Home / ವೇಣಿ ಪುಷ್ಪ

Browsing Tag: ವೇಣಿ ಪುಷ್ಪ

ಮುಗಿಲ ನೀಲಿಯ ಬಣ್ಣ ಹಲವು ಹೂಗಳ ಬಣ್ಣ ನಿಂತ ನೆಲದಾಸೊಬಗೊ ಹರಿವ ನೀರಿನ ಬೆಡಗೊ ಒಂದೆರಡೆ ಸೌಭಾಗ್ಯ ನೋಡೆ ಸಾಲದು ಕಣ್ಣ ಈ ವಿಶ್ವದೈಸಿರಿಯ ಮುಖಕೆಲ್ಲಿ ಇಹುದೆಡರೊ? ಸಿಡಿಲಾಗಿ ಗುಡುಗುವದು ನೀರೆಯೋಲು ಮೆರೆಯುವದು ಭಕ್ತನೋಲು ಸಂತಸದಿ ಕುಣಿದಾಡಿ ನಲಿಯು...

ಬಾರೆ ಗೆಳತಿ ಬಾರೆ ಕೃಷ್ಣ ಬಂದ ನೀರೆ ನಿನ್ನ ಮುಖವ ತೋರೆ ಮನದ ಮಬ್ಬು ಜಾರೆ ದಣಿದು ಬಂದ ರಂಗ ಏಕೆ ಮನಕೆ ಭಂಗ ಬಾರೆ ಬಾರೆ ಹೀಂಗ ತಳುವಬೇಡ ಹಾಂಗ ಕೊಳಲ ನುಡಿಸಲಾರ ಜಾಣೆ ನೀನೆ ಬಾರ ಅವನ ಹೃದಯ ಭಾರ ಇಳಿಸೆ ನೀನೆ ಬಾರ ಕಮಲ ಕಣ್ಣು ಬಾಡಿ ನಿನ್ನ ನೆಲ್ಲು...

ಸುಳಿಯದಿರು ಸಂಶಯವೆ ನನ್ನವರ ಸನಿಹದಲಿ ಬೆರಸದಿರು ವಿಷವನ್ನು ಅನ್ನದಲ್ಲಿ ಬಾಳನಂದನ ವನವ ತುಳಿದು ತೊತ್ತಳಗೈದು ತುತ್ತದಿರು ಇದನಿನ್ನ ಒಡಲಿನಲ್ಲಿ ನಿನ್ನ ರಾಕ್ಷಸ ಕೃತ್ಯ ವಿಷಮತೆಗೆ ಮೊದಲಹುದು ದೂರಸರಿ ಸುಳಿಯುವುದೆ ನೀನು ಇಲ್ಲಿ? ವಿಶ್ವಾಸವೆಂಬುವದು...

ಪ್ರಭುಲೋಕಕೆ ಸಾಗಿರುವದು ಬಾಳ್ ಬಳ್ಳಿಯ ಕುಡಿಯು ಚಾಚಿರುವದು ಮೊಗಹೊರಳಿದೆ ಅಪ್ಪಿದೆ ಗುರುವಿನಡಿಯು ತಟಕಿಕ್ಕುತಲಿದೆ ಜೇನದು ಕೊನೆಯೇ ಇಲ್ಲದಕೆ ಘಮಘಮಿಸುತಲಿವೆ ಹೂಗಳು ಬಾಡುವದಿಲ್ಲದಕೆ ದೂರದಲ್ಲಿದೆ ಆಗಸದೆಡೆ ಆದರು ಎದೆಯಿಹುದು ಗುರು ಕರುಣೆಯ ಪರ್‍ಜ...

ತಾನಗಾನಗಳಲ್ಲಿ ತಣಿಸಿಕೊಳುವದು ಮನವ ಹಸುರೆಲೆಗಳಲಿ ಅಡಗಿಮಡಗಿಕೊಂಡಿಹ ಕುಕಿಲೆ ಕುಕಿಲುವದು ಋತುಪತಿಯ ಐಸಿರಿಯ ಈ ಘನವ ಮೆದ್ದು ಮೆಲ್ಲಗೆ ಮುದದಿ ಮಾಮರದಿ ತಳಿತ ಎಲೆ ಕಪ್ಪು ಬಣ್ಣವು ಎಂಬ ಕೊರಗು ಒಂದಿನಿತಿಲ್ಲ ಕಸುವು ತನಗಿಲ್ಲೆಂಬ ಕಳವಳಕೆ ಎಡೆಯಿಲ್ಲ ...

ಬಂದು ಹೋಗುವರೆ ಇಂತು ಪ್ರತಿದಿನವು ಹೇಳೆ ಎದೆಯ ಗೆಳತಿ ಹೋಗಿ ಮುಟ್ಟಿಸುವೆಯೇನೆ ಈ ವೇಣಿ ಪುಷ್ಪವನ್ನು ಗೆಳತಿ ? ಯಾರು ಕೊಟ್ಟರಿದ ಯಾವ ಮಧುವನದ ಪುಷ್ಪವೆಂದು ಕೇಳೆ ಹೇಳದಿರು ಮತ್ತೆ ಬೇರೆ ಏನನ್ನು ಕೇಳರೆನ್ನ ಆಣೆ ವೃಕ್ಷದಡಿಯಲ್ಲಿ ಧೂಳ ಹಾಸಿನಲಿ ಕುಳ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...