ನಾಮ ರೂಪು ಕ್ರಿಯೆಗಿಲ್ಲದ ಘನವ
ನಾಮರೂಪಿಂಗೆ ತಂದಿರಯ್ಯ.
ಅದೇನು ಕಾರಣವೆಂದರೆ,
ನನ್ನ ಮನಕ್ಕೆ ಚನ್ನಮಲ್ಲೇಶ್ವರನಾದಿರಿ.
ಹೀಗೆಂದು ನಿಮ್ಮ ನಾಮಾಂಕಿತ
ಹೀಗಾದರೂ ಕಾಣಲರಿಯರು.
ನಡೆ ನುಡಿ ಚೈತನ್ಯವಿಡಿದು,
ಕರದಲ್ಲಿ ಲಿಂಗ ಪಿಡಿದು,
ಚನ್ನಮಲ್ಲೇಶ್ವರನೆಂಬ ನಾಮಾಂಕಿತವಿಡಿದು
ಬರಲಾಗಿ ಮರ್ತ್ಯಲೋಕದಲ್ಲಿ ತನ್ನ ನೆನವ
ಶಿವ ಭಕ್ತರ ಪಾವನವ ಮಾಡಬೇಕೆಂದು ಬಂದು,
ಭೂಮಿಯ ಮೇಲೆ ಲೀಲೆಯ ನಟಿಸಿ,
ತಮ್ಮ ಪಾದದಲ್ಲಿ ನಿಜಮುಕ್ತಳ ಮಾಡಿದಿರಯ್ಯ
ಚನ್ನಮಲ್ಲೇಶ್ವರನು ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ