ಹೃದಯವು ದಣಿವಿಲಿ ನವೆದಿತ್ತು, | ಸ್ಪಂದಕೆ ಮರೆವೋ ಕವಿದಿತ್ತು ಎಲ್ಲವು ಇತ್ತೆಂದಾಗಿತ್ತು, | ಮುಂದಕೆ ಇನ್ನಿಲ್ಲೆನಿಸಿತ್ತು ಬಿಲ್ಲೇ ಕಳಚಿದೆ ಕೈಯಿಂದ, | ಹೆದೆ ಹರಿದಿದೆ ಒಳಹುರಿಯಿಂದ ಕೈಗಳ ಹಿಡಿತವೆ ಸಡಿಲಾಗಿ, | ಎನಿಸಿದೆ ಆಗದು ಒಂದಾಗಿ ಪ್ರಾಣಲ...
ಬಾರ ಕಾರಹುಣ್ಣಿವೆ, ದೈವದ ಕಾರುಣ್ಯವೆ! ೧ ದೂರದಿಂದ ನಿನ್ನ ವಾರ್ತೆ ಹಾರಿ ಸಾರಿ ಬರುತಲಿದೆ…. ಹಾರಯಿಸುತ ನಿನ್ನ ಬರವ ದಾರಿ ಕಾಯ್ವೆನೆಂದಿನಿಂದೆ ; ಬಾರ ಕಾರಹುಣ್ಣಿವೆ, ನಮ್ಮೆಲ್ಲರ ಪುಣ್ಯವೆ? ೨ ಬಡವರ ಬರಿಯೊಡಲಿನಂತೆ ಬರಿದು ಬರಿದು ಬಾನೆಲ್...
ಶೃಂಗಾರ ಕಾವ್ಯ ರಚಿಸುವೆ ನೀ ಸಹಕರಿಸಿದರೆನಗೆ| ಶೃಂಗಾರತೆಯ ವಿರಚಿಸುವೆ ಅಮರ ಪ್ರೇಮಿಯಾಗಿ ನಿನ್ನ ಸಹಯೋಗದೊಳಗೆ|| ನಾ ಬರೆಯಲನುವಾಗೆ ತೆರೆದಿಡುವೆಯ ನಿನ್ನಯ ಸಿರಿ ಸೌಂದರ್‍ಯ ಪುಟವ| ಮೋಹ ಮನ್ಮಥನಾಗಿ ರಚಿಸುವೆ ನೂತನ ರತಿ ಸಂವಿಧಾನ| ಬೆತ್ತಲ ಕಾಳಿರು...
ನಾನು ಕಾಲಿಟ್ಟಲ್ಲಿ- ಕರುಳು ಕಿಟಾರನೆ ಕಿರುಚಿ ಬೆವರೊಡೆಯುತ್ತದೆ. ನೆರಳು ನಗುತ್ತದೆ. ನಾನು ಕೂತಲ್ಲಿ- ನೆಲ ಕೀವೊಡೆದು ಬಾವು ಬಿರಿಯುತ್ತದೆ; ನೋವು ಹರಿಯುತ್ತದೆ. ನಾನು ಮಲಗಿದಲ್ಲಿ- ಮಂಚ ಮೌನ ಮುರಿದು ಉರಿಯುತ್ತದೆ; ಕನಸು ಬೂದಿಯಾಗುತ್ತದೆ. ****...
ಅರ್ಥರ ಮಿಲ್ಲರ ಬರೆದ “ದಿ ಡೆತ್ ಆಫ್ ಅ ಸೇಲ್ಸಮ್ಯಾನ್” ಇದೊಂದು ಆಧುನಿಕ ನಾಟಕ. ಆಧುನಿಕ ಅಪಾರ್‍ಟಮೆಂಟುಗಳು, ಅಟೋಮೊಬೈಲಗಳು, ಮುಗಿಯದ ರಸ್ತೆಗಳು, ಕರೆನ್ಸಿಗಳು, ಖರೀದಿ, ಮಾರಾಟ, ಜನಜಂಗುಳಿ, ಹೀಗೆ ಎಲ್ಲವೂ ಮುಂದುವರಿದ ಸಮಾಜದ ದ್ಯೋ...
ರಜಾ ದಿನದಂದು ವೇಳೆ ಕಳೆಯಲೆಂದು ಪುಟ್ಟ ಪುಟ್ಟಿ ಸೇರಿದರು ತಮ್ಮ ತೋಟದತ್ತ ನಡೆದರು ತೋಟದ ದಾರಿ ಮಧ್ಯೆ ಹರಿಯುತ್ತಿತ್ತು ನದಿ ನದಿಯ ಮರಳಿನಲ್ಲಿ ಆಟವಾಡಿದರಲ್ಲಿ ಪುಟ್ಟ ಹೇಳಿದ ಪುಟ್ಟಿಗೆ ಮರಳಲಿ ಮನೆ ಕಟ್ಟಲು ಮರಳಲಿ ಮನೆ ಹೇಗಣ್ಣ? ಬೇಗ ತಿಳಿಸು ಪುಟ...
ರತ್ನಸಿಂಹಾಸನದಿ ಮಣಿ ಕಿರೀಟವನಿಟ್ಟು ತುಂಬಿದೊಡ್ಡೋಲಗದಿ ರಘುವೀರ ಶೋಭಿಸಲು ಪಕ್ಕದಲಿ ಶ್ರೀಸೀತೆ ಮಂಡಿಸಿರೆ ನಸುನಗುತ ಸರುವರುಂ ಕಣ್ತುಂಬ ನೋಡುತ್ತ ಸೇವಿಪರು. ಭರತ ಶತ್ರುಘ್ನರುಂ ಚಾಮರವನಿಕ್ಕುತಿರೆ ಸುಗ್ರೀವ ಮಾರುತಿ ವಿಭೀಷಣರ್ ಮೊದಲಾಗಿ ರಘುಪತಿಯ...
ಗವ್ವೆನುವ ಗೂಢದಲಿ ಕತ್ತಲೆಯ ಮುಸುಕಿನಲಿ ಭಾರವಾದ ಎಣ್ಣೆಗಟ್ಟಿದ ಮಸುಕಾದ ಮೂಗುತಿ ತಲೆ ತು೦ಬ ಮುಸುಕು ಹೊದ್ದು ಮೊಳಕಾಲುಗಳ ಮಧ್ಯೆ ತಲೆ ತೂರಿಸಿ- ಮುಳುಮುಳು ಅತ್ತು ತಲೆ ತಗ್ಗಿಸಿ ಕೂಡದೇ, ವಿಷ ಜಂತುಗಳ ಎದೆಗೆ ಒದ್ದು – ತಲೆಯೆತ್ತಿ ನಡೆದರೆ,...
ಮುಗಿಯಿತೆ ನಾಟಕವು ಪರದೆ ಕೆಳಕ್ಕಿಳಿಯಿತೆ ಪ್ರೇಕ್ಷಕರೆದ್ದು ಹೋಗಿಯಾಯಿತೆ ನೇಪಥ್ಯ ಬರಿದಾಯಿತೆ ವೇಷ ಕಳಚಬೇಕು ನಟರು ಮುಖವ ತೊಳೆಯಬೇಕು ಅವರು ತೊಳೆದರೂನು ಬಣ್ಣವು ಮೋರೆಯಲ್ಲಿ ಇನ್ನುವು ಇನ್ನೂ ಏನೊ ಉಳಿದಂತೆ ಕತೆಯಿನ್ನೂ ಮುಗಿಯದಂತೆ ಮಾತು ಅರ್‍ಧವು...
ಉತ್ತರ ಕರ್ನಾಟಕದ ಪ್ರತಿ ಊರಿನಲ್ಲಿಯೂ ಗುಡಿ, ಕಟ್ಟೆ, ರಸ್ತೆ ಎಲ್ಲೆಂದರಲ್ಲಿ ಬೇವಿನ ಮರವನ್ನು ಬೆಳೆಸುತ್ತಾರೆ. ಇದು ಅಲ್ಲಿಯ ಸೆಕೆಯುಳ್ಳ ಕಾಲದ ಜನಕ್ಕೆ ತಂಪೆರೆಯುವ ಮರವೂ ಹೌದು. ಜನಪದ ಕವಿಕೂಡ “ಬ್ಯಾಸಗಿ ದಿವಸಕ ಬೇವಿನ ಮರತಂಪ, ಭೀಮಾರತಿ ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







