ಅಸಹಾಯಕತೆ

ಅವೀರ್ಭವಿಸಿದೆ ಮೂರ್ತ ಅಮೂರ್ತಗಳ ನಡುವಿನ ಸ್ವರೂಪ ಮುಂದಕ್ಕಿಡುವ ಹಾದಿ ಹಿಂದಕ್ಕೋಡುತಿದೆ ಅಲ್ಲೊಂದು ಕಡಲು ಮೇಲೊಂದು ಮುಗಿಲು ದಾಟಿ ನದಿ ತಟವ ಕಾಡು ಗಿರಿಯ ಹಾದು, ಮುಗಿಲಂಚನು ಮುಟ್ಟುವಾಗಿನ ಸಂಭ್ರಮ ಗೆಲುವ ಮೀಟಿ ಪಿಸು ಪಿಸು...

ಅಂತ್ಯವಲ್ಲ

ಇಷ್ಟಿಷ್ಟೆ ಆವರಿಸಿದ್ದು ಬದುಕಿಗೂ ವಿಸ್ತಾರವೇ ತೂಗಿದಷ್ಟು ತೂಕ ಅಹಂಮಿಕೆ ಭಾರ ದೂರ ದೂರ ನೇಪಥ್ಯಕ್ಕೆ ಸರಿದು ಉಳಿದುದೊಂದೇ ಒಂದು ರುದ್ರವಿಶಾದದ ಭಾವ ಮಿಕ್ಕೆಲ್ಲವೂ ಸೊನ್ನೆ ಘೋರತೆಯ ಶೂನ್ಯ ಸೊನ್ನೆಯ ಪಕ್ಕಕೆ ಅಂಕೆಯು ಆಗಷ್ಟೇ ಸೊನ್ನೆಗೆ...

ಸ್ವಾಗತ

ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ ಜೇಡನ ಸಮೇತ ಕಿತ್ತೆಸೆದಿರುವೆ ಬರುವುದಾದರೆ ಇಂದೆ ಬಂದುಬಿಡು ತೋರಣವಿಲ್ಲ ಬಾಗಿಲಿಗೆ ಹೊಸಿಲಲ್ಲಿಲ್ಲ ರಂಗೋಲಿ ಎಂದೆಲ್ಲ ಸಬೂಬುಬೇಡ ನೀ ಬಂದೇ ಬರುವೆಯಾದರೆ...

ನಾಳೆಗಳಿಲ್ಲದ ಬದುಕು

ಮೌನದ ಚಿಪ್ಪೊಳಗೆ ನುಸುಳಿ ಗುಪ್ತಗಾಮಿನಿಯಂತೆ ಹರಿದು ಅಜ್ಞಾನದಲ್ಲಿಯೇ ಅಸ್ತಿತ್ವವಿಲ್ಲದ ಅಗೋಚರಗಳ ನಡುವೆ ನರಳಿ ಬೂದಿಯಾದ ಕನಸುಗಳು ಹೊರಳಿ ಬದುಕ ಬಯಲ ದಾರಿಯಲಿ ಮೇಣದಂತೆ ಕರಗಿ ಕೊರಗಿ ಹುಟ್ಟೇ ಶಾಪ, ತಾರತಮ್ಯ ವಾಸ್ತವ ನಾಳೆಗಳಿಲ್ಲದ ಬದುಕಲಿ...

ದ್ರೌಪದಿ

ಗಂಡಂದಿರೈವರು ನಿನಗೆ ಪಾಂಚಲಿ ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ ಒಬ್ಬಳೊ ನಾಕಾಣೆ ಯಾರದೊ ಶೃಂಗಾರವ ಕಂಡ ರೇಣುಕೆ, ಪತಿಯ ಕೋಪಕೆ ಬಲಿಯಾಗಿ ಸುತನಿಂದಲೇ ಶಿರ ಛೇದಿಸಿಕೊಂಡಳು ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ ಕಲ್ಲಾದಳು ಕೈಹಿಡಿದವನಿಂದಲೇ ರಾವಣ...

ಕುಂಟಾಪಿಲ್ಲೆಯಾಟ

ಚಂಗನೆ ಚಿಮ್ಮಿ ಗಕ್ಕನೆ ದಾಟಿ ಗೆರೆ ಮುಟ್ಟದ ಜಾಣ್ಮೆ ಕನಸಿನಂಗಳವ ಮುಟ್ಟಿ ದಾಟಿದೆ ಮನೆಯಿಂದ ಮನೆಗೆ ನನ್ನ ಫೇವರೇಟ್ ಬಚ್ಚೆ ಮನ ಭಾರವನೊಮ್ಮೆ ಇಳಿಸಿ ಗೆದ್ದ ಹೆಮ್ಮೆ ಮಿನುಗಿದೆ ಕಣ್ಬೆಳಕು ಥಳಥಳ ನಕ್ಷತ್ರಗಳ ಗೊಂಚಲು...

ಬೆಂಕಿ

ಗೋಡೆ ಗೋಡೆಗಳಲಿ ಅಲಂಕಾರಕ್ಕಿದ್ದ ಕತ್ತಿ ಚೂರಿಗಳಿಗೆಲ್ಲ ಹೊಳಪೋ, ಹೊಳಪು ಹರಿತವಹೆಚ್ಚಿಸುವ ಭಾರಿ ಹುರುಪು ಮಸೆವ ಕಲ್ಲಿಗೂ ಬಿಡುವಿಲ್ಲದ ಕೆಲಸ ಮನಮನದಲೂ ಕತ್ತಿ ಮಸೆವ ಬಿರುಸು ಸೈತಾನದ ಶಕ್ತಿಗೂ ಮತಾಂಧತೆಗೂ ಗಳಸ್ಯ ಕಂಠಸ್ಯ ಮಾನವತೆಗೂ ಬಿರುಕು...

ತಾಯಿಯ ಹಾಡು

ಅತ್ತೇ ಮಾವರಿಗಂಜಿ ಸುತ್ತೇಳು ನೆರೆಗಂಜಿ ಮತ್ತೇ ಪತಿ, ಭಾವ ಮೈದುನರಿಗಂಜಿ ಅವರಿಗಂಜಿ, ಇವರಿಗಂಜಿ ಅಂಜಿ, ಅಂಜಿ ಅಳುಕುತ್ತಲೇ ಬಾಳುವ ಕರ್ಮ ಬೇಡ ಮಗಳೇ ಎಲ್ಲರಿಗಂಜಿ ಬಾಳಿದವರೆಲ್ಲ ಕಾಲನ ಛಾಯೆಯ ತಿಮಿರವಾದರು ಹೊಸಲಿನಾಚೆಯ ಬೆಳಕ ಕಾಣದಾದರು...

ಅವ್ವ

ರೊಟ್ಟಿ ತಟ್ಟೀ ತಟ್ಟೀ ಅವ್ವನ ಕೈಯ ರೇಖೆಗಳು ಕರಗಿ ಚಿಕ್ಕೀ ಬಳೆಗಳು ಮಾಸಿವೆ ಒಲೆಯ ಖಾವಿಗೆ ಅವಳ ಬೆವರ, ಹನಿಗಳು ಇಂಗಿ ಆವಿಯಾಗಿ ಮೋಡ ಕಟ್ಟಿವೆ ಮನೆಯ ಮಾಡಿನ ಮೇಲೆ ಅವಳೀಗ ನೀಲಿ ಆಕಾಶದ...

ಬಿರುಕು

ಹೀಗೆ, ಹೀಗೆಯೇ ಇದ್ದೆ ಒಂದಂಗುಲವೂ ಆಚೀಚೆ ಹಾರದೆ ದಾಟದೆ ಯಾರಿಟ್ಟರೋ ಶಾಪ ಬರಿ ಪರಿತಾಪ ಒಳಗಿಹುದೆಲ್ಲವೂ ಮಿಥ್ಯೆ ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ ಗೆದ್ದರೂ ಗೆಲುವಲ್ಲ ರಾಘವನದೇ ಪ್ರತೀಕ್ಷೆ ಯಾವುದೋ ನಿರೀಕ್ಷೆ ಗತಿತಪ್ಪಿದ ವಿವೇಚನೆ...