ಹುಟ್ಟುತ ಹುಲ್ಲನಾದೇ ಬೆಳೆಯೂತ ಬಿದುರನಾದೇ
ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೧ ||
ಊರೂರು ಮುದುಕರಿಗೆಲ್ಲಾ ಊರೂವ ದೊಣ್ಣೆಯಾದೇ
ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೨ ||
ಊರೂರು ನಾರಿಯರಿಗೆಲ್ಲಾ ಗೇರೂ ಗೆರಸೇಯಾದೇ
ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನ ತಾಯೇ || ೩ ||
ಮಂಜುಗುಣಿ ದೇವರಿಗೂ ಕಟ್ಟು ಪಾಲುಕಿಯಾದೇ
ಬಿದುರೇ ನೀನ್ಯಾರಿಗೊಲಿಯುವಳೇ? ಬಿದುರೆನ್ನಾ ತಾಯೇ || ೪ ||
ಹೊಲಿಯು ಬತ್ತಾವ ಕಟ್ಟಲು ಬಿದರು ಕಣಜಾವಾದೇ
ಬಿದುರೆ ನೀನ್ಯಾರಿಗೊಲಿಯುವಳೇ? ಬಿದುರೆನ್ನಾ ತಾಯೇ
ಬಿದುರೆ ನೀನ್ಯಾರಿಗೊಲಿಯುವಳೇ ಬಿದುರೆನ್ನಾ ತಾಯೇ || ೫ ||
*****
ಹೇಳಿದವರು: ಗಣಪ ಸುಬ್ಬಗೌಡ, ಮೊಳೇಸಾಲು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.