ಧರ್ಮ

ಧರ್ಮರಾಯ, ನೀನು ನಡೆದದ್ದು ಧರ್ಮದ ಹಾದಿಯಲ್ಲಿ ಎಲ್ಲ ಹೊಗಳುತ್ತಾರೆ ನಿನ್ನನ್ನು. ಆದರೆ ದ್ರೌಪದಿಗೆ ನೀನು ಮಾಡಿದ್ದು ಮೋಸ? ಅರ್ಜುನ ಜಯಸಿ ತಂದವಳ ಅವನಿಗೇ ಬಿಡದೆ ತಾಯಿ ಅರಿವಿಲ್ಲದೇ ಆಡಿದ ಮಾತಿನ ನೆವದಿಂದ ಐವರ ಪತ್ನಿಯಾಗಿಸಿದೆ-...

ಕಾವಲುಗಾರ

ಜಗದ ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಇಲ್ಲಿಗೆ ಯಾರೂ ಬರಬಹುದು ಇಲ್ಲಿಂದ ಯಾರೂ ಹೋಗಬಹುದು ಇಲ್ಲಿ ಏನೂ ನಡೆಯಬಹುದು ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಕನ್ನ ಹಾಕಬಹುದು, ಎಲ್ಲ ದೋಚಬಹುದು ಕೊಚ್ಚಿ ಹಾಕಬಹುದು ದಂಗೆ ಎಬ್ಬಿಸ ಬಹುದು...

ಹುಟ್ಟಿಬರಲಾರಿರಾ ಇನ್ನೊಮ್ಮೆ?

ಹುಟ್ಟಿ ಬರಲಾರಿರಾ ಇನ್ನೊಮ್ಮೆ ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ ಹೊಸಬೆಳಕಾಗಿ ಹೊಸದಾರಿ ತೋರಲು ಹುಟ್ಟಿಬರಲಾರಿರಾ ಇನ್ನೊಮ್ಮೆ? ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ 'ಕೈಗಾರೀಕರಣ ಇಲ್ಲವೆ ನಾಶ'...

ವಿಪರ್ಯಾಸ

ಒಪ್ಪಿದವರು ಬರಲಿಲ್ಲ ಬಂದವರು ಒಪ್ಪಲಿಲ್ಲ. ಇವರಿಬ್ಬರ ನಡುವೆ ಬಂದವರು ತನುಮನ ಅರಳಿಸಲಿಲ್ಲ. ಕೊಚ್ಚಿ ಹೋಯಿತು ಜೀವನ ರೊಚ್ಚಿಗೇಳಲಿಲ್ಲ ಮನ ಸುಖವ ಮರೆತಿತು ತನು ಅಪ್ಪಿಕೊಂಡಿತು ಮೌನ. ಸುಖವಿಲ್ಲ ದುಃಖವಿಲ್ಲ ಸರಸವಿಲ್ಲ ವಿರಸವಿಲ್ಲ ದಾರಿಯಿದೆ ನೇರಕೆ...

ಅನೇಕತೆಯಲ್ಲಿ ಏಕತೆ

ಮೌನವಾಗಿದೆ ಧರಿತ್ರಿ ಮೌನವಾಗಿದೆ ದಿಗಂತ ಮೌನವಾಗಿದೆ ಸಾಗರ; ಒಂದಾಗಿದೆ ಭೂಮಂಡಲವಾಗಿ. ಜತೆಯಾಗಿದೆ ಮೌನದಲಿ ಅಖಂಡವಾದ ನಂಟಿನಲಿ ನಿರಂತರತ್ವದ ಸಂಕೇತದಲಿ ಅವಿಚ್ಛಿನ್ನತೆಯ ಭಾವದಲಿ. ನೆಲವ ಬಿಟ್ಟು ಜಲವಿಲ್ಲ ಜಲವಬಿಟ್ಟು ಗಗನವಿಲ್ಲ ಒಂದಕ್ಕೊಂದು ಜತೆಯಾಗಿದೆ ಗಾಢವಾದ ಮೌನದಲಿ....
ಯಶಸ್ಸು

ಯಶಸ್ಸು

ಯಶಸ್ಸು ಅಂದರೆ ಏನು? ಯಶಸ್ಸನ್ನು ಹೇಗೆ ಸಿದ್ಧಾಂತಿಕರಿಸುತ್ತೇವೆ? ಯಶಸ್ಸು ಅಂದರೆ ಲೆಕ್ಕವಿಡಲಾಗದಷ್ಟು ಹಣ ಗಳಿಕೆಯೇ? ಸಮಾಜದಲ್ಲಿ ಹೆಸರು ಗಳಿಕೆಯೇ? ವೃತ್ತಿ ಜೀವನದಲ್ಲಿ ಅತ್ಯುನ್ನತ ಪದವಿಗೆ ಏರುವುದೇ? ದೊಡ್ಡ ಬಂಗಲೆ, ನಾಲ್ಕಾರು ಕಾರು, ಸುಂದರ ಹೆಂಡತಿ,...

ಬೇವು ಬೆಲ್ಲ

ಯಾರಿಗುಂಟು ಯಾರಿಗಿಲ್ಲ ಮನದ ತುಂಬ ಬೇವು ಬೆಲ್ಲ? ಚಿತ್ತ ಶಾಂತಿ ಮನದ ಭ್ರಾಂತಿ ಕುರುಡು ಪ್ರೀತಿ ಮರೆತ ನೀತಿ. ಅಲ್ಲಿ ಇಲ್ಲಿ ಎದ್ದ ಗುಲ್ಲು ಮನಕೆ ನೋವು ತಂದ ಸೊಲ್ಲು. ಹೇಳಲಾರೆ ಬರೆಯಲಾರೆ ಮರೆಯಲಾರೆ...

ದುಶ್ಯಾಸನರು

ದ್ರೌಪದೀ, ಅಂದು ಋತುಮತಿಯಾಗಿದ್ದ ನಿನ್ನನ್ನು ದರದರ ಎಳೆದು ತಂದು ತುಂಬಿದ ಸಭೆಯಲ್ಲಿ ದುಶ್ಯಾಸನ ನಿನ್ನ ಸೆರಗಿಗೆ ಕೈ ಹಾಕಿದಾಗ, ನೀನೇಕೆ ಅವನ ದಹಿಸದೆ ನಿನ್ನ ಪಣ ಒಡ್ಡಿದವರ ಬೇಡಿದೆ? ಅವರು ಅಸಹಾಯಕರಾಗಿ ತಲೆತಗ್ಗಿಸಿ ಕುಳಿತಾಗ...

ಶೋಷಣೆ

ಹಿಂದೆ- ನಿನ್ನ ಅಂಗಅಂಗಗಳ ಅಂದವ ಆರಾಧಿಸುತ್ತಾ ಶೋಷಿಸಿದರು; ನಿನ್ನ ಪೂಜಿಸುತ್ತಾ ಶೋಷಿಸಿದರು. ಗೋಡೆ ಮೇಲಿನ ಚಿತ್ರವಾಗಿಸಿದರು ಮನೆಯೊಳಗಿನ ಗೃಹಲಕ್ಷ್ಮಿಯಾಗಿಸಿದರು. ಇಂದು- ನಿನ್ನ ಉಬ್ಬುತಗ್ಗುಗಳ ಅಳೆಯುತ್ತಾ ಶೋಷಿಸುತ್ತಿದ್ದಾರೆ. ನಿನ್ನ ದೇಹದ ಬಳಕುವಿಕೆಯ ಸೆರೆಹಿಡಿಯುತ್ತಾ ಶೋಷಿಸುತ್ತಿದ್ದಾರೆ. ಅವರು...

ಓಂ ಶಾಂತಿ ಶಾಂತಿ ಓಂ

ಕಲಿಯಲಿಲ್ಲ ನಾವು ಕೃಷ್ಣ, ಕ್ರೈಸ್ತ, ಪೈಗಂಬರ, ಬುದ್ಧ, ಮಹಾವೀರ, ಸಂತರೆಲ್ ಬೋಧಿಸಿರುವ ಶಾಂತಿ ಮಂತ್ರ, ಕಲಿಯಲಿಲ್ಲ ನಾವು ಗೀತೆ ಬೈಬಲ್ ಕುರಾನಿನಿಂದ ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ, ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ! ಮಾರಿಕೊಂಡೆವು ನಾವು ನಮ್ಮ...