ಬರದ ಹಾಡು

ಮೊನ್ನಿಽನ ಬರದಾಗ ಕುಸುಬಿಽಯ ಮಾರಿದರಲ್ಲ| ಕೋಲು ಕೋಲೆಣ್ಣ ಕೋಲ ||೧|| ಅಣ್ಣಾಗಾದರು ಮಕ್ಕಳಿಲ್ಲ ತಮ್ಮಽಗಾದರೂ ಮಕ್ಕಳಽವ| ಕೋ ||೨|| * * * ಏ ಅಣ್ಣಾ ಏ ಅಣ್ಣಾ ಸೊಲಗಿ ಜ್ವಾಳಾ ಕಡಾ ಕೊಡು|...

ಅಕ್ಕ ಮಹಾದೇವಿಯ ಹಾಡು

ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು | ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧|| ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ| ಅವ ನನ್ನ ಊರ ಒಡಿಯಽನ| ಕೋ ||೨|| ಅವಽ...

ಎಳ್ಳಾಮಾಸೀ ಹಾಡು

ವರಸೀಗಿ ಬರವೂದು| ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧|| ಏಳ ಮಂದಿ ನೆಗೇಣಿ ಮಕ್ಳು | ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨|| ಬೆಳ್ಳೆ ಬೆಳಗಾಽನ ಏಳ್ರೆ| ಮನಮಾರ ಸಾರಿಸರೆವ್ವಾ| ಕೋ ||೩|| ಮನಮಾರ...

ಆಕಳ ಹಾಡು

ತಾಯ್‌ ಹೊಟ್ಟಿ ತಂಗಾಲಿ ತಾಯಿರಲಿ ದ್ರೌಪತಿ | ನೀಲಗೊಂಡೇದ ನಿರವೀರ | ಬಾಲನ ಮ್ಯಾಲ | ಶ್ರೀರಾಮರಿದ್ದಾ ರೊಂದಗಲಾದೆ ||೧|| ಎಂದೀಗಿ ಈ ಹಾಡ ಹೊಂದಿಸ್ತಿದ್ದಾರೆಂದು | ಅಂಗಳಕ ಬಂದು ತಿರಗೀನೆ | ಹ್ವಾದವರು...

ಮಳೀ ಹಾಡು

ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು | ಮಣ್ಣಾಗಿ ಹೋದರು ಮಳಿರಾಜಾ || ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು ಅನ್ಯದ ದಿನ ಬಂದು ಮಳಿರಾಜಾ ||೧|| ಒಕ್ಕಲಗೇರ್ಯಾಗ ಮಕಿರಾಜಾ | ಅವರು | ಮಕ್ಕಳು...

ಎತ್ತಿನ ಹಾಡು

ಮಾಗಿಽಯ ಹೊಡಿಯಾಗ ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ ನಾ ಹೋಗಿ ಒಂದ ತೆನಿಧಂಟ ತಿಂದರ ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ ಕೈಲಾಸಕ ||೧|| ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ ನಾ...

ಕೂಸಿನ ಹಾಡು

ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ| ಮಂಡಲದಾಗಾಡೊ ಮಗನ ಗೋವಿಂದಾ|| ಕೂಸ ಕಂಡೀಽರೆ| ಅವ್ವ್‌ ನನ್ನ| ಬಾಲಽನ ಕಂಡಿಽರೆ ||೧|| ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ| ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ|| ಕೂಸ ಕಂಡಿಽರೇ| ಅವ್‌ ನನ್ನ|...

ಗಂಗೀ ಗೌರೀ ಹಾಡು – ೨

ಅಡವಿಯನ್ನಿ ಮರನೆ ಗಿಡವ ಬನ್ನಿ ಮರನೆ ಅಡವ್ಯಾಗೆ ಇರುವಂಥ ಸಾರಂಗ ಸರದೂಳಿ ಹೆಬ್ಬುಽಲಿ ಹುಲಿಕರಡಿ ಎಡಬಲ ಹಾಂವುತೇಳೋ ದೇವಾ| ಎನ್ನ ಮೇಲಾಡಿ ಶ್ರೀಗಂಗೀನ ತಂದಿ| ಎನ್ನ ತಪ್ಪೇನು ಕಂಡಿ ||೧|| ಪಟ್ಟಣದ ದಾರಿ ಮ್ಯಾಲ...

ಕೊರವಂಜೀ ಹಾಡು

ಬಾಳಿಽಯ ಬನದಾಗ ಬಾಲ ಚೆಂಡಾಡ್ಯಾನ ಬಾ ನನ್ನ ಮಗನಽ ಅಬರಂಗ ಧೊರಿಯಽ ಬಾಳಿಕಿಂತಾ ಛೆಲಿವ್ಯೋ | ನನ ಸೊಸಿ | ಬಂದೊಮ್ಮೆ ಮಕದೋರೊ ||೧|| ಬಾಳಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ ಉಟ್ಟೀದ ದಟ್ಟಿಽ ಕಳಕೋರ್ಹಡದವ್ವಾ...