ಪರೀಕ್ಷೆಯಲ್ಲಿ ಪರಾಜಿತನಾದ ವಿದ್ಯಾರ್ಥಿಯ ಪ್ರಲಾಪ

ಚತುಷ್ಪದಿ ಸಾಧ್ಯವಿಲ್ಲವು ಪರೀಕ್ಷೆಯೊಳನಗೆ ಜಯವು; | ವಿದ್ಯಾಪರೀಕ್ಷಕರಿಗಿಲ್ಲವೈ ದಯವು|| ಆರು ವರ್ಷಗಳಿಂದ ಪೋಗುವೆನು ನಾನು; | ದೂರ ಗುಡ್ಡಕೆ ಬರಿದೆ ಮಣ್ಣ ತುಂಬಿದೆನು. || ತೋರಲಿಲ್ಲವು ಪರೀಕ್ಷೆಯೊಳು ಜಯವಿನ್ನು | ನೀರೊಳಗೆ ಹೋಮ ಗೈದಂತದುದೇನು?...

ಕಡೆಕಂಜಿ

ತುಳುವ ನಾಡೊಳು ಹೊಳಲು ಮೆರೆವುದು | ಹಳೆಯ ಕಾರ್ಕಳ ಎಂಬುದು;|| ಕೊಳವು ಕುಂಟೆಯು ಪೈರುಪಚ್ಚೆಯು | ತಳೆದ ಮನೆ ಅಲ್ಲಿದ್ದವು. ||೧|| ಅರಸು ಒಂದಿನ ತಿರುಗುತಿರೆ, ಅ | ಚ್ಚರಿಯ ಒಂದನು ಕಂಡನು- ||...

ಡೊಂಬರ ಚೆನ್ನೆ

(ಗೋವಿನ ಕಥೆಯ ಮಟ್ಟು) ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, | ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧|| ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; |...

ಅಣ್ಣನ ವಿಲಾಪ

(ಚೌಪದಿ) ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? | ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| || ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? | ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧|| "ಹಸೆಯ ಮಗುವನು ಮೊನ್ನೆ...

ಭೀಷ್ಮ ನಿರ್‍ಯಾಣ

(ಮತ್ತೇಭವಿಕ್ರೀಡಿತ) ಇಳಿದಂ ಪರ್ವತದಗ್ರದಿಂದೆ ದಿನವಂ, ಕೆಂಪೇರ್ದುದಾಕಾಶಮಂ- ಡಳಮುಂ ಶೋಭಿಸಿದತ್ತು. ಪೂರ್ವದಿಶೆಯೊಳ್‌ ಕಾಲಿಟ್ಟುದೈ ಕತ್ತಲುಂ. ಇಳಿದಸ್ತ೦ಗತನಾಗುತಿರ್ದನಧಿಕ ಶ್ರೇಯಃಪ್ರತಾಪಂಗಳಿಂ ವಿಳಸದ್ಭಾರತದದ್ವಿತೀಯ ರವಿಯುಂ ಭೀಷ್ಮಂ ಕುರುಕ್ಷೇತ್ರದೊಳ್. ಶಿರಮಂ ಬಾಗಿಸೆ ಚಿಂತೆಯಿಂ, ಗಳದ ಸಂದೊಳ್ ಸಿಲ್ಕಲಾ ನಿಟ್ಟುಸಿರ್, ಸುರಿದುಂ ಕಂಬನಿ...

ಹುತ್ತರಿ ಹಾಡು

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್‌ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲ ನೆಲವನು ತಣಿಸಿ ಜನಮನ ಹೊಲದ ಕಳೆ...

ತೆಂಕಣ ಗಾಳಿಯಾಟ

(ರಗಳೆಯ ಪ್ರಭೇದ) ಬರಲಿದೆ! ಅಹಹಾ! ದೂರದಿ ಬರಲಿದೆ- ಬುಸುಗುಟ್ಟುವ ಪಾತಾಳದ ಹಾವೊ? | ಹಸಿವಿನ ಭೂತವು ಕೂಯುವ ಕೂವೊ? || ಹೊಸತಿದು ಕಾಲನ ಕೋಣನ -ಓವೊ! | ಉಸಿರಿನ ಸುಯ್ಯೋ? - ಸೂಸೂಕರಿಸುತ, ಬರುವುದು!...

ಸತ್ಯ ಸೀಮೆಗೆ ತಾಯೆ ನಡಿಸೆನ್ನ

ಮಳೆ ಹನಿಯ ಬಿಡು ಹೂಗಳಲಿ, ಮರ ಗಳ ಹಸುರು ಹಚ್ಚೆಯಲಿ, ಕಡಲಿನ ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ, ಹೊಳೆವ ಹೊಳೆಗಳ ಗಳದ ಸರದಲಿ ಝಳದ ಹಿಮಗಿರಿಮಕುಟದಲ್ಲಿ ಥಳ ಥಳೆವ ರಮಣಿಯೆ! ಜನ್ಮಧರಣಿಯೆ! ಭರತಭೂಮಣಿಯೇ!...

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ? ಸಾಕು, ಸುತ್ತಲು ನೋಡು ಕಣ್ತೆರೆದು ನಿಂದು; ಲೋಕದಲಿ ವಂದೆ ಮಾತರಮೆಂಬುದೊಂದೆ ಮಾ ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು. ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ, ಗತಿಗೆಟ್ಟು ಸರ್‍ವರಲಿ ನೀನಾದೆ...