ಓರ್ವ ಭಗ್ನ ಹೃದಯಿ ತನ್ನ ಪ್ರೀತಿ ಭಗ್ನವಾದ ಕತೆ ಹೇಳ ತೊಡಗಿದ. ಮೊದಲು ಕಾಲೇಜಿನಲ್ಲಿ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟು ತನ್ನ ಹೃದಯ ಮುಕ್ಕಾಯಿತು. ಮತ್ತೆ ಇನ್ನೊಂದು ಹುಡುಗಿ ಕಮರ್ಷಿಯಲ್ ಸ್ಟ್ರೀಟಿನಲ್ಲಿ ತಿರಸ್ಕರಿಸಿ ತನ್ನ ಹೃದಯ ಇನ್ನಷ್ಟು ...

ಸಾಲ ಸರ್ಪವು ಬಂದು ಸಂಸಾರ ಸೇರಿತು ಚಿತ್ತ ಚಿತ್ತವನೆಲ್ಲ ಹುತ್ತವ ಮಾಡಿತು. ಸಣ್ಣ ಸಂದೀಲಿ ತೂರಿ ಬಂದಾ ಸರ್ಪ ಹೆಡೆಯತ್ತಿ, ಸತಿಗೆ ಆಯ್ತಲ್ಲ ಸವತಿ ಸವತಿಯ ಸಂತತಿ ಬುಸುಗುಟ್ಟಿ ಬೆಳೆದಂತೆ ಸಂಸಾರದಾಗೆ ಇನ್ನೆಂಥ ಶಾಂತಿ! ಸುತ್ತಿ ಬಳಸಿದ ಸರ್ಪ, ಆಲಿಂಗ...

ಒತ್ತಾಸೆ : ದಿನಾಂಕ ೨೩, ೨೪ ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಆಶಯ ಮಾತುಗಳು/ಲೇಖನ ಬಂಡಾಯ ಇವತ್ತಿಗೂ ಜೀವಂತ. ಇದು ಅವತ್ತು ಇತ್ತು, ಇವತ್ತು ಇಲ್ಲ ಎಂದು ಹೇಳುವವರು ಬಂಡಾಯವನ್ನು...

ಮಂಗಳಂ, ಮೈಸೂರಿನರಮನೆಗೆ ಮಂಗಳಂ. ಜಯದ ಹೆಸರಿನ ಚಾಮರಾಜಂಗೆ ಮಂಗಳಂ. ಮುಮ್ಮಡಿಯ, ನಾಲ್ಮಡಿಯ ದಿವ್ಯ ತೇಜಂಗಳಂ ಒಮ್ಮುಡಿಯೊಳಾಂತೆಸೆವ ಧೀರಂಗೆ ಮಂಗಳಂ. ತಂದೆತಾಯ್ ಪಯಿರಿಟ್ಟ ಪುಣ್ಯದ ಫಲಂಗಳೇ, ಸೋದರನ ಸೌಭಾಗ್ಯದಮೃತ ಕಳಶಂಗಳೇ, ಲಾವಣ್ಯ ಲಕ್ಷ್ಮಿಯರನಾಳ...

ಸೂರ್ಯ ಅಪೂರ್ಣ ಚಂದ್ರ ಅಪೂರ್ಣ ತಾರಾಗಣ ಅಪೂರ್ಣ ಗಗನ ಅಪೂರ್ಣ ಭೂಮಿ ಅಪೂರ್ಣ ವಾರಿಧಿಯು ಅಪೂರ್ಣ ಭೂತ ಅಪೂರ್ಣ ಭವಿಷ್ಯ ಅಪೂರ್ಣ ವರ್ತಮಾನ ಅಪೂರ್ಣ ಅರಿವು ಅಪೂರ್ಣ ಆಯುಸ್ಸು ಅಪೂರ್ಣ ಯುಗ ಯುಗಾದಿ ಅಪೂರ್ಣ ಮಾತು ಅಪೂರ್ಣ ಮೌನ ಅಪೂರ್ಣ ಶಬ್ದಾರ್ಥ ಅಪೂ...

ಚತುರೋವಾಯದಲ್ಲಿ ಘಟ್ಟಿಗನಾದ ಬಾಲಮುಕುಂದನು ತನ್ನ ಮನ ಸ್ಸಿನ ಬಯಕೆಯಂತೆಯೇ ದ್ವಿಜರೀರ್ವರ ಹಟವು ಪೂರ್ಣವಾದರೆ ಯತಿಯ ಮುಂದಿನ ಅವಸ್ಥೆಯು ಹ್ಯಾಗಾದರೇನೆಂಬ ತಾತ್ಕಾಲದ ಪರಿಗಣನದಿಂದ ಸೂಚಿಸಿದ ಉಪಾಯವು ಬುದ್ಧಿವಂತಿಗೆಯ ಲಕ್ಷಣವೆನ್ನಬಹುದು. ವೇದವ್ಯಾಸ ಉ...

ಕೆಲವರು ಬಯಸುತ್ತಾರೆ ತಾವು ಇಡುವ ಪಾದಗಳ ಕೆಳಗೆ ಇರಬೇಕೆಂದು ರತ್ನಕಂಬಳಿಗಳು ಅಮೃತ ಶಿಲೆಗಳು ಡಾಂಬರಿನ ನಯ ನಾಜೂಕಿನ ರಸ್ತೆಗಳು ಆದರೆ ತಮ್ಮ ಕಾಲುಗಳ ಕೆಳಗೆ ಹಿಮಾಲಯ ಪರ್‍ವತಗಳ ಶಿಖರಗಳೆ ಇರಬೇಕೆಂದು ಮೆಟ್ಟಿದವರು ತೇನಸಿಂಗ್, ಹಿಲೇರಿಗಳು *****...

ಹುಟ್ಟೂರು ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ ಹೊಟ್ಟೆ ತುಂಬಿದಂತಾಗುತ್ತೆ ಹಿಟ್ಟು ಕಾರವನ್ನೇ ತಿಂದರೂ ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು ಬಿಟ್ಟ ಮೇಲೆ ದಿಣ್ಣೆ, ದೀಪಾಂತರ...

ಕಿಡಿಯೊಂದೆ! ಅದನು ಸಿಡಿಸುವ ಕೈಯೊಂದೆ!! ಆದರೆ ಪರಿಣಾಮ – ಯಾರು ಬಲಿಯಾದರೆ ಏನಂತೆ? ಊರೇ ಉರಿದರೂ ಏನಂತೆ?? ಸ್ವಾರ್ಥದ ಕಿಚ್ಚು ಹೊರಗೆ ಮುಖವಾಡ ಹೆಜ್ಜೆ ಹೆಜ್ಜೆಗೂ ನರಿಯ ನಾಚಿಸುವ ಅಗಣಿತ ಲೆಕ್ಕಾಚಾರ ಮಾತಲಿ ಜೇನು ಕಣ್ಣಲಿ ಹೊಗೆ ನಾಭಿ ಮೂಲದ...

ಮಂಗಳೂರಿಗೆ ಹೋದನೆಂದರೆ ರಾಮರಾಯನು ಹೊತ್ತಾರೆ ಕದ್ರೆಗೆ ಹೋಗದೆ ಇಲ್ಲ. ಬೆಟ್ಟದಾಚೆಯಿಂದ ಮೂಡಿಬರುವ ಸೂರ್ಯ, ಆ ಎಳೆ ಬಿಸಿಲಲ್ಲಿ ನಗುವ ಬೆಟ್ಟ, ಅದರ ಬುಡದಲ್ಲಿ ತಿಳಿನೀರಿಂದ ಕಂಗೊಳಿಸುವ ಕೆರೆ, ಕೆಳಗೆ ದೇವಸ್ಥಾನ, ಇವುಗಳ ಸೊಬಗನ್ನು ಮನದಣಿಯೆ ಕಂಡು ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...