ಹಾಡು ಕೋಗಿಲೆ

ಹಾಡುವ ಕೋಗಿಲೆಯೇ ಏಕೀ ಮೌನ ದುಮ್ಮಾನ ಹೊಸ ವರುಷಕೆ ಹೊಸ ಪಲ್ಲವಿಯ ಹೊಸ ತಾನದೆ ಹಾಡು ನೀನು ಮುನಿದ ಮನಗಳ ಬೆಸೆದು ಪ್ರೇಮ ಪಾಶದೆ ಬಿಗಿದು ಒಲವು ಚೆಲುವುಗಳ ಧಾರೆಯೆರೆದು ಎದೆ ತುಂಬಿ ಹಾಡು...

ಬಿಡುಗಡೆ

ಬಂಧನಗಳ ಕಳಚಿ ಬಂಧಮುಕ್ತಳಾಗಬೇಕೆಂದರೂ ಅದು ನಿನ್ನಿಂದಾಗದು. ನೀನು ಮಮತೆಯ ಕವಚದೊಳಗೆ ಸದಾ ಬ೦ಧಿ. ತೊಡರುತ್ತವೆ ನಿನ್ನ ಕಾಲಿಗೆ ಪ್ರೀತಿಯ ಸಂಕೋಲೆಗಳು, ಬಿಡಿಸಿ ಕೊಳ್ಳಲಾಗದ ಬಂಧನಗಳು, ನಿನಗಲ್ಲೇ ತೃಪ್ತಿ, ನಿನಗಲ್ಲೇ ಮುಕ್ತಿ, ಅದೇ ನಿನ್ನ ಶಕ್ತಿ!...

ಬೋಳು ಮರ

ಅಚ್ಚರಿಯ ನೋಟವದೇಕೆ ನಿಟ್ಟುಸಿರ ಬಿಡುವಿರೇಕೆ ಅರೆಗಳಿಗೆ ದಿಟ್ಟಿಸಿ ನೋಡಿರಿ ಕಲಾವಿದನ ಕರಚಳಕದೆ ಅವಿರ್ಭವಿಸಿದ ಕಲ್ಪನೆಯ ಚಿತ್ರವೇ ದೇವನ ಸೃಷ್ಠಿಯ ವೈಚಿತ್ರವೇ ಅಲ್ಲ ನಿಮ್ಮೆದುರು ನಿಂತಿರುವ ನಾನೊಂದು ಬೋಳು ಮರ ಗತ ಕಾಲದೆ ನಾನಾಗಿದ್ದೆ ಫಲಭರಿತ...

ಭಯೋತ್ಪಾದಕರು

ಯಾರಿವರು ಭಯೋತ್ಪಾದಕರು ಎಲ್ಲಿಂದ ಬಂದವರು? ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು? ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ? ಇಲ್ಲವಾದರೆ ಹೇಗವರು ಒಂದೇ ರೀತಿ? ಹೃದಯ ಮನಸ್ಸು ಇಲ್ಲದವರು ಮತಾಂಧರಾಗಿ ಮಾನವೀಯತೆಯ ಮರೆತವರು. ಭಯೋತ್ಪಾದಕರು! ಎಲ್ಲೆಲ್ಲೂ ಭಯೋತ್ಪಾದಕರು...

ವರ್ಷ ಕಾಲ

ವರ್ಷಾ ಬಂತು ಹರುಷ ತಂತು ಎಲ್ಲರೆದೆಯಲಿ ಹಸಿರು ತುಂಬಿ ಉಸಿರು ಬಂತು ಭೂಮಿಯ ಮೊಗದಲಿ ಹನಿ ಹನಿ ಮುತ್ತಾಗಿ ಚೆಲ್ಲಿ ಧರೆಗಿಳಿದು ಹಾರವಾಗಿ ಕಡಲ ಕೊರಳ ಬಳಸಲೆಂದು ವಧುವಂತೆ ನಾಚುತ ಬಂತು ಹೊಳೆ ಹಳ್ಳ...

ಪರಿಸರ ಮಾಲಿನ್ಯ

ಮಲಿನವಾಗಿದೆ ಪರಿಸರ ಗಾಳಿ ನೀರು ಭೂಮಿ ಎಲ್ಲ ಹಾಳುಗೆಟ್ಟಿದ ಪರಿಸರ ಮನಸ್ಸು ಹೃದಯ ಭಾವ ಎಲ್ಲ. ಮಲಿನವಾಗಿದೆ ಪರಿಸರ ಮರೆತು ಹೋಗಿದೆ ಸದ್ಭಾವ ಮಡುಗಟ್ಟಿ ರಾಡಿಯಾಗಿದೆ ಮಾನಸ ಸರೋವರ. ಮಾಯವಾಗಿದೆ ಮಾನವೀಯತೆ ಅಟ್ಟಹಾಸ ಗೈದಿದೆ...

ಸುಂದರ ಪರಿಸರ

ಪರಿಸರ ಸುಂದರ ಪರಿಸರ ಜೀವಕೋಟಿಯ ಚೇತನಸಾರ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ ಕಾಣದಾಯಿತೇ ಕಣ್ಮನ ತಣಿಸುವ ಗಿರಿಕಾನನ ಪರಿಮಳ ಸೂಸುವ ಸುಮವದನ ಪಂಚಮ ಸ್ವರದ ಕೋಗಿಲೆಗಾನ ತಂಪು ಸೂಸುವ ತಂಗಾಳಿ ತಾನ ಬರಿದಾಯಿತೇ ಬರಡಾಯಿತೇ ಎಲ್ಲೆಲ್ಲೂ...

ಕಂದರ

ನಾವು ನೀವು ಎಲ್ಲರೊಂದೆ ಆ ದೇವರ ಮುಂದೆ ಆದರೆ ಎಲ್ಲರೂ ಬೇರೆ ಬೇರೆ ಕಾಣದಿರುವ ಅವನ ಹಿಂದೆ. ಜಾತಿ ಮತ ಬೇರೆ ಬೇರ ರೀತಿ ನೀತಿ ಬೇರೆ ಬೇರೆ ಅಲ್ಲೆ ಇದೆ ಭೇದಭಾವ ಒಬ್ಬರನ್ನೊಬ್ಬರು...

ಉಪದೇಶ

ಬಂದೆಯಾ ಬಾ, ಬಂದಾಯಿತಲ್ಲ ಇನ್ನೇಕೆ ಮೀನಮೇಷ. ಮೂರು ಬಿಟ್ಟು ನಿಂತಿರುವ ಅಭ್ಯಾಗತ ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ ನಿನ್ನದೇನು ಹೆಚ್ಚುಗಾರಿಕೆ ಅರವತ್ತರಲ್ಲಿ ನೀನು ಒಬ್ಬ. ಹೊಸ ವೇಷ ಹಳೆ ಹೆಸರು ಬರಿಗೈಯಲ್ಲಿ ಬಂದಿರುವೆಯಾ ಹೇಗೆ? ಏನೇನು...

ಒಡಹುಟ್ಟಿದವರು

ಒಮ್ಮೆ ಹುಟ್ಟುತ್ತೇವೆ ಒಬ್ಬತಾಯಿಯ ಗರ್ಭದಿಂದ ಅಣ್ಣ ತಮ್ಮಂದಿರಾಗಿ, ಅಕ್ಕತಂಗಿಯರಾಗಿ, ಇನ್ನೊಮ್ಮೆ ಸಿಗುವುದೇ ಈ ಯೋಗ? ಮರೆತೇ ಬಿಡುತ್ತೇವೆ ಜಗಳಾಡುತ್ತೇವೆ. ಒಂದೇ ಬಟ್ಟಲಲ್ಲಿ ಉಂಡು ಒಂದೇ ಮನೆಯಲ್ಲಿ ಬೆಳೆದೂ ಒಬ್ಬರಿಗೊಬ್ಬರು ಅಪರಿಚಿತರಾಗುತ್ತೇವೆ; ದಾಯಾದಿಗಳಾಗುತ್ತೇವೆ. ಒಂದೇ ನೆಲದಲ್ಲಿ...