ನನ್ನ ನಾನು ಪಡೆವುದೆಂದಿಗೆ?

ನನ್ನ ನಾನು ಪಡೆವುದೆಂದಿಗೆ ಹೂವು ಹಣ್ಣ ಬಿಡುವುದೆಂದಿಗೆ? ಹಣ್ಣು ಬಿರಿದು ಬೀಜವು ಬಿಂಬ ಸೀಳಿ ತೇಜವು ನಿಜ ರೂಪವ ಹಿಡಿವುದೆಂದಿಗೆ? ಭಾರಿ ದೂರ ನಡೆದೆ ನಿಲ್ಲದೆ ಸಾಲುಮರದ ಕರುಣೆ ಇಲ್ಲದೆ; ಕನಸಿನಿಂದ ಕನಸಿಗೆ ಹಾರಿ...

ಹೊತ್ತವರಾರೀ ಸೃಷ್ಟಿಯ ಭಾರ?

ಹೊತ್ತವರಾರೀ ಸೃಷ್ಟಿಯ ಭಾರ, ಎಳೆಯುವರಾರೀ ವಿಶ್ವದ ತೇರ, ಯಾವುದು ಕಾಣದೆ ಕುಣಿಸುವ ದಾರ? ಯಾರದು ಈ ಹುನ್ನಾರ? ಯಾರೋ ಜಗಕಾಧಾರ? ತಣ್ಣಗೆ ಬೀಸುವ ಗಾಳಿಯ ಮೇಲೆ ಬಣ್ಣದ ಹಗಲಿನ ಬೆಳಕಿನ ಮೇಲೆ ಸುಮ್ಮನೆ ಓಡುವ...

ಯಾರು ನಮ್ಮ ಕರೆದರು?

ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು? ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು? ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು? ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು? ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು?...

ಬಾ ಸೌಭಾಗ್ಯವೆ ದಯಮಾಡು

ಬಾ ಸೌಭಾಗ್ಯವೆ ದಯಮಾಡು ಭಯಗಳ ದೂಡಿ ಮುದ ನೀಡು, ಒಡಲನು ಹೊರೆಯುವ ಭರದಲಿ ನಿನ್ನ ಮರೆತವನೆದೆಯಲಿ ಸ್ವರ ಹೂಡು, ಬಾಡದ ರೂಪವೆ ಬಳಿಸಾರು, ಹಾಡುವ ಗೀತವ ದನಿಯೇರು, ಕಾಣದೆ ಎಲ್ಲೋ ಮರೆಯಲಿ ನಿಂತು ಕಾಡುವ...

ಈ ಬಾನು ಈ ಚುಕ್ಕಿ

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ತೇಲಿ ಸಾಗುವ ಮುಗಿಲು ಹರುಷವುಕ್ಕಿ ಯಾರು ಇಟ್ಟರು ಇವನು ಹೀಗೆ ಇಲ್ಲಿ ತುದಿಮೊದಲು ತಿಳಿಯದೀ ನೀಲಿಯಲಿ? ಒಂದೊಂದು ಹೂವಿಗೂ ಒಂದೊಂದು ಬಣ್ಣ ಒಂದೊಂದು...

ದಾರಿತಪ್ಪಿ ನಡೆದರೂ

ದಾರಿತಪ್ಪಿ ನಡೆದರೂ ಮಾನತಪ್ಪಿ ನುಡಿದರೂ ತಾಯಿಯಂತೆ ಕ್ಷಮಿಸಿ ನಮ್ಮ ಕಾಯುತಿರುವ ಪ್ರೀತಿಯೇ, ಋತು ರೂಪದ ನೀತಿಯೆ ಯಾರ ಆಜ್ಞೆಸಲಿಸಲೆಂದು ರಾಶಿ ಚಿಗುರ ತರುವೆ? ಯಾರ ಬರವ ಹಾರೈಸಿ ನೆಲಕೆ ಹಸಿರ ಸುರಿವೆ? ಯಾರ ಒಲುಮೆ...

ಏನೀ ಸೃಷ್ಟಿಯ ಚೆಲುವು!

ಏನೀ ಸೃಷ್ಟಿಯ ಚೆಲುವು ಏನು ಇದರ ಗೆಲುವು! ಈ ಚೆಲುವಿನ ಮೂಲ ಏನು, ಯಾವುದದರ ಬಲವು? ಹಾಡುವ ಹಕ್ಕಿಯೆ ಮೋಡವೆ ಓಡುವ ಮರಿತೊರೆಯೇ ಕಾಡುವ ಹೆಣ್ಣೇ ಪರಿಮಳ ತೀಡುವ ಮಲ್ಲಿಗೆಯೇ ಎಳೆಯುವ ಸೆಳವೇ ಜೀವವ...

ನಿನಗಾಗೇ ಕಾಯುತಿರುವೆ

ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ; ಬೇರಿಲ್ಲದೆ ಹೂವೆಲ್ಲಿದೆ ಹೂವಿಲ್ಲದೆ ಫಲವೆಲ್ಲಿದೆ ನಾನಿರುವೆನೆ ನೀನಿಲ್ಲದೆ ನಿಜದೊಲವೇ ಬಾ. ನಿನ್ನನುಳಿದು ಬಾಳೆ ಬರಿದು ಖಾಲಿ ಮುಗಿಲು ಜಲವೆ ಸುರಿದು...

ಕಾಣಬಹುದು ಹೇಗೆ ನಿನ್ನ?

ಕಾಣಬಹುದು ಹೇಗೆ ನಿನ್ನ ಕರೆಯಬಹುದು ಹೇಗೆ! ಯಾವ ಎಲ್ಲೆ ಇರದ ನಿನ್ನ ಅರಿಯಬಹುದು ಹೇಗೆ? ಹಗಲು ನಗಲು ಬೆಳಕ ಚೆಲ್ಲಿ ದೃಷ್ಟಿ ಕೊಡುವ ದಿವ್ಯವೇ ಇರುಳಿನಲ್ಲಿ ನೀಲನಭದಿ ದೀಪವುರಿವ ಕರುಣೆಯೇ ಮಳೆ ಬಿಸಿಲಿನ, ಹೊಳೆ...

ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?

ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ ಎಲ್ಲಿರುವೆ ಹೇಳು ನೀ ನಿಜವೆ ನೆರಳೇ? ಮಂಜು ನೇಯುವ ಸಂಜೆಗನಸಿನಂತೆ ಸಂಜೆ ಬಿಸಿಲಿನ ಮಳೆಯ ಮನಸಿನಂತೆ ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ ಎಸೆದ ಕೋಗಿಲೆಯ ದನಿಹರಳಿನಂತೆ- ಎಲ್ಲಿರುವೆ...