Home / Kannada

Browsing Tag: Kannada

ತುಂಬಿ ತುಂಬಿ ಏನೇನ್ ತುಂಬಿ? ಮಲ್ಲಿಗೆ ಹೂವಿನ ಪರಿಮಳ ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಸಂಪಿಗೆ ಹೂವಿನ ಕಂಪನು ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಗುಲಾಬಿ ಹೂವಿನ ಪನ್ನೀರ್ ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಬಾಳೆ ಹೂವಿನ ಮಕರಂದ ತುಂಬಿ...

“ಎಲ್ಲಾ ತಿಂಡಿಯು ನನಗೇ ಬೇಕು ಎಲ್ಲಾ ಹಣ್ಣೂ ನನಗೇ ಬೇಕು ಆರಿಗು ಚೂರನು ಗೀರನು ಕೊಡೆನು” ಕೊಡೆನೆನ್ನುತ ಎಳ ಮಗ ಹರಮಾಡಿದನು. “ಅಣ್ಣನು ತಮ್ಮನು ಎಲ್ಲರು ಇರುವರು ಅಕ್ಕನು ತಂಗಿಯು ಎಲ್ಲರು ಇರುವರು ನಾನೂ ಅಮ್ಮಾ ಎಲ್ಲರು ಇರುವೆ...

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ! ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?! ಆದಿಶೇಷನ ತೆರದಿ ಭುಸುಗುಟ್ಟುವೆ! ಕಣ್ಣು ಗುಡ್ಡೆ… ನಿಗಿ, ನಿಗಿ… ಉರಿವ ಕುಡಿಕೆ, ಬ...

ಕಿಟಕಿಯಲ್ಲಿ ಹಣಕಿದ್ದು ಹನಿಮೂನ್ ಗಂಡು ಹೆಣ್ಣನ್ನ ಕದ್ದು ನೋಡೋಕಲ್ಲ ಮಾರಾಯರೆ, ಹೇಳ್ತಿನಿ ಕೇಳಿ ಹೋದದ್ದು ಪಾಪ, ಬೆತ್ತಲೆ ಮಲಗಿದ್ದವರಿಗೆ ಬೆಳದಿಂಗಳ ಹೊದಿಕೆ ಹೊದಿಸೋಕೆ. *****...

ಆಗ ಭಾರತೀಯ ನಾರಿನ ಮಣಭಾರದ ಪಟ್ಟಾವಳಿಯನುಟ್ಟು ಬಗೆಬಗೆಯಲಂಕಾರದದೊಡವೆಗಳನಿಟ್ಟು ಭಾರಕ್ಕೆ ಬೆನ್ನುಬಾಗಿ, ಮೂಗಿನ ಗಾಡಿನತ್ತಿನಿಂದ ಕತ್ತು ಬಾಗಿ, ಪಾದಪಾದಗಳಲ್ಲಿ ವೃತ್ತ ವೃತ್ತಾಕಾರದ ಕಡಗ ಕಂಕಣಗಳಿಂದ ಛಂದೋ ಬದ್ಧ ಶಾಸ್ತ್ರ್‍ಈಯ ನಾಟ್ಯವಾಡಲು ಸೆಣಸು...

ಹೆಣ್ಣುಮಗುವಿಗೆ ಜನ್ಮವೆತ್ತ ಕಾರಣಕ್ಕಾಗಿ ಆ ಮಗುವನ್ನೇ ಕಣ್ಮರೆಯಾಗಿಸುವ ಅಥವಾ ಹೆಣ್ಣುಹೆತ್ತದ್ದಕ್ಕಾಗಿ ತಾಯಿಗೆ ಮಾನಸಿಕ ಹಿಂಸೆ ಕೊಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಕೇವಲ ಗಂಡು ಮಕ್ಕಳೆ ಡಜನ್‌ಗಟ್ಟಲೇ ಸೃಷ್ಟಿಯಾಗಿ ಒಂದಾದರೂ ಹೆಣ್ಣು ಮಗ...

ನಿಮ್ಮ ಮನೆಯಂಗಳಕೆ ಗುಲಾಬಿ ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ. ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು. ಬ...

ವೀರಪಂಡಿತ ಶಾಸ್ತ್ರಕಾರರೆ ಜ್ಞಾನನಿಧಿ ಋಷಿವರ್ಯರೆ, ಹಿಂದೆ ಗತಿಸಿದ ಯೋಗಪುರುಷರೆ ನಿಮ್ಮ ಕಷ್ಟವ ನೆನೆವೆನು ನಿಬಿಡವಾಗಿದೆ ನೀವು ರಚಿಸಿದ ಗ್ರಂಥರಾಶಿಯು ಧರೆಯೊಳು ಸೃಷ್ಟಿಯಂತ್ರವ ಭೇದಿಸುವ ಘನ ಮಥನ ರವವಿದೆ ಅದರೊಳು ಬಂದು ಇಲ್ಲಿಗೆ ಭ್ರಾಂತರಾದಿರೊ ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...