾನಂತರದೊಳ್ ಕೊಳ್ಳುವನುಚ್ಛ ಬೆಲೆಗೆ ಬೆಲೆಯಿಲ್ಲದಾಗಿಹುದಿದರಿಂದ ರೈತಂಗಾತನುತ್ಪನ್ನಂಗೆ - ವಿಜ್ಞಾನೇಶ್ವರಾ *****

ಕೂಡಲೇ

ದಡೂತಿ ಮನುಷ್ಯನೊಬ್ಬ ವೈದ್ಯರೊಬ್ಬರ ಬಳಿ ಬಂದು ಕೇಳಿದ- "ಡಾಕ್ಟ್ರೆ ಕೂಡಲೇ ನಾನು ಇಪ್ಪತ್ತು ಪೌಂಡ್ ತೂಕವನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು" ಡಾ|| ಶೀಲಾ: "ನಿಮ್ಮ ಎರಡು ಕಾಲು ಕತ್ತರಿಸಿಕೊಳ್ಳಿರಿ..." *****

ತ್ರಿಶಂಕು ಸ್ಥಿತಿ

ಮುಗಿಲೆತ್ತರ ಏರುವ ಹಾರುವ ತೇಲಾಡುವ ಬಯಕೆ ಬಲಿತು ಹೆಮ್ಮರ ಕಡಿದಾದ ದಾರಿ ಬಲುದೂರ. ಕಾಣದ ತೀರ ಗುರಿ ಸೇರುವ ಕಾತುರ ಹುಚ್ಚು ಮನಸ್ಸಿಗಿಲ್ಲ ಕಡಿವಾಣ ಪುಂಖಾನುಪುಂಖ ನಿರಾಸೆಯ ಬಾಣ ಆಸೆಗಳು ಆಗಸದಷ್ಟು ಕನಸುಗಳು ಕಡಲಿನಷ್ಟು...
ವಚನ ವಿಚಾರ – ಹೀಗೆ ಸಂತೋಷ

ವಚನ ವಿಚಾರ – ಹೀಗೆ ಸಂತೋಷ

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ ಗುರುಪಾದವ ಕಂಡು ಧನ್ಯಳಾದೆ ನೋಡಾ [ಅರಲುಗೊಂಡ...

ಭೂಕಂಪ

೧ ಪೃಥ್ವಿಯ ಒಡಲೊಳಗಿರುತಿಹುದೇನು ? ತಳಮಳ ಕಾಯ್ದಿಹ ಲಾವಾರಸವು ! ಭೂಮಿಯು ಗದಗದ ನಡುಗುತಿದೆ ! ಸಾಗರ ಕೊನೆ ಮೊದಲಾಗುತಿದೆ ! ಗಿಡವದು ಬುಡಮೇಲಾಗುತಿದೆ ! ಪಶುಗಳ ಪ್ರಾಣವು ಪೋಗುತಿದೆ ! ಮಾನವಕೋಟಿಯು ಮುಳುಗುತಿದೆ...