(ಮತ್ತೇಭವಿಕ್ರೀಡಿತ)
ಇಳಿದಂ ಪರ್ವತದಗ್ರದಿಂದೆ ದಿನವಂ, ಕೆಂಪೇರ್ದುದಾಕಾಶಮಂ-
ಡಳಮುಂ ಶೋಭಿಸಿದತ್ತು. ಪೂರ್ವದಿಶೆಯೊಳ್ ಕಾಲಿಟ್ಟುದೈ ಕತ್ತಲುಂ.
ಇಳಿದಸ್ತ೦ಗತನಾಗುತಿರ್ದನಧಿಕ ಶ್ರೇಯಃಪ್ರತಾಪಂಗಳಿಂ
ವಿಳಸದ್ಭಾರತದದ್ವಿತೀಯ ರವಿಯುಂ ಭೀಷ್ಮಂ ಕುರುಕ್ಷೇತ್ರದೊಳ್.
ಶಿರಮಂ ಬಾಗಿಸೆ ಚಿಂತೆಯಿಂ, ಗಳದ ಸಂದೊಳ್ ಸಿಲ್ಕಲಾ ನಿಟ್ಟುಸಿರ್,
ಸುರಿದುಂ ಕಂಬನಿ ಜಾರೆ ಗಲ್ಲತಟದೊಳ್, ಕುಂತೀಕುಮಾರರ್ ವಲಂ
ಮರಣಾಸನ್ನನ ತಲ್ಪಮಂ ಬಳಸಿ ನಿಂದರ್; ಭೀಷ್ಮನುಂ ಕಂಗಳಂ
ತೆರೆದುಂ ನೋಡಿದನೊಮ್ಮೆ ಕೃಷ್ಣಮುಖಮಂ ಮಂದಸ್ಮಿತಾಹ್ಲಾದದಿಂ
“ಆರೆರೇ! ಧರ್ಮಜ! ಮಾತೃಭೂಮಿಯ ಪರಾಧೀನತ್ವದಾಪಾಶಮಂ
ತರಿದುಂ, ಧರ್ಮಪತಾಕೆಯಂ ಭರತಕ್ಷೋಣೀ ವಕ್ಷದೊಳ್ ನೆಟ್ಟಿಹೈ!
ಶಿರದೊಳ್ ಪಾತಕಮಿಲ್ಲಮಿಲ್ಲಮಿನಿಸುಂ ದುರ್ಯೋಧನ ಧ್ವಂಸದಿಂ,
ಧರೆಯಂ ಪಾಲಿಸು ಮೆಚ್ಚುವೊಲ್ ಪ್ರಜೆಗಳುಂ! ಕರ್ತವ್ಯದೊಳ್ ಕಣ್ಣಿಡೈ!
ನುಡಿಯಿಂದುಜ್ವಲಕಾಂತಿ ಭೀಷ್ಮಮುಖದೊಳ್ ವಿಭ್ರಾಜಿಸಲ್, ಹಸ್ತದಿಂ-
ದೊಡನಾಶೀರ್ವದಿಸುತ್ತ ಧರ್ಮಸುತನಂ, ಶ್ರೀಕೃಷ್ಣನುತ್ಸಂಗದೊಳ್
ಮುಡಿಯಂ ನೀಡಿ, ಮಲಂಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ
ದೊಡಲಿಂ ನೀಡಿ, ಮಲಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ
ದೊಡಲಿಂ ನಂದುದು ಲೇಶಜೀವಕಳೆಯುಂ-ನಿರ್ಯಾಣದಾ ದೀಪದೋಲ್
*****
(ಸುವಾಸಿನಿಯಿಂದ ೧೯೦೨)