ನೀರಿನ ತೊಟ್ಟಿ

ಸಂಸಾರವೆಂಬುದೊಂದು ನೀರಿನ ತೊಟ್ಟಿ ತುಂಬಲು ಒಂದೇ ನಲ್ಲಿ ಖಾಲಿ ಮಾಡಲು ಹಲವು. ತುಂಬಲು ದೊಡ್ಡ ನಲ್ಲಿ ಖಾಲಿ ಮಾಡಲು ಸಣ್ಣ ನಲ್ಲಿಗಳು ಅವು ಭಾರಿ ಚುರುಕು ಕ್ಷಣದಲ್ಲಿ ತೊಟ್ಟಿ ಖಾಲಿ. ಎಲ್ಲೆಡೆ ಹಾಗೇ ಅಲ್ಲ....

ಶಿಸ್ತು

ಶಿಸ್ತಿರಬೇಕು ನಡೆಯಲ್ಲಿ ನುಡಿಯಲ್ಲಿ ಆಟ-ಪಾಠಗಳಲ್ಲಿ ಕಾಯದಲ್ಲಿ, ಕಾಯಕದಲ್ಲಿ. ಮಾನ ಹೋದೀತು-ಶಿಸ್ತಿಲ್ಲದಿರೆ ಉಡುಗೆ-ತೊಡುಗೆಗಳಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ಹಣಕಾಸು ವಿಷಯಗಳಲ್ಲಿ ತಲೆ ಹೋದೀತು-ಶಿಸ್ತಿಲ್ಲದಿರೆ ಕಾಯ್ದೆ-ಕಾನೂನಿನಲ್ಲಿ ರೀತಿ-ನೀತಿಯಲ್ಲಿ ರತಿಯಲ್ಲಿ ಮತಿಯಲ್ಲಿ. ಜೀವ ಹೋದೀತು-ಶಿಸ್ತಿಲ್ಲದಿರೆ ಸ್ನಾನ-ಪಾನಗಳಲ್ಲಿ ಊಟ-ಉಪಚಾರಗಳಲ್ಲಿ ಪಥ್ಯದಲ್ಲಿ ಔಷಧದಲ್ಲಿ: ದೇಶವೇ...

ಹೊಟ್ಟೆ

ಈ ನನ್ನ ದೇಹದ ಎಲ್ಲ ಅವಯವಗಳು ಒಂದೇ ಆದರೂ ನಾ ದುಡಿಯುವುದು ಹೊಟ್ಟೆ-ನಿನ್ನ ತುಂಬಿಸಲು ಈ ನನ್ನ ಕಾರ್ಯದಲ್ಲಿ ಮರೆತೆ ಬುದ್ಧಿ ಬೆಳೆಸಲು. ಬೆನ್ನಿಗಂಟಿದ ಹೊಟ್ಟೆ ನಿನ್ನ ಮುಂದೆ ತರಲು ನಾ ಪಟ್ಟ ಪಾಡೇನು?...

ಬಡತನ

ಬಡತನವೆಂದು ಬೇಸರವೇ? ಯಾರಿಗಿಲ್ಲ ಬಡತನ? ಸುಖ ಕೊಡುವುದಿಲ್ಲ ಸಿರಿತನ ಸಿರಿವಂತರ ಚಿಂತೆ ಹಲವು ನಮಗಿಲ್ಲ ಅದರ ಗೊಡವು ನಮಗೆ ಬರಿಯ ಹೊಟ್ಟೆ ಚಿಂತೆ ಮಲಗಲಿದೆ ದೊಡ್ಡ ಸಂತೆ ಯಾರೋ ಉಟ್ಟು ಬಿಟ್ಟ ಬಟ್ಟೆ ನಮಗಿದ್ದೇ...

ಶಿವರಾತ್ರಿ ಜಾಗರಣೆ

ಏನು ಹೇಳಲಿ ನಮ್ಮ ಶಿವರಾತ್ರಿ ಜಾಗರಣೆಯ ಪಿಶಾಚಿಗಳಂತೆ ರಾತ್ರಿ ಎಲ್ಲವ ಕಳೆದು, ಬೀದಿ ಬೀದಿಯ ಸುತ್ತಿ ಬೊಗಳುತಿಹ ನಾಯಿಗಳ ಮುಂದೆ, ನಗರ ಕಾಯುತಿಹ ಪೊಲೀಸರ ಹಿಂದೆ, ಅಲೆದಲೆದು ಶಿವನ ಗುಡಿಯ ಮುಂದೆ, ದಾಸರ ಶಿವಕಥೆಯ...

ಕೋಳಿ

ಒಂದು ಕಾಲವಿತ್ತು ಆಗ ನನ್ನ ಕೂಗಿನಿಂದಲೇ ಬೆಳಗಾಗುತ್ತಿತ್ತು ಮುಂಜಾನೆಗೆ ಹೆಸರೇ ಇತ್ತು "ಕೋಳಿ ಕೂಗೋ ಹೊತ್ತು" ಎಂದು. ನಾನು ಕೂಡ ಸುಂದರ ಬಾತುಗಳಂತೆ ರಾಜ ಹಂಸಗಳಂತೆ. ನನಗೂ ಮೋಹಕ ನಡಿಗೆ ಇತ್ತು ದೊಡ್ಡ ಸಂಸಾರವಿತ್ತು...

ಅಂಗರಕ್ಷಕ

ರಾಜಮಹಾರಾಜರ, ಚಕ್ರವರ್ತಿ ಬಾದಶಹರ ಜೀವ ಕಾಪಾಡಲು, ನೆರಳಂಬಂತೆ ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ. ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ, ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ. ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ. ನಾನಿಲ್ಲ ಅವನಿಲ್ಲ... ಆಗ,...

ಸಾವು

ಪ್ರಾಣ ಇದ್ದವು ಅದನ್ನು ಕಳೆದುಕೊಂಡಾಗ ಸಂಭವಿಸುವುದು ಸಾವು. ಸೂಕ್ಷ್ಮಾತಿ ಸೂಕ್ಷ್ಮಜೀವಿ, ಜಲಚರ, ಪಶು, ಪಕ್ಷಿ ಸಕಲ ಸಸ್ಯ, ವೃಕ್ಷ ದೈತ್ಯ ಕಾಯ ಎಲ್ಲಕೂ ನಿಶ್ಚಿತ.. ಸಾವು. ‘ಜಾತಸ್ಯ ಮರಣಂ ಧೃವಂ’. ಮಾನವನ ಮಾತೇ ಬೇರೆ....

ಕನಸುಗಾರರು

ಬ್ರೋಕರ್ ಒಂದು ಒಳ್ಳೆಯ ಮನೆ ತೋರಿಸುವುದಾಗಿ ಕರೆದೊಯ್ದ. ಬಹಳ ಉತ್ಸಾಹದಿಂದ ವಿವರಿಸಿದ ಇದು ಪೋರ್ಟಿಕೋ, ಇದು ವರಾಂಡಾ ಇದು ದೊಡ್ಡ ಹಾಲು, ಇದು ದೇವರ ಮನೆ ಇದು ಬೆಡ್ರೂಮು, ಇದು ಅಡುಗೆ ಮನೆ ಇಲ್ಲಿ...

ಕಾಣೆಯಾದವರು

ಪ್ರತಿ ಮುಂಜಾನೆ... ಪತ್ರಿಕೆಗಳಲ್ಲಿ ಸುದ್ದಿ... ಜಾಹೀರಾತು, ಪ್ರತಿ ದಿನ... ಆಕಾಶವಾಣಿಯಲ್ಲಿ ಪ್ರತಿ ಸಂಜೆ... ದೂರದರ್ಶನದಲ್ಲಿ ತಪ್ಪದೆ ಬಿತ್ತರಿಸುವ ಕಾರ್ಯಕ್ರಮ - ಕಾಣೆಯಾದವರು! ಬರಿಯ ನಮ್ಮೂರಿನಲ್ಲಿಯೇ ದಿನಕ್ಕೆ ನಾಲೈದು ಜನ. ಬೇರೆ ಬೇರೆ ಕೇಂದ್ರಗಳಲ್ಲಿ ನೂರಾರು...