ಹನಿಗವನ ಹೆಣ್ಣು ಲತಾ ಗುತ್ತಿ June 1, 2020January 11, 2020 ಸಂಶಯವೇ ಇಲ್ಲ ನಿನ್ನೆ ಮೊನ್ನೆಯ ‘ಮೂಕಿ’ಗಳು ಇಂದು ‘ಟಾಕಿ’ಗಳಾಗಿ ನಾಳೆ ವಾಕಿ (ವಾಕ್) ಗಳಾಗಲು. ***** Read More
ಹನಿಗವನ ದುಃಖ ಸರಿದು ಲತಾ ಗುತ್ತಿ May 25, 2020January 11, 2020 ಮೋಡ ಕವಿದ ಮನಸಿಗೆಲ್ಲ ಬಿಸಿ ಉಸಿರುಗಳ ಭರ ಸಿಡಿಲು ಸಿಡಿದಾಗ ಚಿಮ್ಮಿತ್ತು ಮಳೆ ಶಾಂತವಾಗಿತ್ತು ಪ್ರಕೃತಿ ಮತ್ತೆ ಚಿಗುರೊಡದಿತ್ತು ಒಡಲು. ***** Read More
ಹನಿಗವನ ಸಂಶಯ ಪಿಶಾಚಿ ಲತಾ ಗುತ್ತಿ May 18, 2020January 11, 2020 ಹೆಂಡತಿ ಕುಳಿತರೆ ನಿಂತರೆ ಮಾತನಾಡಿದರೆ, ನಕ್ಕರೆ ಸಂಶಯಿಸುವ ಗಂಡ ಹೊರಗಡೆಯಲ್ಲಾ ಮುರುಳಿಕೃಷ್ಣ. ***** Read More
ಹನಿಗವನ ಕಾಲ ಲತಾ ಗುತ್ತಿ May 11, 2020January 11, 2020 ಮತ್ತೆ ಬರುವದು ಬೇಡ ಸೀತೆಯನು ಕಾಡಿಗಟ್ಟಿ ಊರ್‍ಮಿಳೆಯನು ಅಳಲು ಬಿಟ್ಟು ರಾಮ ಲಕ್ಷ್ಮಣರು ಹುಟ್ಟಿ ರಾಮಾಯಣ ಮಾಡುವ ಕಾಲ. ***** Read More
ಹನಿಗವನ ಸನ್ನೆ ಲತಾ ಗುತ್ತಿ May 4, 2020January 11, 2020 ಪೂರ್ಣ ಚಂದ್ರನ ಆಟೋಟ ಸಮುದ್ರ ಏರುಬ್ಬರದ ಮೆರೆದಾಟ ಪ್ರೀತಿ ಪ್ರೇಮಗಳ ಸನ್ನೆಗಳ ತುಂಟಾಟ. ***** Read More
ಹನಿಗವನ ಸ್ನೇಹಿತರು ಲತಾ ಗುತ್ತಿ April 27, 2020January 11, 2020 ಕಳ್ಳ ಕದೀಮರ - ಕವಿ ಪ್ರಣಯಿಗಳ ಗೆಳೆಯ ಚಂದ್ರ ದಕ್ಷ ಧೀಮಂತರ ಹೂವು ಹಸಿರಿನ ಮಿತ್ರ ಸೂರ್‍ಯ ಹಾಲು ಹಸುಳೆಯರ ಅಜ್ಜ ಅಜ್ಜಿಯರ ಲಾಲಿ ಚುಕ್ಕೆಗಳು. ***** Read More
ಹನಿಗವನ ಬಾಗಿಲು ಲತಾ ಗುತ್ತಿ April 20, 2020January 11, 2020 ೧ ರಾತ್ರಿ ಮಲಗುವವರೆಗೂ ಅಜ್ಜನ ಊರಲ್ಲಿ ಊರಿಗೆ ಊರೇ ತೆರೆದ ಬಾಗಿಲುಗಳ ಸದಾ ಸ್ವಾಗತ, ೨೪ ಗಂಟೆಗಳ ಕಾಲ ಸುಭದ್ರ ಬಾಗಿಲು ಕಾವಲುಗಾರ ಇಲ್ಲಿ ನನ್ನೂರಲ್ಲಿ. ೨ ನಮ್ಮನ್ನು ನಾವು ಕಾಯ್ದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಬಾಗಿಲು... Read More
ಹನಿಗವನ ಓಂ ಲತಾ ಗುತ್ತಿ April 13, 2020January 9, 2020 ನಮ್ಮೊಳಗಿನ ಸಮುದ್ರ ಮೊದಲು ಸಾಯಬೇಕು ಶಾಂತವಾದಾಗ ಹುಟ್ಟುತ್ತದೆ ಅಲ್ಲೊಂದು ಶುಭ್ರಕಮಲ ಮೃದುವಾಗುತ್ತದೆ ಮನಸ್ಸು. ***** Read More
ಹನಿಗವನ ಭ್ರೂಣಬಲಿ ಲತಾ ಗುತ್ತಿ April 6, 2020January 9, 2020 ಗಾಳಿ ಬೆಳಕಿನ ಸೋಂಕಿಗಿಂತ ಮೊದಲೇ ಎರಡು ನಾಲ್ಕಾಗಿ ನಾಲ್ಕು ಎಂಟಾಗಿ ಟಿಸಿಲೊಡೆಯುವ ಭ್ರೂಣಕ್ಕೆ ಏಡ್ಸ್ ಸೋಂಕಿ ಚಿಗುರೇ ಮುಟುರಿಕೊಂಡಿತ್ತು. ***** Read More
ಹನಿಗವನ ಸಂಕೋಲೆಯೊಳಗಿಂದ ಲತಾ ಗುತ್ತಿ March 30, 2020January 9, 2020 ಅಪ್ಸರೆಗಳಿಗೆ ಅಪ್ಪ ಸೆರೆಯಾದ ಗೆಳತಿ ದುಃಖಿಸಿದಳು ಅಳಬೇಡ ಮಗಳೆ ನನ್ನ ಸೆರೆ ಬಿಟ್ಟದ್ದು ಒಳ್ಳೆಯದೇ ಸೆರೆವಾಸಕ್ಕಿಂತ ಸರಳವಾಸಕ್ಕೆ ಹಾದಿ ಮಾಡಿಕೊಟ್ಟಿದ್ದಾನೆ - ಗೆಳತಿ ಕಕ್ಕಾಬಿಕ್ಕಿಯಾದಳು. ***** Read More