
ಹಸಿವು ಮಾತನಾಡುವಾಗ ರೊಟ್ಟಿ ಮೌನವಾಗಿದ್ದು ರೊಟ್ಟಿ ಮಾತನಾಡುವಾಗ ಹಸಿವು ಮೌನವಾಗಿದ್ದರೆ ಮಾತಿಗೂ ಮೌನಕ್ಕೂ ಬೆಲೆ ಪರಸ್ಪರ ಒಟ್ಟಾಗಿ ಗುದ್ದಾಡಿದರೆ ಮಾತು ಮೌನಗಳೇ ಅರ್ಥಹೀನ. *****...
ಎದೆ ತುಂಬ ದಿಗಿಲು ತುಂಬಿಕೊಂಡ ರಾತ್ರಿ ಬೆಳದಿಂಗಳೆದುರು ಬೆತ್ತಲಾಗಿ ಹಗುರಾಗಿದೆ *****...
ಹಸಿವಿಗೆ ವಾಸ್ತವದ ಒಂದೇ ಮುಖ ರೊಟ್ಟಿಗೆ ಕನಸುಗಳ ಸಾವಿರಾರು ಮುಖ. ಅದಕ್ಕೇ ಹಸಿವೆಗೆ ರೊಟ್ಟಿ ಕಂಡರೆ ಒಳಗೇ ಭಯ. *****...
ಹಸಿವಿನ ಮುಖವಾಡ ಮುಖವೇ ಎನಿಸುವಷ್ಟು ಸಹಜ ಕಲಾತ್ಮಕ, ಅವಿವೇಕಿ ರೊಟ್ಟಿಗೆ ಅರಿಯಲು ಆಗಿಯೇ ಇಲ್ಲ ಯಾವುದು ನಿಜ ಯಾವುದು ನಾಟಕ. ಹಸಿವಿನ ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ ಕೇಳಿಯೇ ರೊಟ್ಟಿ ಮಂತ್ರಮುಗ್ಧ. *****...













