Home / Vachana

Browsing Tag: Vachana

ಅಯ್ಯ ಅದೇನು ಕಾರಣವೆಂದರೆ, ಕಂಗಳ ಕತ್ತಲೆಯನೆ ಹರಿಸಿದಿರಿ. ಮನದ ಕಾಳಿಕೆಯನೆ ಹಿಂಗಿಸಿದಿರಿ. ಮಾತಿನ ಮೊದಲನೆ ಹರಿದಿರಿ. ಜ್ಯೋತಿಯ ಬೆಳಗ ತೋರಿದಿರಿ. ಮಾತು ಮಥನವ ಕೆಡಿಸಿದಿರಿ. ವ್ಯಾಕುಳವನೆ ಬಿಡಿಸಿ ವಿವೇಕಿಯ ಮಾಡಿ ನಿಮ್ಮ ಪಾದದಲ್ಲಿ ಏಕವಾದ ಕಾರಣದ...

ಅಯ್ಯ ನಾ ಕಾಂಬುದಕ್ಕೆ ನನ್ನ ಶಕ್ತಿಯಿಲ್ಲ. ನಿಮ್ಮಿಂದವೆ ಕಂಡೆನಯ್ಯ.  ಅದೇನು ಕಾರಣವೆಂದರೆ, ತನುವ ತೋರಿದಿರಿ, ಮನವ ತೋರಿದಿರಿ, ಧನವ ತೋರಿದಿರಿ, ತನುವ ಗುರುವಿಗಿತ್ತು, ಮನವ ಲಿಂಗಕಿತ್ತು, ಧನವ ಜಂಗಮಕಿತ್ತು, ಇವೆಲ್ಲವು ನಿಮ್ಮೊಡವೆ ಎಂದು ನಿಮಗಿತ...

ಎನ್ನ ಸತ್ಯಳಮಾಡಿ, ನಿತ್ಯವ ತೋರಿ, ತತ್ವವೆಂಬುದನರುಹಿದಿರಿ. ಮತ್ಸರವ ಹಿಂಗಿಸಿದಿರಿ. ಆಸೆರೋಷವನೆ ಹಿಂಗಿಸಿದಿರಿ. ಮಾತುಮಥನವನೆ ಕೆಡಿಸಿದಿರಿ. ವ್ಯಾಕುಳವನೆ ಕೆಡಿಸಿ, ಜ್ಯೋತಿಯ ಬೆಳಗ ತೋರಿದಿರಯ್ಯ ಚನ್ನಮಲ್ಲೇಶ್ವರನು ಅಪ್ಪಣಪ್ರಿಯ ಚನ್ನಬಸವಣ್ಣಾ. *...

ಈ ಮಹಾದೇವನ ಸ್ತೋತ್ರವ ಮಾಡುವದಕ್ಕೆ ಜಿಹ್ವೆ ಮೆಟ್ಟದು. ಆ ಮಹಾದೇವನ ಸ್ತೋತ್ರವ ಕೇಳುವದಕ್ಕೆ ಕರ್ಣ ಮೆಟ್ಟದು. ಮುಟ್ಟಿ ಪೂಜಿಸಿಹೆನೆಂದರೆ, ಹಸ್ತ ಕೆಟ್ಟದು. ನೋಡಿಹೆನೆಂದರೆ ನೋಟಕ್ಕೆ ಅಗೋಚರ, ಅಪ್ರಮಾಣ. ಇಂತು ನಿಶ್ಚಿಂತ ನಿರಾಳ ಬಯಲ ದೇಹ ಎನ್ನಲ್ಲಿ...

ಅಯ್ಯ ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದು, ಒಳತಂದು ಮಹಾಶರಣರೊಳು ಎನ್ನ ನಿಲಿಸಿ ಕುರುಹ ತೋರಿದರು. ಗುರುವೆಂಬುದನರುಹಿದರು.  ಜಂಗಮವೆಂಬುದನರುಹಿದರು. ಅವರ ನೆಲೆವಿಡಿದು ಮನವ ನಿಲಿಸದೆ, ಕಾಯಜೀವವೆಂಬುದನರಿದೆ.  ಭವಬಂಧನವ ಹರಿದೆ. ಮನವ ನಿರ್ಮಳವ ಮ...

ನಾಮ ರೂಪು ಕ್ರಿಯೆಗಿಲ್ಲದ ಘನವ ನಾಮರೂಪಿಂಗೆ ತಂದಿರಯ್ಯ. ಅದೇನು ಕಾರಣವೆಂದರೆ, ನನ್ನ ಮನಕ್ಕೆ ಚನ್ನಮಲ್ಲೇಶ್ವರನಾದಿರಿ. ಹೀಗೆಂದು ನಿಮ್ಮ ನಾಮಾಂಕಿತ ಹೀಗಾದರೂ ಕಾಣಲರಿಯರು. ನಡೆ ನುಡಿ ಚೈತನ್ಯವಿಡಿದು, ಕರದಲ್ಲಿ ಲಿಂಗ ಪಿಡಿದು, ಚನ್ನಮಲ್ಲೇಶ್ವರನೆಂ...

ಮಾಣಿಕವ ಕಂಡವರು ತೋರುವರುಂಟೇ? ಮುತ್ತ ಕಂಡವರು ಅಪ್ಪಿಕೊಂಬುವರಲ್ಲದೆ, ಬಿಚ್ಚಿ ತೋರುವರೇ?  ಆ ಮುತ್ತಿನ ನೆಲೆಯನು ಮಾಣಿಕ್ಯದ ನೆಲೆಯನು ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ, ಬಚ್ಚ ಬರಿಯ ಬೆಳಗಿನೊಳಗೋಲಾಡಿ ನಿಮ್ಮ ಪಾದದೊಳಗೆ ನಿಜಮುಕ್...

ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು. ಇದಾರಿಗು ಕಾಣಬಾರದು. ಮಾರೆನೆಂದರೆ ಮಾನವರಿಗೆ ಸಾಧ್ಯವಾಗದು. ಸಾವಿರಕೆ ಬೆಲೆಯಾಯಿತ್ತು. ಆ ಬೆಲೆಯಾದ ಮಾಣಿಕ ನಮ್ಮ ಶರಣರಿಗೆ ಸಾಧ್ಯವಾಯಿತ್ತು. ಆ ಮಾಣಿಕವ ಹೇಗೆ ಬೆಲೆಮಾಡಿ ಮಾರಿದರೆಂದರೆ, ಕಾಣಬಾರದ ಕದಳ...

ಕನಿಷ್ಟದಲ್ಲಿ ಹುಟ್ಟಿದೆ. ಉತ್ತಮದಲ್ಲಿ ಬೆಳೆದೆ. ಸತ್ಯಶರಣರ ಪಾದವಿಡಿದೆ.  ಆ ಶರಣರ ಪಾದವಿಡಿದು ಗುರುವ ಕಂಡೆ. ಲಿಂಗವ ಕಂಡೆ.  ಜಂಗಮವ ಕಂಡೆ. ಪ್ರಸಾದವ ಕಂಡೆ.  ಪಾದೋದಕವ ಕಂಡೆ. ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು. ಕಂಗಳ ಮುಂದಣ ...

ಅಯ್ಯ ನಾನು ಬಂದ ಭವಾಂತರದಲ್ಲಿ ನೀವು ಕಡೆ ಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದರು. ನಿಮ್ಮ ಕಾಣದೆ ಇದ್ದೆನಯ್ಯ. ಅದು ಕಾರಣದಿಂದ ಮನಕೆ ಪ್ರಾಣವಾಗಿ ಬಂದು ನಿಂದಿರಿ. ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ ಕಾಣಲೊಡನೆ ಎನ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...