Home / Kannada Poetry

Browsing Tag: Kannada Poetry

ಯೆಂಡ ಕುಡದೋನ್ ಕಂತೇಂತ ಯೋಳಿ ನೆಗದೆ ಯೋಳಾದ್ ಕೇಳು; ಒಂದ್ ದಿನಾರ ಸಾಜಾ ತಿಳಕೊ- ಇದ್ದೇ ಇರತೈತ್ ಗೋಳು! ೧ ಬೀದಿ ದೀಪ ಇರತೈತ್ ಅಂಗೇ! ಇರೋ ಜಾಗದಾಗೇನೆ; ನಡಿತಾನಿದ್ರೆ ನೆಳ್ಳೊಂದ್ ಮಾತ್ರ ಬತ್ತೈತ್ ಯಿಂದಾಗೇನೆ. ೨ ದೀಪದ್ ಬೆಳಕು ಬೇಕಂತ್ ಅಂದ್ರೆ ...

ಮುತ್ತಲದ ನೆತ್ತರವ ಚಿಮ್ಮಿ ಚಿತ್ರಿಸುವ ಹೂ ಸುಗ್ಗಿಯೊಲುಮೆಯ ತಂದೆ ಅಂಚೆಗಾರ. ಅರಿತೊಂದು ಕುಡಿನೋಟ, ತಿಳಿದೊಂದು ಮುಗುಳುನಗೆ, ಬರುವ ಬೆಳಕಿನ ಬನದ ಸಂಚಕಾರ. ತನ್ನ ಸನ್ನಿಧಿಯಲ್ಲಿ ಜೀವಕೋಟಿಯಲೊಂದು ಜೀವ ಹೂ ಬಿಡಲು ಈ ಜನ್ಮ ಧನ್ಯ. ಒಂದರೆಕ್ಷಣದಲ್ಲಿ ...

ಚಂಚಲ ಚಿತ್ತದ ಚುಂ ಚುಂ ಅಳಿಲೇ ಮುಂಜಾವದ ಮೈ ಜುಂ ಜುಂ ಅಳಿಲೆ ಚುಮು ಚುಮು ಬೆಳಕಿಗೆ ಹೊರಟಿಹೆಯಲ್ಲೆ ಆ ಕಡೆ ನೋಡುವಿ ಈ ಕಡೆ ನೋಡುವಿ ಏನೋ ಮರೆತಂತೆಲ್ಲಿ ನೋಡುವಿ ಕಿವಿ ನಿಮಿರಿಸಿ ಮೈ ನವಿರೇಳಿಸಿ ಯಾವಾಗಲು ನೀ ಚುರುಕಾಗಿರುವಿ ಹಿಂಗಾದರ ನೀ ಯಾವಾಗ ಮ...

ಇಸ್ಲಾಂ ಎಂದರೇನು? ಆತಂಕವಾದದೊಂದಿಗೆ ಜೋಡಿಸದಿರಿ ನನ್ನ ಇಸ್ಲಾಂನ್ನು ಅದರ ಬೇರುಗಳು ಪ್ರೀತಿಯಲ್ಲಿವೆ ಅದರ ಸೆರಗಿನಲ್ಲಿ ಗುಲಾಬಿಗಳು ಅರಳಿವೆ ನೆರೆಯವನನ್ನು ಜಾತಿಯಲಿ ಹುಡುಕುವವನು ಇವನಾದರೆ ನೆರೆಯವನು ಹಸಿದಿರುವಾಗ ಉಣ್ಣುವುದು “ಹರಾಮ್&#82...

ಹತೋ ವಾ ಪ್ತವ್ಸ್ಯಸಿ ಸ್ವರ್‍ಗಂ ಜಿ ತ್ವಾವಾ ಭೋಕ್ಷ್ಯಸೇ ಮಹೀಮ್ | ತಸ್ಮಾದುತಿಷ್ಟ ಕೌಂತೇಯ ಯುದ್ಧಾಯ ಕೃತನಿಶ್ಚಯ ತಿ (ಗೀತಾ ೨.೩೭) ಯಾರಂಬರು ಮುಗಿದುವೆಂದು ಬವರಂ? ನಂಬದಿರದು ಮರುಳರ ಮಾತೆ: ನರನೆನ್ನವರಂ ನರನನ್ನೆವರಂ ರಣಾಂಗಣವೆ ಶಾಂತಿಯ ಮಾತೆ! ಶ...

ಕರುನಾಡು ತಾಯ್ನಾಡು ಕನ್ನಡದಾ ಸಿರಿನಾಡು ಕನ್ನಡವು ಎಂದೆನಿತು ನುಡಿ ಮನವೆ|| ಶಿಲ್ಪ ಸಿಂಧೂರ ಕಲ್ಪಧಾರೆಯಲ್ಲಿ ಪವಡಿಸುತಿದೆ ನಿನ್ನಲ್ಲಿ ಅನಂತಬಿಂಬ ಸುಯ್ ಗುಟ್ಟುವ ತಂಗಾಳಿಯಲಿ ಗಾನ ಝೇಂಕಾರ ಕೇಳ ಬರುತಿದೆ ನಿತ್ಯ ಸತ್ಯ|| ಗಗನ ಮೌನ ಸದೃಶ್ಯಧಾರೆಯಲ್...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ರಸ್ತೆ ಇಳಿದು ಬಂದ ಪಾರ್‍ನೆಲ್ ಜಯಕಾರವ ಹಾಕುತ್ತಿದ್ದ ಉತ್ಸಾಹಿಗೆ ಹೇಳಿದ : ‘ಐರ್‍ಲೆಂಡಿಗೆ ಸ್ವಾತಂತ್ರ್ಯ ತಪ್ಪದೆಯೇ ಸಿಗುವುದು ನಿನಗೆ ಮಾತ್ರ ಕಲ್ಲು ಒಡೆವ ಈ ಕೆಲಸವೆ ಉಳಿವುದು’. *****...

ಆವೀಗ್ ಮುತ್ತ್ ಇಕ್ಕೋದು ವುಲೀಗ್ ಆಲ್ ತಿಕ್ಕೋದು ಚಿಂತೇಗ್ ಎದೇಲ್ ತಾವ್ ಕೊಡೋದು ಎಲ್ಲಾ ಒಂದೇ ತೂಕಿ! ಕೇಳ್ಲೆ ಬೇಡ ಬಾಕಿ! ೧ ಉಗನಿ ಅಬ್ಕೊಂಡಂಗೆ ಕುಟ್ಟಿ ಯಿಡಕೊಂಡಂಗೆ ಗೆದ್ದಿಲ್ನಂಗೆ ಅತ್ಕೊಂಡ್ ಬಂದಿ ಮನಸನ್ ಮುರದ್ ಮುಕ್ಕೋಂತೆ ದೊಡ್ದೀ ಮಾರಿ-ಚಿ...

ಹೆಸರಿಲ್ಲದಿಲ್ಲಿ ಎಸೆಯುವದು ಹೂವಿನ ಪಸರ. ಮರ ಮರದ ಮೆರೆದಾಟವಿರಲಿ ಸುತ್ತ; ಪಶುಗಳಾರ್‍ಭಟೆ, ಮೃಗದ ಎಡೆಯಾಟ, ಹುಳಹುಪ್ಪ- ಡಿಯ ಕಾಟ ನಡೆದಿರಲಿ ನೋಡಿದತ್ತ. ನೋಡುವರು, ನೋಡಿ ನಲಿದಾಡುವರು ಕೊಂಡು ಕೊನೆ- ದಾಡುವರು ಇಲ್ಲದಿರೆ ಏನು ಕೊರತೆ? ಬೆಟ್ಟದೆದೆ...

ಊರಿಗೆ ಬಂದಾರೆ ಚೆಲುವೆಯರು ಪಲ್ಲಂಗದಲವರ ಕುಳ್ಳಿರಿಸಿ ತನ್ನಿ ನಾಕು ಜನ ಅವರ ಮುಂದಕ್ಕೆ ಬನ್ನಿ ನಾಕು ಜನ ಅವರ ಹಿಂದಕ್ಕೆ ಬನ್ನಿ ಪಲ್ಲಂಗದಲ್ಲವರ ಎತ್ತಿಕೊಂಡು ಬನ್ನಿ ಊರಿಗೆ ಬಂದಾರ ಚೆಲುವೆಯರು ಲಾವಂಚದ ಬೀಸಣಿಗೆ ಬೀಳ್ಕೊಂಡು ತನ್ನಿ ನಾಕು ಜನ ಅವರ ...

1...6364656667...189

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...