Home / Kannada Poetry

Browsing Tag: Kannada Poetry

ನುಡಿ ಮನವೆ ನುಡಿ ಮನವೆ ಕನ್ನಡ ನನ್ನದೆಂದು ನುಡಿ ಮನವೆ ನುಡಿಯಿದುವೆ ನವ ಚೇತನವು ಬಾಳಿಗೆ|| ನುಡಿಯದಿರಲೇನು ಚೆನ್ನ ನುಡಿ ಇದುವೆ ಕಸ್ತೂರಿ ರನ್ನ ನೀ ತಿಳಿಯೆ|| ತಾಯ್ ನುಡಿಯಿದುವೆ ಸವಿ ಜೇನು ಸಿಹಿ ಜೇನು ಸವಿಯದಿರಲೇನು ನೀನು ನೆಲೆಯಿಲ್ಲದಿರಲೇನು ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕಾದಾಟ ನಡೆಸಿದ ದೇಹದೊಡನೆ; ನೇರ ನಡೆದಿದೆ ದೇಹ, ಗೆದ್ದು ತಾನೇ. ಹೋರಾಟ ಹೂಡಿದ ಹೃದಯದೊಡನೆ; ಕಳೆದುಕೊಂಡ ಶಾಂತಿ ಮುಗ್ಧತೆಯನೆ. ಭಾರಿ ಕಾಳಗವಾಗಿ ಬುದ್ದಿಯ ಜೊತೆ ಹೆಮ್ಮೆಯ ಹೃದಯ ಈಗ ಗತಿಸಿದ ಕಥೆ. ದೇವರೊಂದಿಗೆ ಇನ್ನು...

ಮೂಗ ಆದಂಗ್ ಆಗ್ತೀನ್ ನಾನು ನನ್ ಪುಟ್ನಂಜಿ ನಕ್ರೆ! ಆಡಬೇಕಂದ್ರೆ ಮಾತೇ ಸಿಕ್ದು ಉಕ್ ಬರ್‍ತಿದ್ರೆ ಅಕ್ರೆ- ನನ್ ಪುಟ್ನಂಜಿ ನಕ್ರೆ! ೧ ಲಕ್ಕಂತ್ ಮತ್ತ್ ನಂಗ್ ಅತ್ಕೋಂತೈತೆ ನನ್ ಪುಟ್ನಂಜಿ ನಕ್ರೆ! ಝಮ್ಮಂತ್ ಇಗ್ತ ಪದವಾಡ್ತೀನಿ ಆ ಮತ್ತ್ ನನಗಾಗ್ ಮ...

ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು ಯೋಚನೆಯ ಯೋಜನೆಯ ಕುರಿತು ಬೆರೆತು. ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು ನೊಗ ಹೊತ್ತ ರೀತಿಯಿದು ಜಗಕೆ ಹೊರತು. ಇದುವೆ ಮುಕ್ತಾಸನವೊ? ಏನು ಯುಕ್ತಾಸನವೊ? ಕೂಡಿಹವು ಚಿಂತೆ ಚಿಂತನಗಳಿಲ್ಲಿ ಎಡಗೈಯ ಭಾರವನು...

ಇಷ್ಟೊಂದು ದೇವರ ಎಷ್ಟೊಂದು ದೇವರ ಎಲ್ಲೆಲ್ಲಿ ನೋಡಿದರು ದೇವರೆ ದೇವರ ಇಷ್ಟೊಂದು ದೇವರಲಿ ನಿನಗಾರು ದೇವರ ನಿನಗ್ಯಾಕೆ ದೇವರ ನೀನೇ ದೇವರ ಯಜಮಾನ ದೇವರ ಧಣಿಗಳು ದೇವರ ಜನನಾಯಕರು ದೇವರ ಢಣನಾಯಕರು ದೇವರ ಅಂಬಾರಿ ದೇವರ ಜಂಬೂಸವಾರಿ ದೇವರ ಪೂಜೆಯ ದೇವರ ...

ಪ್ರೀತಿಯಿಂದ ಕಟ್ಟಿದ ಅವಳ ನಾಗರೀಕತೆಗಳ ಮೇಲೆ ಕಾಣುತ್ತಿದೆ ನಿಮ್ಮದೇ ಕ್ರೂರ ಮುದ್ರೆ ಅವಳೇ ಕಟ್ಟಿದ ಸಂಸ್ಕೃತಿಗಳ ಮೇಲೆ ಇರಲಿ ಬಿಡಿ ಅವಳದೇ ಮುದ್ರೆ, ನಿಲ್ಲಿಸಲಿ ಬಿಡಿ ಅವಳದೇ ಸೌಧ ತೋರಿಸಲಿ ಬಿಡಿ ಲೋಕಕ್ಕೆ ಹೊಸ ಸೂರ್‍ಯೋದಯ ಕೇಳಲಿ ಬಿಡಿ ಹೊಸ ಸುಪ...

ತನ್ನೊಲಶೇಷ ಜೀವಿಗಳನೋವುತ ನೋಯಿಸದಿರ್ಪರಾವಗಂ, ಧರ್ಮಸಮಸ್ತದೊಳ್‌ ಸದೃಶನೀಶ್ವರನೆಂದರಿದಿರ್ಪರಾವಗಂ, ತಾಯಿಳೆಗಾಗಿ ಬಾಳ್ತಳೆದು ಬಾಳ್ಗಳೆದುಂ ಬದುಕಿರ್ಪರಾವಗಂ- ಬೆಳ್ಳಿಯ ಬೆಟ್ಟಮಿಂಗಡಲವೆಲ್ಲಿವರೆಲ್ಲಿಹರಲ್ಲಿಯಲ್ಲಡೆ? ೪ *****...

ನೀ… ಎಳೆ ಬಾಲೆ ನೀರೆ ಎಳೆ ನಿಂಬಿನ್ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗದ್ಹಾಂಗೆ || ಜೋಗದಿ ನೀ ಜಲ ಧಾರೆಯ್ಹಾಂಗೆ ಅರುಣದ ನೀ ಅರುಣ ಕಿರಣದ್ಹಾಂಗೆ ಚಿಗುರಲ್ಲಿ ನೀ ಎಳೆ ಚಿಗುರಿನ್ಹಾಂಗೆ|| ಮೊಗ್ಗಲ್ಲಿ ನೀ ಎ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಮಿದುಳಿನಲ್ಲೇ ಜನರು ಮಾಡುವ ಎಲ್ಲ ವಿಚಾರ – ದಿಂದ ರಕ್ಷಿಸು ನನ್ನ ದೇವ; ಅಮರಗೀತೆಯ ಹಾಡುವಾತ ಅದನ್ನು ತನ್ನ ಮೂಳೆ ಮಜ್ಜೆಗಳಲ್ಲಿ ಬಗೆವ; ಈತ ಬಹಳ ವಿವೇಕಿ ಮುದುಕ ಎಂದೆಲ್ಲರೂ ಹೊಗಳುವೆಲ್ಲದರಿಂದ ರಕ್ಷಿಸು; ನಾನ...

1...7273747576...189

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...