ನೆನಪಿಸಿಕೊಳ್ಳಬೇಕವರನ್ನೊಮ್ಮೆ

೧ ಸುತ್ತಿ ಸುರುಳಿಗಟ್ಟಿ ಮದೋನ್ಮತ್ತದೊಳು ಸೊಕ್ಕಿ ಹೆಣೆದು ಬಿಗಿದಪ್ಪಿ ನಿರ್ಭಯದೊಳು ಆಕಾಶಕ್ಕೇರಿ ಸೂರ್ಯನನ್ನೊಳಗೆ ಬಿಟ್ಟುಕೊಳ್ಳದ ಪಚ್ಚೆ ಹಸಿರಿನ ಛತ್ರ ಚಾಮರಗಳ ಪಿಸುನುಡಿಗೆ ಮೈ ಬೆವೆತರೂ ಮೆರೆಯುವ ದಟ್ಟ ಕಾನನ ಸುರಿಸುರಿವ ಮಳೆ ಸೊಲ್ಲಿಲ್ಲ ಸೂರಿಲ್ಲ...

ಜಾತ್ರೆ

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ ಅವರಿವರ ಪಾದದ ಗುರುತುಗಳು. ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ...

ಅಜ್ಞಾನ-ಮಗ್ನಾತ್ಮ

ನಿದ್ದೆಯಲ್ಲಿ ಬಿದ್ದೇಕೆ ಆತ್ಮನೇ ಏಳು ಆಳದಿಂದ ಏಳು ಏಳು ಜಗದಗ್ನಿಲಿಂಗವೇ ದೇವಕಿರಣದಂದ ಎತ್ತು ನಿನ್ನ ಮನ, ಎತ್ತು ಹೃದಯಧನ, ಏರು ಯಶದ ತೆಂಗು ತಿಮಿರ-ಗರ್ಭದರ್ಭಕನೆ ಸೂರ್ಯನೇ `ತತ್ತ್ವಮಸಿ'ಯ ನುಂಗು ಏಕ ವಿಶ್ವ, ಸರ್ವಾತ್ಮಸೃಷ್ಟಿಯೇ ಏಳು...

ಚಿಂತಿಸದಿರು ಮನವೇ

ಚಿಂತಿಸದಿರು ಮನವೇ ಜನರ ವಿಪರೀತವ ಕಂಡು ಕುಗ್ಗದಿರು ಜೀವವೆ ಈ ಜಗತ್ತು ವೇಗದಲಿ ಬದಲಾಗುವುದಕೆ ನೊಂದು|| ಜಗ ಓಡುತಿಹುದು ನಾಗಾಲೋಟದಲಿ ಹೊಸ ಹೊಸ ತಂತ್ರಜ್ಞಾನದ ಜೊತೆಯಲಿ| ಜನರೋಡುತಿರುವರು ಕಾಲಸಮಯದಿಂದೆ ಹಣಗಳಿಸುವ ಭರಾಟೆಯಲಿ| ಮರೀಚಿಕೆಯ ಕಂಡು...

ಹೊಸ ಬಾಳ ಬೆಳಕು

(೧೫-೮-೪೭) ಆ ಮಹಾತ್ಮರ ತಪವೊ ಭಕ್ತಿಭಾವದ ಗುಣವೊ ಭಾರತಿಯ ಕಣ್ಣೀರೊ ಉಳಿದವರ ಹಸಿವೊ ಜವಾಹರ ವಲ್ಲಭರ ರಾಜೇಂದ್ರ ಮೌಲನರ ನಿರುತ ಪೌರುಷವೆನಲು ಬಂದುದೀ ಬೆಳಕು. ನಿರುತ ತಾರುಣ್ಯದಲಿ ರಂಜಿಸುವ ಭಾರತಿಯು ಪರತಂತ್ರ ಬಂಧನದಿ ಮುದುಕಿಯಂತಾಗಿ...

ಕಂಡಿದ್ದೀರಾ ಮೀಡಿಯಾಗಳಲ್ಲಿ

ಫ್ಯಾಶನ್ ಶೋ, ರಿಯಾಲಿಟಿ ಶೋ ಟಿ.ವಿ. ಇಂಟರ್‌ನೆಟ್, ಚಾಟುಗಳಲ್ಲಿ ಮಗ್ನರಾಗಿ ಫಾಸ್ಟ್‌ಫುಡ್ ನೆಕ್ಕುವ ಐಷಾರಾಮಿ ಬಂಗಲೆ ವಾಸಿಗಳೇ ರಕ್ತದಲ್ಲಿ ಅದ್ದಿದ ರೊಟ್ಟಿ ತಿನ್ನಲು ನಿಮಗೆ ಸಾಧ್ಯವಾಗುವುದಾದರೆ ಹೇಳಿ? ಸೋದರಿ ಇರೋಮ್ ಶರ್ಮಿಳಾ ಯಾರೆಂದು ಗೊತ್ತೆ...

ಹೂ

ಇದೊಂದು ಬಗೆಯ ಹೂ ಮುಟ್ಟುವಂತಿಲ್ಲ ಮೂಸುವಂತಿಲ್ಲ ನೋಡಿ ಅನಂದಿಸು ಪಕಳೆ ಎಣಿಸಬೇಡ ದಳವ ದಣಿಸಬೇಡ ದಳ ದಳವಾಗಿ ಉದುರುವ ವರೆಗೆ ಕಾದರೆ ಅಂತ ರಾಳದಲ್ಲೇನಿದೆಯೋ ನೋಡಬಹುದು, ಅಲ್ಲಿಯವರೆಗೆ ಕಾಯಬೇಕು. *****

ಹೇಳೊಲ್ಲ….

ಉಂಗುರ ತೊಡಿಸಿದನಲ್ಲ ಎಂಥಾ ತಳಮಳ! ಏನಂದ? ಏನಂದ? ನೆನಪಿಲ್ಲ! ಏನಂದ? ಏನಂದ? ನೋಡಿಲ್ಲ! ಗುರುತಿಲ್ಲ.... ಕಲೆತಿಲ್ಲ.... ಅಂದನಲ್ಲ... ಇಲ್ಲ ಅವ.... ನಲ್ಲ ಅಲ್ಲವೇ ಅಲ್ಲ! ಉಂಗುರ ನೀರು ಪಾಲಾಯಿತೋ ಮೀನು ಪಾಲಾಯಿತೋ ತಾನೇ ಕಳಚಿಕೊಂಡಿತೋ...