
ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ....
ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ ಇರುವುದೇಕೆ ಕೊರಡು ಹೀಗೆ ಹೊರಚೆಲ್ಲದೆ ಬೆಂಕಿ, ಕೂಡಿ ಕಳೆದು...
ಹಸಿವಿಂಗಿಸಿದ ರೊಟ್ಟಿಯ ಧನ್ಯತೆ ರೊಟ್ಟಿಯ ಪಡೆಯಬಲ್ಲ ಹಸಿವಿನ ದಾರ್ಷ್ಟ್ಯದ ಎದುರು ಅಮುಖ್ಯ....
ಬೇವುಬೆಲ್ಲ ತಿನ್ನಬೇಕು ಸಮಾಸಮ ಎಂದರೆ ನಲ್ಲ ಬೇವು ನಿನಗಿರಲಿ ಬೆಲ್ಲ ನನಗಿರಲಿ ಅಲ್ಲಿಗೆ ಸಮ ಅನ್ನುವನಲ್ಲ *****...













