ಕೋಲು ಕೋಲೆನ್ನ ಕೋಲೇ (ಅತ್ತೆ ಹೆಸ್ರು ಹರ್‌ಕು ಚಾಪೆ)

ಅತ್ತೆ ಹೆಸ್ರು ಹರ್‌ಕು ಚಾಪೆ ಮಾವನ ಹೆಸ್ರು ಮಂಚದ ಕಾಲೂ ಕೋಲು ಕೋಲೆನ್ನ ಕೋಲೇ || ೧ || ರನ್ನದಾ ಬಣ್ಣದಾ ಚಿನ್ನದಾ ಬೆದುರಿನ ಕೋಲು ಕೋಲೆನ್ನ ಕೋಲೇ || ೨ || ಚಿನ್ನದಾ...

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ ಕೋಲು ಕೋಲೇಲೋ ಅದು ಕೋಲೇ ದ್ಯೇವರೇ || ೧ || ಶಿನ್ನದೊಂದು ಕೋಲೇಲೋ ಅದು ಕೋಲೇ ದ್ಯೇವರೇ ರಾಜದೇವಿಂದ್ರಾಡೂ ಕೋಲೇಲೋ ದ್ಯೇವರೇ || ೨ || ಕೋಲು ಕೋಲೇ...

ಕೋಲೂ ಸಿಂಗಾರಾಡುವಾ (ಕೋಲುಪದ)

ಹಕ್ಕೀ ವೋಡ್ಸೂ ನೆವನಾ ಮಾಡಿ ಕವಣೀ ಬೀಸಿದ್ಯಾ? ಚಿಕ್ಕಾ ಹುಡಗೀ ಮಾತ ಕೇಳಿ ನಾಟಾ ಹೂಡಿದ್ಯಾ? ||೧|| ನವಲಾ ಬಂತೋ ನವಲಾ ನಮ ಸೋಗಿ ಬಣ್ಣದ ನವಲಾ ನವಲಾ ಬಂದರೆ ಬರಲೀ ನಮ್ಮಗೆ ವಜ್ರದ...

ಹೊಕ್ಕ ಕೋಲು (ಕಾಗಲ್ಲೂ ಕರಿಗಲ್ಲೂ)

ಕಾಗಲ್ಲೂ ಕರಿಗಲ್ಲೂ ಕಟ್ಟೆ ಮ್ಯಾಗಿನ ಕಲ್ಲೂ ಆ ಕಲ್ಲೀನ ಹೆಸರೂ ಹೂಲಿ ಯಪ್ಯಾಽ ||೧|| ಹುಲಿಯಪ್ಪನ ತಳವೇ ಗಡಿ ಮೇಲೆ ಕೋಲೇ ಸುಂಗುಳೀ ಮರನಡಿಗೇ ನೆಲಿಗೊಟ್ಟಾ ಕೋಲೇ ||೨|| ಜಂಗುಮಾರ್ ಹುಡುಗೀ ಕಾವಲೂ ಕೋಲೇ...

ಮಲಕಿನ ಕೋಲು (ಒಬ್ಬರ ಬೇರೊಬ್ಬರ ಸುತ್ತುದು)

ತೋಟಾ ತೋಟಾ ತಿರಗಿ ನಾನು ಮೂರ ದುಂಡ ಮಲಿಗೀ ಹೂವ ತಂದೇ ||೧|| ದುಂಡ ಮಲಗೀ ಹೂವ ಮುಡಿಯೇ ಜಾಣೇ ದುಂಡರಿ ಪಾರಾಗಿ ಹೋದ (ಮತ್ತೆ ತರಲು ಹೋದ) ||೨|| ಈಟೀ ತಿರ್‌ಗಿ ತಿರುಗಿ...

ಬಿದುರೇ ನೀನ್ಯಾರೀಗೊಲಿಯುವಳೇ

ಹುಟ್ಟುತ ಹುಲ್ಲನಾದೇ ಬೆಳೆಯೂತ ಬಿದುರನಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೧ || ಊರೂರು ಮುದುಕರಿಗೆಲ್ಲಾ ಊರೂವ ದೊಣ್ಣೆಯಾದೇ ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೨ || ಊರೂರು ನಾರಿಯರಿಗೆಲ್ಲಾ ಗೇರೂ...

ಕಂಡೀ ಕೋಲು (೩) (ಇಂದಿನ ಪುರವದಲ್ಲಿ)

ಇಂದಿನ ಪುರವದಲ್ಲಿ ಹಬ್ಬ ಕಾಣೀ ತಂಗೀ ಹೆಬ್ಬೂಲಿ ಚರ್ಮದಲ್ಲಿ ಸಿದ್ದ ಕಾಣೀ ತಾನಾ || ೧ || ಊರೂರು ತಿರ್ಗುತಾನೇ ಜೋಗೀಯಾಗೇ ತಂಗೀ ಮನಿಯಾಗೆ ಕುಳುತಾನೆ ಯೋಗಿಯಂತೇ ತಾನಾ || ೨ || ನೀರು...

ಇಂಗಲೀಸು

ಬಾಸೆ ಕಲಿಯದೇ ಮೋಸವಾಯಿತೂ ಇಂಗಲೀಸೂ ಬಿಂಗಲೀಸು || ೧ || ಗೋ ಡೆಗೆ ಇಂಗಲೀಸೂ ಮಾಡಿಗೆ ಇಂಗಲೀಸೂ ಮೋಟರಿಗೆ ಇಂಗಲೀಸೂ ಬ್ಯಾಟ್ರಿಗೆ ಇಂಗಲೀಸೂ || ೨ || ಬಾಸೆ ಕಲಿಯದೇ ಮೋಸವಾಯಿತೂ ಚಕ ಮಾಡವರ...