
ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ....
ತಲೆಯಲ್ಲಿ ನೆರೆ, ಕೆನ್ನೆ ಹಣೆಯಲ್ಲಿ ಹಳೆಯ ಬರೆ ಮೈ ಸುಕ್ಕು, ಉಸಿರಾಟ ಕೊಳವೆ ತುಕ್ಕು ಕಾಲೆರಡು ಕೋಲು, ಕೈ ಬೀಳು, ದೃಷ್ಟಿಯೆ ಹಾಳು ಹೊಸ ವರ್ಷ ಬಾ ಬಂದು ನಮ್ಮನ್ನಾಳು ಬುದ್ಧಿ, ಶ್ರಮ, ಹಣ ಎಲ್ಲ ಸುರಿದು ದುಡಿದಿದ್ದೇವೆ ಹಗಲು ಇರುಳೆನ್ನದೇ ನಿದ್ದೆ...
ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ....
ಒಂದು ಪರಿಪೂರ್ಣ ರೊಟ್ಟಿಗಾಗಿ ಎಷ್ಟೊಂದು ಹಸಿವಿನ ಘಳಿಗೆಗಳು ಸಾಯಬೇಕು. ಶುಭ್ರ ಬೆಳಗಿಗಾಗಿ ನಾವೂ ಹಟ ಹಿಡಿದು ಕಾಯಬೇಕು....













